Monday, August 30, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಹತ್ತು

ಬರಹಗಾರನ ಕಂಫರ್ಟ್ ಜೋನ್‌ ಬಗ್ಗೆ ನಿಮಗೇನನ್ಸುತ್ತೆ. ಅದನ್ನ ಒಬ್ಬ ಲೇಖಕ ಮೀರೋದು ಅಂದ್ರೆ ಏನು, ಹೇಗೆ? 


ಯಾವಾಗ್ಲು ಒಬ್ಬ ನಿಜವಾದ ಕಲಾವಿದನಿಗೆ ಯಾವಾಗ್ಲುನು ಅವನು ಏನನ್ನು ಮಾಡಿದ್ದಾನೊ ಅದಕ್ಕೆ ಮೀರಿದ್ದನ್ನ ಮಾಡ್ಬೇಕು ಅನ್ನೋ ಒಳತುಡಿತ ಅವನಿಗಿರುತ್ತೆ. ಮತ್ತೆ ಅದರ ಬೌಂಡ್ರೀಸ್ ಎಲ್ಲಿರುತ್ತೆ ಅವ್ನಿಗೆ ಗೊತ್ತಿರಲ್ಲ. ಹಾಗೆ ಹುಡುಕ್ಕೊಂಡು ಹೋಗೋದೆ ಒಂದು ಕೆಲಸ ಆಗಿರುತ್ತೆ. ಸೊ ಹಾಗೆ ಒಂದು boundries draw ಮಾಡ್ಕೊಂಡಿದ್ರೆ ಅವ್ನು, next time ಅದನ್ನ cross ಮಾಡ್ತಾನವ್ನು. ಸೊ ನನ್ ಪ್ರಕಾರ ನಿಜವಾದ ಲೇಖಕರಿಗೆ comfort zone ಅಂತ ಏನಿರಲ್ಲ. ಹೀಗಾಗಿ ನೀವು ಯಾವುದೇ ಉತ್ತಮ ಅಥವಾ ಮಹತ್ವದ ಲೇಖಕರನ್ನ ನೋಡಿದ್ರೆ ಅವ್ರ ವಿಷಯ ವ್ಯಾಪ್ತಿ ಇರಬಹುದು ಅಥವಾ ಅವರು formsನ್ನ persue ಮಾಡಿರೋ ವಿಧಾನ ಇರಬಹುದು, ಅಲ್ಲಿ ಒಟ್ಟಾರೆ ಸಾಹಿತ್ಯವನ್ನ ಒಂದು structure ಆಗಿ persue ಮಾಡಿರೋ ವಿಧಾನದಲ್ಲಿ ಸಿಕ್ಕಾಪಟ್ಟೆ ವೈರುಧ್ಯಗಳು ನಮಗೆ ಕಾಣುತ್ತೆ. ವೈರುಧ್ಯ ಅಂತ ನಮಗೆ ಕಾಣ್ತಾ ಇರುತ್ತೆ, ಅಷ್ಟೆ. ಆದ್ರೆ ಅವರು comfort zoneನ್ನ ತಿರಸ್ಕಾರ ಮಾಡ್ಬಿಟ್ಟು ಬೇರೆ ಹುಡುಕ್ತಾ ಇರ‍್ತಾರವ್ರು. ಇದನ್ನೆ ಸ್ವಲ್ಪ ವಿಸ್ತರಣೆ ಮಾಡಿ ಹೇಳೋದಾದ್ರೆ, ಈಗ ನಾನು ಕತೆಗಳನ್ನ ಪ್ರಧಾನವಾಗಿ, ಬರ‍್ದಿದೀನಿ. ಕಾದಂಬರಿಗಳ ಬಗ್ಗೆ ನಾವು ಚರ್ಚೆ ಮಾಡಿದೀವಿ. ಬಟ್ ಅದನ್ನ ಮೀರಿ ನನಗೆ ಕೆಲವು ವಿಷಯಗಳನ್ನ ಹೇಳೋದಿತ್ತು ನನಗೆ, ಈಗ ಮುಂದೇನೂ ಹೇಳೋದಿದೆ. ಸೊ, ಎಷ್ಟೋ ವರ್ಷಗಳಿಂದ ಕತೆಯಲ್ಲಿ ಬರದೆ ಇರೋದನ್ನ ಎಲ್ಲೆಲ್ಲೊ ಬರೆದು ಬರೆದು ಬರೆದು ಒಗೆದಿದ್ದೆ ನಾನಾವಾಗ. ಸೊ, ‘ನೇರಳೆ ಮರ’ ಆ ಕಾರಣಕ್ಕಾಗಿ ನಾನು ಬರೀಬೇಕಾಯ್ತು. ಯಾಕಂದ್ರೆ ಅದಕ್ಕೆ ಒಂದು ಕಥಾನಕದ ಚೌಕಟ್ಟು ಅಥವಾ ಕತೆ ಹೇಳುವಂಥ ಸಂಗತಿಗಳು, ಘಟನೆಗಳು, ಹರಹು - ಅದೆಲ್ಲ ಏನಿಲ್ಲ. ಬಟ್ ಅಲ್ಲಿರೊ ಅನುಭವ ಬಹಳ ಮಹತ್ವದ್ದಾಗಿದೆ; ಅದು ಬಹಳ ಚಿಕ್ಕದಿದೆ. ಸೊ ಕತೇಲಿ ಹೊಂದಲ್ವಲ್ಲ ಏನ್ಮಾಡೋದು ಅಂತ ನಾನು ಕೆಲವು artificial ಕಥಾಪಾತ್ರಗಳನ್ನ ಸೃಷ್ಟಿ ಮಾಡಿ - ಹಂಗೆಲ್ಲ ನಾನು ಮಾಡೋದಿಲ್ಲ. ಕತೆಗೂ ಹೊಂದಲ್ಲ ಅದು ಇನ್ನೊಂದಕ್ಕೂ ಹೊಂದಲ್ಲ. ಸೊ, ಯಾವುದಕ್ಕೆ ಹೊಂದುತ್ತೆ ನೋಡೋಣ ಅಂತ ನಾ ಬರ‍್ದಿದೀನಿ.

ಸೊ, ಅದಕ್ಕಾಗೆ ಸಾಮಾನ್ಯವಾಗಿ ಏನ್ಮಾಡ್ತಾರೆ ಅಂದ್ರೆ ಈಗ ಸಿದ್ಧ ಮಾದರಿಯೊಳಗೆ, ಕೆಲವ್ರು ಏನ್ಮಾಡಬಹುದು ಅಂದ್ರೆ ಪ್ರಬಂಧ ಇದೆ, ಲಲಿತ ಪ್ರಬಂಧ ಇದೆ ಅಂದ್ಬಿಟ್ಟು ಲಲಿತ ಪ್ರಬಂಧವೊಂದಕ್ಕೆ suit ಆಗೋ ತರಾನೆ ಬರೀತಾರೆ. ಬಟ್ ನನಗೆ ಆ ತರ ಬರಿಯಕ್ಕಾಗಲ್ಲ. ಯಾಕಂದ್ರೆ ನನಗೆ so called ಲಲಿತ ಪ್ರಬಂಧಗಳ ಸಿದ್ಧ ಮಾದರಿಗಳ ಬಗ್ಗೆ ಒಪ್ಪಿಗೆಯಿಲ್ದೆ ಇರಬಹುದು, contradictions ಇರಬಹುದು. ಕೆಲವ್ರೆಲ್ಲ ಚೆನ್ನಾಗಿ ಬರೀತಾ ಇರಬಹುದು, ಅದು ಬೇರೆ ವಿಷಯ. ನನಗೆ ಸಿದ್ಧ ಮಾದರಿನ ಬಿಟ್ಟು ಬೇರೆ ಏನೋ ಒಂದು ಮಾಡ್ಬೇಕು ಅಂತನ್ಸುತ್ತೆ. ಸೊ ಹಾಗಾಗಿ ಅಲ್ಲಿಯೂ ನಾನೇನೊ ಪದಗಳನ್ನ ಗಮನದಲ್ಲಿಟ್ಟುಕೊಂಡು ಬರೆದಿಲ್ಲ. ಬಟ್ ಆದರುನು ಅವುಗಳ ಅನುಭವದ ವ್ಯಾಪ್ತಿ ಅಷ್ಟೆ ಇದೆ. ಇದಕ್ಕೆ ವಿಶಿಷ್ಟವಾಗಿದೆ ಅದು. ಕತೆಗಳಲ್ಲಿ ತಗೊಂಡು ಬರೋಕ್ಕೆ ಆಗದೆ ಇರೋವಷ್ಟು ವಿಶಿಷ್ಟವಾಗಿರೋದ್ರಿಂದ ಅದಕ್ಕೆ ರೂಪಕಗಳೆಂದು ಕರೆದೆ ನಾನು. ಅದನ್ನ ಬರೆದ್ಮೇಲೆ ಪಬ್ಲಿಷ್ ಮಾಡೋದಾದ್ರೆ ಓದೋವರಿಗೆ ಮಾತ್ರ ಬಹಳ ಪ್ರಾಬ್ಲೆಮ್ ಆಗಿ ಬಿಡುತ್ತೆ. ಏನಿದು, ಕತೆನಾ ಇದು, ಪ್ರಬಂಧನ ಇದು... ‘ನೀವು ತಲೆಕೆಡಿಸ್ಕೊಬೇಡಿ, ಇದು ರೂಪಕ ಅಂತ ಒಂದು ಹೊಸಾ ವಿಧಾನ ಇದು, ಸೊ ಇಲ್ಲಿ ಬರೇ ರೂಪಕಗಳೇ ಕಿಕ್ಕಿರಿದಿವೆ. ಅದ್ರಿಂದ ಇಲ್ಲಿ ಏನಾದ್ರು ನಿಮಗೆ ಸಿಗತಾ ಇದ್ರೆ ನನಗೆ ಸಂತೋಷ ಆಗುತ್ತ್ತೆ, ಸಿಕ್ಲಿಲ್ಲ ಅಂದ್ರೆ ಬಯ್ಕೊಳಿ ನನ್ನ ಪರವಾಗಿಲ್ಲ’ ಅಂತೀನಿ. ಬಟ್ ಅಲ್ಲೇನು ನಿಮಗೆ ಲಲಿತ ಪ್ರಬಂಧಗಳಿಗೆ ಬೇಕಾಗೊ ಚೌಕಟ್ಟು ಇಲ್ಲ ಅಲ್ಲಿ. ಕತೆ ಅಂತಂದ್ರೆ ಕತೆಗೆ ಬೇಕಾದಂಥ ಒಂದು structure ಇಲ್ಲ. ಕೆಲವು ಸಲ ಕೆಲವು ಕಡೆಗೆ poetry ಅಷ್ಟೆ abstract ಇದೆ, ಕೆಲವು ಬರಹಗಳು. ಬಟ್ ಅವು ನನಗನಿಸಿವೆ ಅವು ಮತ್ತು ಹಾಗೇನೆ ಹೇಳ್ಬಹುದದನ್ನ. ಅದ್ರಿಂದನೇ ಹಾಗೆ ನಾನು ಬರ‍್ದಿದೀನಿ. ಮತ್ತೆ comfort zone ಅಂತೇನೂ ಇರಲ್ಲ ಒಬ್ಬ ಲೇಖಕನಿಗೆ, ನಿಜವಾದ ಲೇಖಕನಿಗೆ. ಮತ್ತೆ ಹಂಗೇನಾದ್ರು ಅನಿಸ್ತಾ ಇದ್ರೆ ಅದು, ಅವನು ಒಬ್ಬ ಸಾಮಾನ್ಯ ಜನಪ್ರಿಯ ಲೇಖಕನಾಗಿ ತನ್ನ ಜೀವನವನ್ನ pathetic ಆಗಿ ಕೊನೆ ಮಾಡ್ಕೊತಾನೆ.


ಸರಿ ಈಗ ವೈಯಕ್ತಿಕ ನೆಲೆಯ ಕತೆಗಳನ್ನ ಬರೆಯೋನು ಅಥವಾ ರೊಮ್ಯಾಂಟಿಕ್ ಲವ್ ಸ್ಟೋರಿಗಳನ್ನ ಬರೆಯೋನು ಇದಾನೆ ಅಂತ ತಗೊಳ್ಳಿ. ಜನಪ್ರಿಯ ಪತ್ರಿಕೆಗಳಲ್ಲಿ ಬರೆಯೊ ಬಹುಪಾಲು writers ಹಂಗೆ ಇರ‍್ತಾರೆ. ಯಾವ್ದೇ ಜನಪ್ರಿಯ ಲೇಖಕರನ್ನು ತಗೊಂಡ್ರು ನೀವು, ಅವರು ತಮ್ಮ first ಕತೆಯನ್ನ ಇವತ್ತಿನವರೆಗೂ ಮೀರಿರಲ್ಲ ಅವರು. Artificial language use ಮಾಡಿ ಕೃತಕವಾದ ಪ್ರೇಮಕತೆಯನ್ನ ಬರೆಯೋ ಲೇಖಕರಿಗೆ ಅದೇ ಅವರ comfort zone. ಅದನ್ನ ಮೀರಿ ಅವನಿಗೆ ಬರೆಯೋಕ್ಕೆ ಸಾಧ್ಯವಾಗಲ್ಲ ಅಂತಂದ್ರೆ, as a writer he is failed. ಸೊ, ಅವ್ರಿಂದ ನಾವು expect ಮಾಡೋದಿದ್ಯಲ್ಲ, ಅದರ ಅಗತ್ಯ ಇಲ್ಲ. ಈಗ ವೈಯಕ್ತಿಕ ನೆಲೆಯಲ್ಲಿ ಆರಂಭಿಕ ಹಂತದಲ್ಲಿ ಬರೀತಾ ಇರೊ ಒಬ್ಬ ಕತೆಗಾರ ಇಪ್ಪತ್ತು ವರ್ಷಗಳಾದ ಮೇಲೂ ಅದನ್ನೆ ಬರೀತಾ ಇದಾನೆ ಅಂದ್ರೆ ಅವನು ಅದ್ರಲ್ಲೆ ಕೊನೆಯಾಗ್ತಾನೆ ಅಂತ ನಂಬಬಹುದು. ಅದೇ ನೀವು ಸಮಷ್ಠಿ ಪ್ರಜ್ಞೆ ಒಳಗೊಳ್ಳಬೇಕು ಅಂತ ಒಬ್ಬ ಕ್ರಿಯಾಶೀಲ, ಸೂಕ್ಷ್ಮ ಸಂವೇದನೆಗಳಿರೋ ಲೇಖಕನಿಗೆ ನಾವು ಹೇಳಬೇಕಾಗಿಲ್ಲ. ಅವನು ನೀವು ಹೇಳ್ದೇನೆ ಅವನು ತನ್ನ comfort zoneನ್ನ ಮೀರಿರ‍್ತಾನೆ, ಬರೆದಿರ‍್ತಾನೆ. ಮತ್ತು ಅದು ಅವನಿಗೆ ಕ್ಲೀಷೆ ಅನ್ಸಿದರೆ ಅದನ್ನ ಮೀರಿ ಇನ್ನೊಂದು ಬರೀತಾನೆ. 


Poetryಯಲ್ಲಿ ಕೆಲವು ಬಹಳ ಒಳ್ಳೆಯ ಉದಾಹರಣೆಗಳು ಸಿಗುತ್ತೆ ನಿಮ್ಗೆ. ಈಗ poetryಯಲ್ಲಿ ಶಿವಪ್ರಕಾಶ್ ತರದ poetsನ್ನ ನೋಡಿದ್ರೆ ನೀವು ಇದು ಗೊತ್ತಾಗುತ್ತೆ. ಅವರು ಬರೆದ ಎಲ್ಲಾ ಕವಿತೆಗಳನ್ನ ನೋಡಿ. ಕವಿತೆಗಳನ್ನ ಓದೋ ವಿಧಾನ ಬೇರೆ ಇರುತ್ತೆ ಅಂತ ಆ ತರ ಹೇಳ್ತಾ ಇದೇನೆ; ಅವರು ಬರೆದ ಎಲ್ಲಾ ಕವನಗಳು ಶ್ರೇಷ್ಠ ಆಗಿಲ್ದೆ ಇರಬಹುದು. ಬಟ್ ಅವ್ರು ಪ್ರಾಯೋಗಿಕವಾಗಿ, ಒಟ್ಟಾರೆ ಅವರ ಎರಡು ಮೂರು ಸಂಕಲನಗಳನ್ನ ನೀವು ನೋಡಿದ್ರೆ, ಎಷ್ಟು ಮಹತ್ವವಾದ ವಿಚಾರಗಳನ್ನು ಇವರು ಚಿಂತನೆ ಮಾಡಿದಾರೆ, ಬೇರೆ ಎಲ್ಲರಿಗಿಂತಲೂ ಇವರು ಭಿನ್ನವಾಗಿ ಬರೀತಾ ಇದಾರಲ್ಲ ಅಂತನ್ಸುತ್ತೆ. ಕೆಲವು ಸಲ ತಿರುಮಲೇಶರ ಬಗ್ಗೆನು ಆ ತರ ನನಗನಿಸುತ್ತೆ. ಅಂದ್ರೆ ಅವರು conscious ಆಗಿ ಹುಡುಕ್ಕೊಂಡು ಹೋಗಿ, ಯಾವ್ಯ್ದಾವ್ದೋ ವಿಷಯಗಳನ್ನು ಓದಿ, ನೋಡಿ,Encyclopedia ಎಲ್ಲ ಓದಿ ಒಂದು ಕವಿತೆ ಬರೀತಾರವ್ರು. ಅಂದ್ರೆ definately comfort zoneನಲ್ಲಿದೀನಿ ಅಂತ ತಿಳ್ಕೊಳ್ಳದೆ ಇರೋದ್ರಿಂದಾನೆ ಅದು ಸಾಧ್ಯವಾಗೋದದು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, August 25, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಒಂಭತ್ತು

ಅಕ್ಷರ ವ್ಯಾಮೋಹ ಮತ್ತು ಅಕ್ಷರ ವೈರಾಗ್ಯಗಳ ನಡುವಿನ ಒಂದು ಸಂತುಲಿತ ಮನಸ್ಥಿತಿಯನ್ನು ಬರಹಗಾರ ರೂಪಿಸಿಕೊಳ್ಳುವುದು ಹೇಗೆ? ಇದು ಎಲ್ಲಾ ಬರಹಗಾರರಲ್ಲಿಯೂ ಇರುತ್ತೋ ಇಲ್ವೊ ಗೊತ್ತಿಲ್ಲ, ನಿಮ್ಮ ಬರವಣಿಗೆಯಲ್ಲಂತೂ ಕಾಣಿಸಿದೆ.


ಎಲ್ಲಾ ಲೇಖಕರಿಗೂ ಇರಬಹುದೋ ಏನೋ ನನಗೊತ್ತಿಲ್ಲ. ಇದು ಈ ತರದ contradiction ಯಾಕೆ ಬರುತ್ತೆ ಅಂದ್ರೆ ನನಗೆ, ಈಗ ಈ ಸೂಕ್ಷ್ಮತೆ, ಸಾಹಿತ್ಯದ ಸೂಕ್ಷ್ಮತೆ ಅಂತೇನೂ ಅಲ್ಲ, ಅದು ಕಾರಣ ಇದಕ್ಕೆ. ಈಗ ನೋಡ್ರಿ ನಾನು ಕಳೆದ ವಾರ ಎಲ್ಲೋ ಒಂದು ಸಾಹಿತ್ಯ ಸಂವಾದಕ್ಕೆ ಹೋಗಿದ್ದಾಗ ಒಬ್ಬರು ನನಗೆ ಕೇಳಿದ್ರು. ನಿಮಗೆ ಸಾಹಿತ್ಯ ಸಿದ್ಧಾಂತ ಮುಖ್ಯನೊ ಜೀವನದ ಸಿದ್ಧಾಂತ ಮುಖ್ಯನೊ ಅಂತ ಅವರು ಕೇಳಿದ್ರು. ನನಗೆ ತಕ್ಷಣ ಉತ್ತರ ಹೇಳ್ಲಿಕ್ಕಾಗಲಿಲ್ಲ. ಈವಾಗ ನಾನು ಯೋಚನೆ ಮಾಡ್ತಾ ಇದೀನಿ. ನನಗೆ actually ಎರಡೂ ಬೇರೆ ಬೇರೆ ಅಲ್ವೇ ಅಲ್ಲ. ಈ ಸಾಹಿತ್ಯದ ಸಿದ್ಧಾಂತ ಮತ್ತು ಜೀವನದ ಸಿದ್ಧಾಂತ ಎರಡೂ ಬೇರೆ ಆಗಿಲ್ಲ. ಏನನ್ನ ನಾವು ಮಾತಾಡಬೇಕು ಅಂತ ಇದೀವೋ ಸಾಹಿತ್ಯದ ಮೂಲಕ ಅದು ಜೀವನ ಸಿದ್ಧಾಂತವೂ ಆಗಿದೆ. ಅಥವಾ ಎರಡೂ ಒಂದಕ್ಕೊಂದು ಅದು. ಅದರದ್ದು ಇದಕ್ಕಿದೆ, ಇದರದ್ದು ಅದಕ್ಕಿದೆ. ಆದ್ರೆ ಕೆಲವು ಸಲ ಏನಾಗುತ್ತಂದ್ರೆ, ಈ ಸಾಹಿತ್ಯ ಸಿದ್ಧಾಂತ ಅಂತ ನಾವು ಹೇಳ್ತಾ ಇದ್ದೀವಲ್ಲ, ಅಂದ್ರೆ ಈ ಹೊರಗಡೆಯಿಂದ ತಗೊಂಡು ಬಂದು ಹೇರತಾ ಇರುವಂಥ ಸಿದ್ಧಾಂತಗಳು ಅವು, ಅವು ಜೀವನದ ಸಿದ್ಧಾಂತ ಅಲ್ಲ. ಜೀವನದಿಂದ ಸಾಹಿತ್ಯ ರೂಪುಗೊಂಡಿದೆ. ಜೀವನವನ್ನು ನೋಡಿ ನಾವು ಸಾಹಿತ್ಯವನ್ನ ಬರಿದಿದೀವಿ ಮತ್ತು ಅದರಿಂದ ಸಾಹಿತ್ಯದ ಸಿದ್ಧಾಂತ ರೂಪುಗೊಂಡಿದೆ ಅಥವಾ ರಾಜಕೀಯ ಸಿದ್ಧಾಂತ ರೂಪುಗೊಂಡಿದೆ. ಮೊದಲು ಜೀವನ. ಆಮೇಲೆ ಉಳಿದಿದ್ದೆಲ್ಲ. ಸೊ, ಅದು ಬೇರೆ ಇದು ಬೇರೆ ಅಂತ ನಾನು ನೋಡಲ್ಲ.

ಆದ್ರೆ ಕೆಲವರಿಗೆ ಹೀಗೂ ಅನ್ನಿಸಬಹುದು. ಅಂದ್ರೆ ಸಾಹಿತ್ಯದಲ್ಲಿ ನಾನು ಹೇಳ್ತಾ ಇರೋದು ಬೇರೆ ಇದೆ, ಸಾಹಿತ್ಯದ ಆದರ್ಶಗಳು, ಸಾಹಿತ್ಯದ ಉದ್ದೇಶಗಳು ಬೇರೆ ಇದೆ, ಸೊ ಜೀವನವೇ ಬೇರೆ ಇದೆ, ಇದನ್ನ ನಾನು ಬಳಸಿಕೊಳ್ತ ಇದೀನಿ ಅಂತನ್ನೋ ನಿಲುವಿದು. ಸೊ, ಸಾಹಿತ್ಯ ನನಗೆ ಬೇಕಾಗಿರೋದನ್ನ ಪಡೆಯೋದಕ್ಕೆ ಒಂದು ಮಾರ್ಗ ಅಷ್ಟೆ ಅಂತ ತಿಳ್ಕೊಂಡಿರೋದ್ರಿಂದ ಈ ತರದ ಚರ್ಚೆ ಪದೇ ಪದೇ ನಮ್ಮ ಸಮಾಜದಲ್ಲಿ ಬರ್ತಾ ಇರುತ್ತೆ. ಆದ್ರೆ, ಎರಡೂ ಬೇರೆ ಬೇರೆ ಅಲ್ಲ ಅವು. 
ಈ contradiction ಯಾಕೆ ಬರಹಗಾರನಾಗಿ ನನಗೆ ಬರ್ತಾ ಇದೆ ಅಂದ್ರೆ, ನನಗೆ ಎರಡೂ ಬೇರೆಯಲ್ಲ. ಬಟ್ ನಾನು ಪ್ರತ್ಯೇಕವಾಗಿಲ್ಲ ಸಮಾಜದಿಂದ. ನಾನು ಸಮಾಜದ ಭಾಗವಾಗಿದೀನಿ. ಸೊ, ಹಾಗಿದ್ದಾಗ ಈ ಸಮಾಜದ ಸಾಹಿತ್ಯ ಒಂದಿದೆಯಲ್ಲ, ಅದ್ರ ಭಾಗಾನು ನಾನಾಗಿದೀನಿ. ಸಮಾಜದ ಭಾಗಾನೂ ಆಗಿದೀನಿ, ಸಮಾಜದಿಂದ ಸೃಷ್ಟಿಯಾಗೋ ಸಾಹಿತ್ಯದ ಭಾಗಾನೂ ಆಗಿದೀನಿ. ಈ ಸಮಾಜದಿಂದ ಸೃಷ್ಟಿಯಾಗ್ತಾ ಇರೋ ಸಾಹಿತ್ಯದ ಭಾಗ ಇದೆಯಲ್ಲ. ಸಾಹಿತ್ಯಿಕವಾಗಿ ಈಗ ನಾವು ತಲುಪಿರೋ ಒಂದು ಹಂತವನ್ನ ಗಮನಸಲ್ಲಿಟ್ಟುಕೊಂಡು ನೋಡಿದ್ರೆ, ನವೋದಯದಲ್ಲಿ ಇದ್ದ ಒಂದು ಭಾಷೆಯ ತಾಜಾತನ, ಅದರ ಅಗತ್ಯಗಳು ಏನಿತ್ತು, ಅದನ್ನ ಮೀರಿ ನಾವು ಯಾವ್ದೋ ಒಂದು ಹಂತದಲ್ಲಿದೀವಿ. ಈ ಹಂತದಲ್ಲಿ ನಮಗೆ ಬೇರೆ ಬೇರೆ ಪರಿಕರಗಳಿಂದ ಸೌಕರ್ಯಗಳು ಅಥವಾ ಪ್ರಯೋಜನಗಳಿವೆಯಲ್ಲ, ಅವೆಲ್ಲವನ್ನೂ ನಾವು ಯಾವುದೋ ಕಾರಣಕ್ಕಾಗಿ, ಅಂದ್ರೆ ಸಾಹಿತ್ಯದ ಕಾರಣಕ್ಕಾಗಿ ನಾವು ಬಳಸ್ಕೋತಾ ಇದ್ದಿದ್ರಿಂದ ಎಷ್ಟೋ ಸಲ ನನಗೆ ಅನಿಸುತ್ತೆ, ಜೀವನವೇ ಮುಖ್ಯವಿದೆ ಆದ್ರಿಂದ ಜೀವನ ನಾವು ನಡೆಸಿದ್ರೆ ಸಾಕು, ಸಾಹಿತ್ಯ ಬರೆಯೋ ಅಗತ್ಯ ಏನಿದೆ ಅಂತ.

ಬಟ್ at the same time, ನನ್ ಒಳ್ಗಡೆ ಒಂದು ರಾಜಕೀಯ ಪ್ರಜ್ಞೆ ಇದೆ. ಮತ್ತೆ ಒಂದು ಸೈದ್ಧಾಂತಿಕ ಪ್ರಜ್ಞೆನೂ ಇದೆ ನನಗೆ. ಒಂದು, ನನಗೆ ವ್ಯಕ್ತಿಯಾಗಿ ಒಂದು ವ್ಯಕ್ತಿ ವಿಶಿಷ್ಟವಾದ ಪ್ರಜ್ಞೆ ಇದೆ. ಅದು ನಾನು ನಾನಾಗೇ ನನಗೆ ಅಂತ ಸೃಷ್ಟಿ ಮಾಡಿಕೊಂಡಿರೋದಲ್ಲ ಅದು. ನಾನು ಸಮಾಜದ ಭಾಗವಾಗಿರೋದ್ರಿಂದ ನನಗದು ಬಂದಿದೆ. ಜನರ ಭಾಗವಾಗಿರೋದ್ರಿಂದ ನನಗೆ ಬಂದಿದೆ. ಸೊ ನನ್ನ ವಿಶಿಷ್ಟತೆ ಜೊತೆಗೆ ಅವರದೂ ಕೆಲವು ವಿಶಿಷ್ಟತೆಗಳಿವೆ. ಇವು ಅವ್ರಿಗೆ ಗೊತ್ತಿಲ್ಲ ಅಂತಿಲ್ಲ. ಗೊತ್ತಿಲ್ದೆ ಇರುವಂಥ ಜಗತ್ತಿನ ಭಾಗಗಳೂ ಇವೆ. ಸೊ, ಗೊತ್ತಿರೋವ್ರುನು ಇದಾರೆ ಗೊತ್ತಿಲ್ದೆ ಇರೋವ್ರುನು ಇದಾರೆ. ಈಗ ನಾನು ಕತೆ ಬರೀತಾ ಇರೋವಂಥ ಮಾಳವ್ವ ಆಗಬಹುದು, ನನ್ನ ಕತೆಯಲ್ಲಿ ಪಾತ್ರವಾಗಿರೋ ಮಾಳವ್ವನೂ ಆಗಬಹುದು, ಅಥವಾ ‘ಹೊಳೆಬದಿಯ ಬೆಳಗು’ ನಲ್ಲಿ ಬರೋವಂಥ ಬೋಲ್ಡಿಬಾಬಾನೆ ಆಗಿರಬಹುದು, ಅವನ್ಯಾವತ್ತಾದ್ರೂ ಈ ಕತೇನ ಓದ್ತಾನ ಅಂದ್ರೆ, ಇಲ್ಲ ಓದಲ್ಲ ಅವನು. ಆದ್ರೆ, ಅವನು ಕತೆ ಓದ್ತಾನೊ ಇಲ್ವೊ ಅಂತನ್ನೋದು ನನಗೆ ಮುಖ್ಯ ಅಲ್ಲ. ಈ ತರದ್ದೆ ಒಂದು ಯಾವ್ದೋ ಒಂದು ಕಾಲಘಟ್ಟದಲ್ಲಿ, ಎಲ್ಲೋ ಒಂದು ಕಡೆಗೆ, ಇಂಥಾ ಜನಗಳು ಜೀವನವನ್ನ ಮಾಡ್ತಾ ಇದ್ದಾಗ, ಇಂತಹ ಸಂಕಷ್ಟಗಳು ಅವರಿಗೆ ಬಂದ್ವು ಮತ್ತು ಇಂಥಾದ್ದೇ ಒಂದು ಸಾಧ್ಯತೆಯನ್ನ ಅವರು ಕಂಡ್ಕೊಂಡ್ರು ಆ ಕ್ಷಣದಲ್ಲಿ, - ಅದು permanent solution ಅಲ್ಲ ಅದು, ಅಲ್ಲಿರೋದ್ಯಾವ್ದೇ ಆಗ್ಲಿ. ಇದು ನನಗೆ ಗೊತ್ತಿದೆ. ಸೊ ಇದನ್ನ ನಾನು ಬರೀದೇ ಇದ್ರೆ ನಾನು ಸಮಾಜಕ್ಕೆ ನಾನು ಏನಾದ್ರು ಒಂದು, ಭಾಗವಾಗಿ ನಾನು ಕೊಡ್ಬೇಕಾದ್ದು ಇರುತ್ತಲ್ಲ, ನಾನು ಪಡೆದುಕೊಂಡಿರೋದರ ಭಾಗವಾಗಿ ನಾನು ಕೊಡೋವಂಥ ಭಾಗನೂ ಇರುತ್ತೆ. ಅದಕ್ಕೆ ಅನ್ಯಾಯ ಮಾಡ್ತಾ ಇದ್ದೀನಿ ಅನ್ನೋವಂಥ, ಅನ್ಯಾಯ ಅಂತ ನಾ ಹೇಳಲ್ಲ, ಬಟ್ ನಾನು ಕೊಡೋದು ನನ್ನ ಕರ್ತವ್ಯ ಅಂತ ತಿಳ್ಕೊಂಡು ನಾನು ಬರೀತಾ ಇದೀನಿ. ಹಾಗೆ ಬರೀಬೇಕಾದ್ರೆ, ಈ contradictionನು ಇದೆ. ಹೊರಗಡೆಗೆ ನನಗೆ.


ಯಾವ್ದಕ್ಕಾಗಿ ಬಳಸ್ತಾ ಇದಾರೆ ಇವ್ರು, ಸಾಹಿತ್ಯದ ಉದ್ದೇಶ ಏನಿದೆ. ಮತ್ತು ಜೀವನದ ಉದ್ದೇಶ ಏನಿದೆ, ಎಲ್ಲಾದಕ್ಕಿಂತ ಮುಖ್ಯವಾಗಿ. ಜೀವನದ ಉದ್ದೇಶ ನಾನು ದಿನ ಬೆಳಗಾಗೋದ್ರಲ್ಲಿ ಪ್ರಸಿದ್ಧನಾಗಬೇಕು ಅಂತನ್ನೋದು ಖಂಡಿತಾ ಅಲ್ಲ. ಹಾಗಿದ್ದಾಗ ಅದಕ್ಕೆ ಬೇರೆ ಕೆಲವು ಕ್ಷೇತ್ರಗಳಿವೆ. ಬಟ್ ಯಾವ್ದೇ ಕ್ಷೇತ್ರ, ಯಾವ್ದೇ ಇದ್ರುನು, ಯಕ್ಷಗಾನನ ತಗೊಂಡ್ರು ಅಲ್ಲಿ ಅವನ ಪರಿಶ್ರಮ ಇದೆ. ಮುವ್ವತ್ತು, ನಲವತ್ತು ಐವತ್ತು ವರ್ಷದ ಪರಿಶ್ರಮ ಇದೆ. ಬಟ್ ಆ ಪರಿಶ್ರಮಕ್ಕೆ ಬೆಲೆ ಇದ್ಯಾ ಇಲ್ವಾ ಅನ್ನೋದು ಅವರಿಗೆ ಮುಖ್ಯ ಅಲ್ಲ. ಅವ್ರು ಆ ಕ್ಷಣದಲ್ಲಿ ತಾವು ಏನು ನಂಬಿಕೊಂಡು ಬಂದಿದಾರೋ ಜೀವನದ ಮೌಲ್ಯ ಅಂತಾನೆ ತಿಳ್ಕೊಳ್ಳಿ ನೀವು ಅಥವಾ ಅವರ ಜೀವನದ ಅಗತ್ಯ ಅಂತ ತಿಳ್ಕೊಳ್ಳಿ, ಅವರಿಗೆ ದುಡ್ಡು ಸಿಕ್ತಾ ಇದ್ರೆ ಅನ್ನೊ ಅರ್ಥದಲ್ಲಿ ನಾನು ಹೇಳ್ತಾ ಇದೀನಿ. ಬಟ್ ಅದನ್ನ ಪ್ರತಿಕ್ಷಣನು ಅವ್ರು perform ಮಾಡ್ತಾ ಇರ‍್ಬೇಕಾಗ್ತದೆ. ಆದ್ರೆ ಸಾಹಿತ್ಯಕ್ಕೆ ಮಾತ್ರ ಯಾಕೆ ಆ ತರ ಆಗಲ್ಲ ಅಂತ ಯಾವತ್ತೂನು ನನ್ನ ತೀವ್ರವಾಗಿ ಕಾಡ್ತಾ ಇರುತ್ತೆ. ಇಲ್ಲಿ ನನಗೆ ಅನುಕೂಲ ಜಾಸ್ತಿ ಇದೆ, accessibility ಜಾಸ್ತಿ ಇದೆ. ಬೇರೆ ಯಾವ್ದೇ ಕಲೆಗೆ ಹೋಲಿಸಿದ್ರೆ. ಎಲ್ಲಾ ಕಲೆನಲ್ಲೂ ಇದೆ ರಾಜಕೀಯ. ಇಲ್ಲ ಅಂತ ನಾನು ಹೇಳಲ್ಲ. ಬಟ್ ಇವ್ರಿಗೆ ಜಾಸ್ತಿ ಇದೆ. ಸೊ ಅದು ಜಾಸ್ತಿ ಇದೆ ಅಂತನ್ನೋ ಒಂದು ಕಾರಣಕ್ಕೆ ನಾವು ಅದರ ನಿಜವಾದ ಉದ್ದೇಶ ಇದೆಯಲ್ಲ ಅದನ್ನ ಸ್ವಲ್ಪ ಆಚೆಗಿಟ್ಟು, ಉಳಿದಿದ್ದೇ ಪ್ರಧಾನ ಅಂತ ಕಾಣ್ತಾ ಇದ್ದಾಗ ಏನಾಗುತ್ತೆ ಅಂದ್ರೆ ನನಗೆ ಗೊಂದಲಗಳು ಜಾಸ್ತಿಯಾಗುತ್ತೆ. ನನಗೆ ಒಬ್ಬ ಲೇಖಕನಾಗಿ. ಸೊ ಆವಾಗ ಇದು ಎಲ್ಲೋ ಒಂದು ಪಾತ್ರವಾಗಿನೊ, ಅಭಿಪ್ರಾಯವಾಗಿನೊ ಹೊರಗಡೆ ಬರ್ತಾ ಇರುತ್ತೆ. ಬಟ್ ಹಾಗಿರಬಾರ್ದು ಅಂತನ್ನೋದೆ ನನಗೆ ಅನಿಸ್ತಾ ಇರುತ್ತೆ ಯಾವಾಗ್ಲು. ಯಾಕಂದ್ರೆ ಅದ್ರ ಉದ್ದೇಶ ಅದಿಲ್ಲ. ಜೀವನದ ಉದ್ದೇಶವಾಗ್ಲಿ ಸಾಹಿತ್ಯದ ಉದ್ದೇಶವಾಗ್ಲಿ ಬೇರೆ ಇದೆ. ಅದೇ ಮುಖ್ಯ ನನಗೆ.
(ಚಿತ್ರಗಳು ನ್ಯಾಶನಲ್ ಜಿಯಾಗ್ರಫಿ ಫೋಟೋ ಗ್ಯಾಲರಿಯಿಂದ Mr James L Stanfield ಮತ್ತು James P Blair ಅವರ ಕೃಪೆ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Friday, August 20, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಎಂಟು

"ಕಾದಂಬರಿಯ ಅನನ್ಯತೆಗೆ ನಿಮ್ಮ ನಿರೂಪಣಾ ಕ್ರಮ ಹೆಚ್ಚು ಹತ್ತಿರವಿದೆ ಎನ್ನುವ ಬಗ್ಗೆ ಅನೇಕ ವಿಮರ್ಶಕರ ನಿಲುವಿನ ಬಗ್ಗೆ ಗೊತ್ತು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?" ಎಂದು ಕೇಳಿದ ಪ್ರಶ್ನೆಗೆ ಕೇಶವ ಮಳಗಿಯವರು ನೀಡಿದ ಉತ್ತರದ ಮುಂದುವರಿದ ಭಾಗ...

ಕನ್ನಡದಲ್ಲಿ ಯಾವಾಗ್ಲೂನು ಏನಾಗಿದೆ ಅಂದ್ರೆ, ಈಗ ಸಣ್ಣಕತೆಗಳು ಅಂದ್ರೆ ಮಾಸ್ತಿ ನಮ್ಮ ಗಮನದಲ್ಲಿದ್ದಾರೆ. ಅದಕ್ಕಿಂತ ಮುಂಚೆ ಹೇಳೋದಾದ್ರೆ ಪಂಜೆಯವರು ನಮ್ಮ ಗಮನದಲ್ಲಿದ್ದಾರೆ. ಸೊ ಅವರಿಬ್ರುನು ಈ ತರ ತಮ್ಮ ಮಾದರಿಯನ್ನ ರೂಢಿಸಿಕೊಂಡಿದ್ದು. ಮೊದಲನೆಯದಾಗಿ ಆ ತರದ್ದೊಂದು ಮಾದರಿ ಕನ್ನಡದಲ್ಲಿ ಇರಲಿಲ್ಲ. ಸೊ ಅವರು ಹೊಸದಾಗಿ ರೂಢಿಸಿಕೊಳ್ಳಬೇಕಾಗಿತ್ತು. ಹಾಗೆ ರೂಢಿಸಿಕೊಳ್ಳಬೇಕಾದಾಗ ಅವರ ಕಾಲಮಾನಕ್ಕೆ ತಕ್ಕ ಎಲ್ಲಾ ಆಶಯಗಳನ್ನ, ರಾಜಕೀಯ ಆಶಯ, ಸಾಹಿತ್ಯಿಕ ಆಶಯ ಮತ್ತು ಪ್ರಭಾವ, ಮೊಪಾಸಾ ತರದ್ದನ್ನ ಗಮನದಲ್ಲಿಟ್ಟುಕೊಂಡು ನಾನು ಹೇಳ್ತಾ ಇದ್ದೀನಿ. ಮಾಸ್ತಿಯವರಿಗೆ ಮುಖ್ಯವಾಗಿ ಪ್ರಭಾವ ಬಂದಿದ್ದು ಯುರೋಪಿಯನ್ writersರಿಂದ. ಸೊ ಆಗ ಸಣ್ಣಕತೆಯ ಮಾದರಿ ಆ ತರ ಇತ್ತು. ಕನ್ನಡಕ್ಕೆ ಬಹಳ ಹೊಸತಾಗಿತ್ತದು.


ಆಮೇಲೆ ಬಂದ ಸಾಹಿತ್ಯದ ಚಳುವಳಿಗಳು ಅಂತಲ್ಲ, ಸಾಹಿತ್ಯದ ಪ್ರಯತ್ನಗಳು ಏನಿವೆ, ನವ್ಯರನ್ನ ನೀವು ಗಮನಿಸಿದ್ರೆ, ಮಾಸ್ತಿಯವರ ಮಾದರಿ ಬಹಳ convenient ಆಗಿತ್ತು ಆಗ. Actually, ನವ್ಯರು ಮಾಡಿದ್ದೇನು ಅಂದ್ರೆ ಅದರಲ್ಲಿ formನಲ್ಲಿ ಅವರು ವ್ಯತ್ಯಾಸಗಳನ್ನು ಮಾಡಿದ್ರು. ಕತೆಯ ರಚನೆಯ structure ಇದೆಯಲ್ಲ, ಅದರಲ್ಲಿ ವ್ಯತ್ಯಾಸವನ್ನು ಮಾಡಿದ್ದು ಬಿಟ್ರೆ, ಸಣ್ಣಕತೆಯ ಪರಿಕಲ್ಪನೆಯನ್ನು ವ್ಯತ್ಯಾಸ ಮಾಡ್ಲಿಲ್ಲ ಅವರು. ಮಾಸ್ತಿಯವರನ್ನ ನೀವು ನೋಡಿದ್ರೆ ಅನಂತಮೂರ್ತಿಯವರ ಪ್ರಯತ್ನನು ಕತೆ ಹೇಳೋದೇ ಇದೆ. ಬಟ್ ಅಲ್ಲಿ ಕತೆ ಹೇಳುವ ವಿಧಾನ ಬೇರೆ ಇದೆ, ಕತೆ ಹೇಳುವ ತಂತ್ರ ಬೇರೆ ಇದೆ. ವಸ್ತುಗಳು ಬೇರೆಯಿದೆ. ವಿಶಾಲವಾದ ನೆಲೆಯಲ್ಲಿ ನೋಡೋದಾದ್ರೆ ವಸ್ತುಗಳು ಕೂಡ ಬೇರೆಯಲ್ಲ. ಬಟ್ ಬೇರೆ ಇದೆ ಅಂತ ನಾವು ಒಪ್ಪಬಹುದು. ಅಲ್ಲಿ ಅವರಿಗೆ ಏನು ಸಮಸ್ಯೆಯಾಯ್ತು ಅಂದ್ರೆ, particularly ಇಬ್ರನ್ನ ನಾವು ಆ ಕಾಲದ ಮಹತ್ವದ ಲೇಖಕರು ಅಂತ ತಗೊಳ್ಳೋದಾದ್ರೆ, ಒಬ್ರು ಶಾಂತಿನಾಥ ದೇಸಾಯಿ, ಇನ್ನೊಬ್ರು ಅನಂತಮೂರ್ತಿ. ಇವ್ರಿಗುನು ಅತ್ಯಂತ ಸವಾಲಿನ ವಿಷಯವನ್ನು ಹೇಳಬೇಕಾದಾಗ ಇದನ್ನ, ಈ ಮಾದರಿಯ ಮಿತಿಯನ್ನ, ಕೇರ್ ಮಾಡ್ಲಿಲ್ಲ ಅವರು. ಅನಂತಮೂರ್ತಿಯವರ ‘ಕ್ಲಿಪ್ ಜಾಯಿಂಟ್’ ಅತ್ಯಂತ ಒಳ್ಳೆಯ ಉದಾಹರಣೆ ಅಂತ ನಾನು ಅಂದ್ಕೊಂಡಿದೀನಿ. ಅಥವಾ ಮಂದಾಕಿನಿಯ ಕತೆಯನ್ನು ಹೇಳುವ ‘ಕ್ಷಿತಿಜ’. ಮತ್ತು ಅದೇ lengthನ ಬೇರೆ ಬೇರೆ ಕತೆಗಳಿವೆ. ‘ಸುಬ್ಬಣ್ಣ’ನೆ ತಗೊಳಿ ನೀವು. ಅದನ್ನ ಕಾದಂಬರಿ ಅಂತ ಮಾಸ್ತಿಯವರೆ ಪರಿಗಣಿಸಿರಲಿಲ್ಲ ಎಷ್ಟೋ ಸಮಯ. ಪಬ್ಲಿಷ್ ಮಾಡ್ತಾ ಮಾಡ್ತಾ ಕಾದಂಬರಿಯಾಗಿ ಬಿಟ್ಟಿದೆ ಅದು. 
ಅಂದ್ರೆ ಈ ತರದ್ದೊಂದು contradictionನು ಎಲ್ಲಾ ಕಾಲ್ದಲ್ಲು ಇರುತ್ತೆ. ಈಗ ನಿಮಗೆ ಮಾದರಿಗಳು ನಿಮ್ಮನ್ನ dictate ಮಾಡೋಕೆ ಸುರುಮಾಡಿ ಬಿಟ್ಟಾಗ ಲೇಖಕನಿಗೆ tension ಆಗಕ್ಕೆ ಸುರುವಾಗಿಬಿಡುತ್ತೆ. ಅದಕ್ಕೆ ಜೋತುಬಿದ್ದು ನೀವು ಈಗ ಅನಂತಮೂರ್ತಿಯವರ ಹಿಂದಿನ ಹಿಂದಿನ ಹಿಂದಿನ ಕತೆಗಳನ್ನು ನೋಡ್ಕೊಂಡೋಗಿ. ಬರ‍್ತಾ ಬರ‍್ತಾ ಬರ‍್ತಾ ಬಂದ ಕತೆಗಳನ್ನ ನೋಡ್ಕೊಂಡೋಗಿ. ಅಂದ್ರೆ ಆರಂಭದ ಕತೆಗಳನ್ನ ನಾನು ಹೇಳ್ತಾ ಇರೋದು. ಆಮೇಲಾಮೇಲೆ ಅವ್ರು length ಬಗ್ಗೆ ತಲೆಕೆಡಿಸಿಕೊಳ್ಳಿಲ್ಲ. - ನನಗೆ ಹೇಳ್ಬೇಕಾಗಿರೋದು ಇಷ್ಟಿದೆ. ಮುವ್ವತ್ತು ಪೇಜ್ ಬಿಟ್ಟು ಮುವ್ವತ್ತೊಂದನೆ ಪೇಜಿಗೆ ಹೋಗ್ತಾ ಇದೆ, I don't care. ನನಗೆ ಹೇಳೋದು important ಅಷ್ಟೆ ಅಲ್ಲಿ. - ಆಮೇಲೆ ನೀವದನ್ನು ಕಾದಂಬರಿ ಅಂತಾದ್ರು ಕರೀರಿ, ಕತೆ ಅಂತಾದ್ರು ಕರೀರಿ ಅದು ನಿಮ್ಮ ಹಣೆಬರಹ ಅದು. ಸೊ, ಹೀಗೆ ಎಲ್ಲಿ ಕೊನೆಯಾಗುತ್ತಲ್ಲ, ತಾತ್ವಿಕವಾಗಿ, ಮನಸ್ಸಿನಲ್ಲಿ ಕೆಲವು ವಿಚಾರಗಳು ಎಲ್ಲಿ ನಮಗೆ ಕೊನೆಯಾಗುತ್ತೊ ಅಲ್ಲಿ ನಾವು ನಿಲ್ಲಿಸ್ತೀವಿ. ಆಮೇಲಿನ ಸ್ವರೂಪ ಕಾದಂಬರಿನೂ ಆಗಿರುತ್ತೆ ಅಥವಾ ಇದೂ ಆಗಿರುತ್ತೆ. 


ನನ್ನ ಸಮಸ್ಯೆ ಅಂತಲ್ಲ, contradiction ಎಲ್ಲಿದೆ ಅಂತಂದ್ರೆ, ಈಗ ನಾನು ಹೇಳುವ ಎಷ್ಟೋ ವಿಷಯಗಳು ಬರೀಬೇಕಾದಾಗ ನಾನು length ಬಗ್ಗೆ ಯೋಚನೆ ಮಾಡೋಕೆ ಹೋಗಲ್ಲ. ಆದರೆ ಅದು ಮುಗಿದಾಗ actually ಅದು ಈಗಾಗ್ಲೆ ಕಲ್ಪಿತ ಸಣ್ಣಕತೆಯ ಸ್ವರೂಪದಲ್ಲಿ ಅದು ಇಲ್ಲ. ಕಲ್ಪಿತ ಕಾದಂಬರಿಯ ಸ್ವರೂಪದಲ್ಲೂ ಅದಿಲ್ಲ. ಸೊ ಹಾಗಿದ್ದಾಗ ಎಷ್ಟೋ ಜನ ನನಗೆ ಕೇಳ್ತಾರೆ, ನೀವಿದನ್ನ ಇನ್ನೊಂದು ಸ್ವಲ್ಪ ಬೆಳೆಸಿಬಿಟ್ಟು ಕಾದಂಬರಿ ಮಾಡಬಹುದಾಗಿತ್ತು ಅಂತ. ಈ ‘ನಕ್ಷತ್ರಯಾತ್ರಿಕರು’ ಇರಬಹುದು, actually ‘ಕಡಲತೆರೆಗೆ ದಂಡೆ’ ಸ್ವಲ್ಪ ಆ ತರ ಇಲ್ಲ. ಕಾದಂಬರಿ ಅಂತ ಒಪ್ಪಬಹುದೇನೋ ಜನ ಅದನ್ನ. ಪ್ರತ್ಯೇಕವಾಗಿ ಪಬ್ಲಿಷ್ ಮಾಡಿದಾಗ. ಬಟ್ ಎಷ್ಟೋ ಕತೆಗಳು ಸಣ್ಣಕತೆಗಳ ಒಳಗಡೆನೂ ಇಲ್ಲ ಅವು ಆ ಮೇಲೆ ಈ ಕಡೆನೂ ಇಲ್ಲ. ಅದಕ್ಕೆ ನಮ್ಮ ಈ journalistಗಳು ಏನ್ಮಾಡ್ತಾರೆ ಅಂದ್ರೆ, ಅಂದ್ರೆ ಪತ್ರಿಕೆಯ ಸಂಪಾದಕರು, ನೀಳ್ಗತೆ ಅಂತ ಒಂದು form ಸೃಷ್ಟಿ ಮಾಡ್ಕೊಂಬಿಡ್ತಾರೆ. ಆತರ ಏನಿರಲ್ಲ actually. ನೀಳ್ಗತೆ-ಕಿರುಕಾದಂಬರಿ, ಹಿಂಗೇನಿರಲ್ಲ ಅದು. ಅದೇ ಆದ್ರೆ, ಸೀರಿಯಸ್ ಓದುಗರಿಗೆ, ಸೀರಿಯಸ್ ಬರಹಗಾರರಿಗೆ ನಾನು ಹೇಳ್ತಾ ಇದೀನಿ. ಜನಪ್ರಿಯ ಮಾದರಿ ಬಗ್ಗೆ ನಾನು ಮಾತಾಡ್ತ ಇಲ್ಲ. ಅವರಿಗೆ ಆ ತರದ್ದೊಂದು form ಏನು ಇರಲ್ಲ. ಸೊ, ನನಗೆ ಯಾವಾಗ್ಲು ಎಲ್ಲಿ ನನ್ನ contradiction ಇರುತ್ತೆ ಅಂದ್ರೆ ಅದು ಮುಗಿದಾಗ ಯಾವ್ದೋ ಒಂದು ಎರಡರ ಮಧ್ಯೆ ಇರುತ್ತಲ್ಲ, ಅದೇ form ಅಷ್ಟೆ ಅದು. ಸೊ, ನಾವೆಲ್ಲೊ ಒಂದು ಕಡೆಗೆ ಫಿಕ್ಸ್ ಮಾಡೋಕೆ ಟ್ರೈ ಮಾಡ್ದಾಗ, ನನಗೇನೂ problem ಆಗಲ್ಲ ಅದು, ಅವ್ರಿಗೆ, ಗುರುತಿಸೋವ್ರಿಗೆ problem ಆಗಿ ಬಿಡುತ್ತೆ. ಸೊ, ಇದು ವಿಮರ್ಶಕರಿಗೆ problem ಆಗಿ ಬಿಡುತ್ತೆ. ಇದನ್ನ ಕಾದಂಬರಿಯಾಗಿ ಪರಿಗಣಿಸಬೇಕು ಅಂದ್ರೆ length ಇಲ್ಲ. 
ನನ್ನ ಪ್ರಕಾರ ಅದ್ಕೆ ನಾ ನಿಮಗೆ ಆರಂಭದಲ್ಲೆ ಹೇಳಿದೀನಿ, ನಿಮಗೆ ಓದಿದಾಗ ಅದರ ಸಂಕೀರ್ಣತೆ ಮತ್ತು ಅದರ ದಟ್ಟವಾಗಿ ನಿಮ್ಮನ್ನ ಕಾಡುವ ಶಕ್ತಿ, ಅದು ನಿಮ್ಮ ಮೇಲೆ ಮಾಡುವ ಪ್ರಭಾವ ಮತ್ತಿತರ ಒಟ್ಟಾರೆ structure ಅದು ಪರಿಪೂರ್ಣವಾಗಿದೆಯೆ ಇಲ್ಲವೆ ಅನ್ನೋದಷ್ಟು ಮುಖ್ಯ ನನಗೆ. ಅದು ಕಾದಂಬರಿ ತರ ನಿಮಗನಿಸ್ತಾ ಇದ್ರೆ, its fine. ಕತೆ ತರ ಇದೆ ಅನಿಸ್ತಾ ಇದ್ರೆ, its fine. ಬಟ್ ಈಗ ನೀವು ‘ಅಂಗದ ಧರೆ’ನ ಕಾದಂಬರಿ ಅಂತ ಹೇಳ್ಬಿಟ್ಟು, ಮತ್ತೊಮ್ಮೆ length ಬಗ್ಗೆ ಗಮನ ಕೊಡೋಕ್ಕಾಗಲ್ಲ. ಅದು ಅಲ್ಲಿಗೆ ಮುಗಿದೋಗಿದೆ ನನ್ ಪ್ರಕಾರ; ತಾತ್ವಿಕವಾಗಿ ಅದು ಮುಗಿದೋಗಿದೆ ಮತ್ತು ತಾರ್ಕಿಕವಾಗಿಯೂ ಮುಗಿದು ಹೋಗಿದೆ, ಆ ಕ್ಷಣಕ್ಕೆ. ಆಮೇಲದನ್ನ ಬೆಳೆಸೋಕೆ ಸಾಧ್ಯ ಇಲ್ಲ. ಕೆಲವು ಜನ ನನಗೆ suggest ಮಾಡಿದ್ರು, ಇನ್ನೊಂದು ಸ್ವಲ್ಪ ಅಲ್ಲಿ ನೀವು ಘಟನೆಗಳಿವ್ಯಲ್ಲ, ಅದನ್ನೆ ಮೂರು ಮೂರು ಪೇಜ್ ಮಧ್ಯದಲ್ಲಿ ಸೇರಿಸಿ ಒಂದು ಕಾದಂಬರಿ ಮಾಡಿ ಅಂತ. ಹಾಗೆ ಮಾಡ್ಲಿಕ್ಕೆ ನನಗೆ ಸಾಧ್ಯ ಇಲ್ಲ. ಸೊ ಆದ್ರಿಂದ ಆ ಪ್ರಶ್ನೆ ಅದು ಓದೋವ್ರಿಗು ಮತ್ತು ವಿಮರ್ಶಕರಿಗು ಸೇರಿದ್ದೆ ಹೊರತು ಲೇಖಕನಾಗಿ ನನಗಲ್ಲ. ನನಗಷ್ಟೇ ಅಲ್ಲ, ಈಗ ಅನಂತಮೂರ್ತಿಯವರಿಗೇ ಈಗ ‘ಕ್ಲಿಪ್ ಜಾಯಿಂಟ್’ ಯಾಕೆ ನೀವು ಇನ್ನೂ ಐದು ಪೇಜ್ ಕಡಿಮೆ ಬರೀಲಿಲ್ಲ ಅಂತ ಕೇಳಿದ್ರೆ ಅಷ್ಟೇ ಬರೀಬೇಕವ್ರು. ಅದ್ರಿಂದಾನೆ ಅವ್ರು ಬರೆದಿದಾರೆ ಅಂತ ನನಗನಿಸುತ್ತೆ. 


ಆಮೇಲೆ ಕಾದಂಬರಿಯ, ನಮ್ಮ ಪೂರ್ಣ ಪ್ರಮಾಣದ ಕಾದಂಬರಿಯ ಕಲ್ಪನೆಯಿಂದಾಗಿ ಇದೆಲ್ಲ ಅನಿಸ್ತಾ ಇದೆ. ಕಾದಂಬರಿ ಅಂತ ಹೇಳಿದ ತಕ್ಷಣ ಕಾರಂತರ ಮತ್ತು ಕುವೆಂಪು ಅಂಥವರ ಎರಡು ಮಾದರಿಗಳಿವೆ ನಮಗೆ. ಸಿದ್ಧ ಮಾದರಿಗಳೇನಲ್ಲ ಅವು. ಬಟ್ ಆ ಮಾದರಿಗಳಿವೆ. ಸೊ ಯಾರೇ ಕಾದಂಬರಿ ಬರೆದ್ರೂ, ಇನ್ನೊಂದು ಕಡೆ ಭೈರಪ್ಪನವರಿದ್ದಾರೆ. ಸೊ, ಅವರ ಗಾತ್ರ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದ್ಯೆ ಹೊರತು ಕಡಿಮೆಯಾಗ್ತಾ ಇಲ್ಲ. ಸೊ, ಆ ನೆಲೆಯಲ್ಲಿ ನೀವು ಗ್ರಹಿಸಿದ್ರೆ ಖಂಡಿತವಾಗಿ ನೀವು ಕೇಳ್ತಾ ಇರುವ ಪ್ರಶ್ನೆ ಬಹಳ ರಿಲೆವಂಟ್ ಆಗಿದೆ. ಬಟ್ ಈಗ ನೀವು ಭೈರಪ್ಪನವರ ‘ಅಂಚು’ ಕತೆ actually ‘ಅಗಮ್ಯ ಅಗೋಚರ ಅಪ್ರತಿಮ ಜೀವವೇ...’ ಅದರ contentಉ ಹೆಚ್ಚು ಕಮ್ಮಿ ಒಂದೇ ತರನೆ ಇದೆ. ನಿಮಗೆ ಕತೆ ಓದಿದ ಮೇಲೆ ಅಥವಾ ಕಾದಂಬರಿ ಓದಿದ ಮೇಲೆ ಕೊಡುವ ಒಂದು ದಟ್ಟವಾದ ಅನುಭವ ಇದೆಯಲ್ಲ, ಈ ಸಣ್ಣಕತೆನೆ ಕೊಡ್ತಾ ಇದೆ. ಸಣ್ಣಕತೆ ಅಂತ ಅದನ್ನ ನಾನು ಕರೆದಿಲ್ಲ. ನನ್ನ ಕತೆ ಕೊಡ್ತಾ ಇದ್ರೆ ನಿಮ್ಗೆ, ಅದಕ್ಕು ಇದಕ್ಕು ಏನು ವ್ಯತ್ಯಾಸ ಅಂತ ನನ್ನ ಕೇಳಿದ್ರೆ ಏನೂ ಇಲ್ಲ, ನನ್ ಪ್ರಕಾರ. ಅಷ್ಟೇ ಹೇಳೋಕೆ ಇಷ್ಟ ಪಡ್ತೀನಿ.
‘ಕುಂಕುಮ ಭೂಮಿ’ಯ ವಿಚಾರಕ್ಕೆ ಬಂದ್ರೆ, ಅದನ್ನ ನಾನು ಕಾದಂಬರಿ ಬರೀಬೇಕು ಅಂತಾನೆ ಬರೆದಿದ್ರಿಂದ ಆ ತರ structureನ ನಾನು ಯೋಚನೆ ಮಾಡಿದೀನಿ ಅಂತ ನಿಮ್ಗೆ ಗೊತ್ತಾಗುತ್ತೆ. ಅದು artificial structure ಅನಿಸುತ್ತೆ ಅದು ನನಗೆ. ಅದಕ್ಕೆ ಆ ಕಾದಂಬರಿ ಬಗ್ಗೆ ನನಗಷ್ಟು ಒಲವಿಲ್ಲ ಅಂತ ಹೇಳೋವಾಗ ಇದು ಕೂಡ ಒಂದು ಕಾರಣ ಅದರಲ್ಲಿ. ನಾನು ಯಾವ್ದೇ ಬರಹ ಬರೆಯೋಕೆ ಸುರುಮಾಡಿದಾಗ ಅದನ್ನ ಅಂತ್ಯ ಏನು ಅಂತ ನಾನು ಯೋಚನೆ ಮಾಡೋದಿಲ್ಲ. ಅಂದ್ರೆ ಅದರ length ಬಗ್ಗೆ ನಾನು ಹೇಳ್ತಾ ಇರೋದು. ಅದು ನಾನು ಕತೆ ಬರೆಯೋಕೆ ಸುರುಮಾಡ್ತೀನಿ. length ಎಲ್ಲಿಗೆ ಮುಗಿಯುತ್ತೆ ಅಲ್ಲಿಗೆ ನಾ ಬಿಡ್ತೀನಿ. ಸೊ, ಈ ಸಮಸ್ಯೆ ನನಗೆಲ್ಲಿ ಬರುತ್ತೆ ಅಂತಂದ್ರೆ ಅದನ್ನ ಎಲ್ಲಿ place ಮಾಡ್ಬೇಕು ಅಂತಂದಾಗ ಬರುತ್ತೆ. actually ‘ಅಂಗದ ಧರೆ’ನೂ ನನ್ನ ಕಲೆಕ್ಷನ್ನಿನಲ್ಲಿ ಸೇರಿಸ್ಬೇಕು ಅಂತ ನನಗಿತ್ತು. ಮತ್ತೆ ಕತೆಯಾಗಿ ನೋಡಿದ್ರೆ ಬಹಳ ದೊಡ್ಡದಿದೆ ಅದು. ನಮ್ಮ ಒಪ್ಪಿತ ಮಾದರಿಗಳಿವೆಯಲ್ಲ, ಅದರಿಂದಾಗಿ ಹುಟ್ತಾ ಇರೋ ಸಮಸ್ಯೆ ಅಂತ ನನಗನಿಸ್ತಾ ಇರುತ್ತೆ. ಬಟ್ ಇನ್ನೊಂದು ಅರ್ಥದಲ್ಲಿ, ಈಗ ಕಾರಂತರ ಕಾದಂಬರಿಯಲ್ಲಿ, I live that life. but whereas it may not be possible here. so, at the same time it is giving some kind of effect which can be taken as a full experience. But at the same time in the formate or in the form its not representing a novel. That is the conflict.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, August 15, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಏಳು

ಕನಸುಗಾರಿಕೆ ಮತ್ತು ಭಾವುಕತೆ ನಿಮ್ಮ ಕತೆಗಳ ಮೂಲದ್ರವ್ಯ ಎನ್ನುವ ಮಾತಿದ್ದರೂ ವಾಸ್ತವಕ್ಕೆ ಒತ್ತುಕೊಟ್ಟು ಬರೆಯುವ ನೀವು ಭಾವುಕಳಾದ ನಾಯಕಿಯೇ ಪ್ರಧಾನವಾಗಿರುವ - `ಯಾರೂ ಬಾಹೋರಿಲ್ಲ' ಭಾವವೇ ಪ್ರಧಾನವಾದಂಥ ಕೆಲವು ಪಾತ್ರಗಳನ್ನು ಸೃಜಿಸುವಾಗ ಕತೆ ಮತ್ತು ಪಾತ್ರಗಳ ಚಿತ್ರಣದಲ್ಲಿ ‘ರೊಮ್ಯಾಂಟಿಕ್ ಆದರ್ಶ’ ಮಾದರಿಯ ಗಂಡು-ಹೆಣ್ಣು ಮತ್ತು ಅಂಥ ಸನ್ನಿವೇಶಗಳನ್ನು ನಿರ್ಮಿಸ್ತೀರಿ. ಈ ಮಾದರಿಯಲ್ಲಿ ಒಂದು ಬಗೆಯ ಅವಾಸ್ತವಿಕತೆ ಇದೆ ಅನಿಸುವುದಿಲ್ಲವೆ? ಬಾರೋ ಗೀಜಗ ಕತೆಯಲ್ಲಿ ಈ ಬಗೆಯ ಕತೆ ಏರಿದ ಎತ್ತರವನ್ನು ಗಮನಿಸಿಯೂ ಕೇಳ್ತಾ ಇದ್ದೇನೆ. "ಮುಗ್ಧತೆ ಮತ್ತು ಭಾವುಕತೆ ಸಂಲಗ್ನಗೊಂಡ, ಹೊಸ ಸಂಬಂಧಗಳಿಗಾಗಿ ತೀವ್ರವಾಗಿ ಹಾತೊರೆವ ಕಾರಣಕ್ಕೆ ರಾಜಕೀಕರಣಗೊಳ್ಳುವ ಪ್ರಜ್ಞೆಯ ಅಭಿವ್ಯಕ್ತಿ" ಎಂದು ಬಹುಷಃ ಇದನ್ನು ಗುರುತಿಸಿರುವ ಡಿ.ಆರ್.ನಾಗರಾಜ್ ಅವರ ಮಾತಿನ ಹಿನ್ನೆಲೆಯನ್ನೂ ಇಟ್ಟುಕೊಂಡು ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?


ಇಲ್ಲೇ ಇನ್ನೊಂದು ಪ್ರಶ್ನೆ ಕೂಡ ಇದೆ. ಅತ್ಯಂತ ವಾಸ್ತವಿಕ ನೆಲೆಯ ಬದುಕಿನ ಹೋರಾಟದಲ್ಲಿ ವ್ಯಸ್ತವಾಗಿರುವ ನಿಮ್ಮದೇ ಕತೆಗಳ ಇನ್ನು ಕೆಲವು ಹೆಣ್ಣುಗಳ ಜೊತೆ ಈ ಪಾತ್ರಗಳು ಹೇಗೆ ನಿಲ್ಲುತ್ತವೆ ಅನ್ನೋದು.

ರೊಮ್ಯಾಂಟಿಕ್ ಅಥವಾ ರೊಮ್ಯಾಂಟಿಸಂ ಆ ಕತೆಯ ಪರಿಸರ ಅಥವಾ ಅದರ ಒಂದು ಬಾಹ್ಯ ವಿನ್ಯಾಸ ಇದೆಯಲ್ಲ, ಅದ್ರಿಂದ ಅದು ನಿಮಗೆ ಹಾಗೆ ಅನಿಸಿರಬಹುದು. ಬಟ್ ನನಗೇನೂ ಅದು ರೊಮ್ಯಾಂಟಿಕ್ ಅಂತ ಅನಿಸಿಲ್ಲ. ಯಾಕಂದ್ರೆ ನೀವು ಹೇಳ್ತಾ ಇರುವ ಮೂರೂ ಕತೆಗಳೂ ನನ್ನ ಅನುಭವವೇ ಆಗಿರುವಂಥದ್ದು. ಆ ತರದ್ದೊಂದು ಅನುಭವವನ್ನು ಹೇಳಬೇಕಾದಾಗ ರೊಮ್ಯಾಂಟಿಸಂ ಅನೋದಕ್ಕಿಂತ ಒಂದು poetic element ಇರುತ್ತೆ ನೋಡಿ, ಆ ಮೇಲೆ ಎಷ್ಟೋ ಕಡೆಗೆ poetic justification ಅಂತ ಮಾತಾಡ್ತೀವಿ. ಆ ಹಿನ್ನೆಲೆಯಲ್ಲಿ ಬರೆದಿರೋ ಕತೆಗಳು. ವೈಯಕ್ತಿಕ ನೆಲೆಯಲ್ಲಿ ಹೇಳೋದಾದ್ರೆ ನನ್ನ ಅನುಭವವನ್ನ ಮೀರಿ ಬಂದಿರೋ ಕತೆಗಳಲ್ಲ ಅವು ಅನ್ನೋದು ಒಂದು. ಬಟ್ ಆ ಕತೆಯನ್ನು ಹೇಳೋದಕ್ಕೆ ನಾನು ಹಿಂದೆ ಬಳಸಿದಂಥ ತಂತ್ರಗಳು ಸಾಕಾಗಿಲ್ಲ ಅನ್ನೋ ಕಾರಣಕ್ಕಾಗಿ ಈ ಒಂದು extreme ಭಾವುಕ ಸನ್ನಿವೇಶವನ್ನ ನಾನು ಸೃಷ್ಟಿ ಮಾಡಿಕೊಂಡಿರಬಹುದು, ತಂತ್ರವಾಗಿ. ಆದರೆ ಬಾರೋ ಗೀಜಗ ಕತೆಯನ್ನ ನಾನು ಆ ಕೆಟಗರಿಯಲ್ಲಿ ಸೇರಿಸಲ್ಲ.ಈ ಎರಡು ಕತೆಗಳಲ್ಲಿರೊ extreme ಭಾವುಕತೆಯಲ್ಲಿ ತಮ್ಮ ಜೀವನವನ್ನ ಹೇಳಿಕೊಳ್ತಾ ಇರುವ ಕತೆಗಳಿವು. ಅದೇ ತರದ ಸನ್ನಿವೇಶ ಬೇರೆ ಕತೆಗಳಲ್ಲಿನೂ ಇವೆ. actually ಹಶಂಬಿಯ ಕತೆಯಲ್ಲಿನು ಇದೆ.ಆದರೆ ಬದುಕುತ್ತಾ ಇರುವ ಸನ್ನಿವೇಶ ಬೇರೆ ಇದೆ. ಆದ್ರೆ ಇಲ್ಲಿ ಕಟ್ಟೆ ಒಡೆದು ಹೋಗುವಂಥ ಭಾವುಕತೆ ಇದೆ. ಇಲ್ಲಿ ಕಾಣ್ತಾ ಇರೋದಕ್ಕೆ ಕಾರಣ ಅಂದ್ರೆ, ಆ ಹಿಂದೆ ಬಳಸಿರೋವಂಥ ಕಥಾ ತಂತ್ರಗಳು ಬಹುಷಃ, ತಂತ್ರವಾಗಿ ನಾನು ಈಗ ಹೇಳ್ತಾ ಇದೀನಿ, ನಾನು ಬರೀಬೇಕಾದಾಗ ಆ ತರ ಯೋಚ್ನೆ ಮಾಡಿರಲ್ಲ ನಾನು, ಅವು ಸರಿ ಹೋಗಲ್ಲ ಅನ್ನೋ ಕಾರಣಕ್ಕಾಗಿ ಬರೆದಿರಬಹುದು. ಆಮೇಲೆ ಎರಡನ್ನೂ ಹೇಗೆ match ಮಾಡ್ತೀನಿ ಅಂದ್ರೆ ಆ ಎರಡೂ ನನ್ನಲ್ಲೆ ಇವೆ, ನಾನು ಎಲ್ಲೂ manage ಮಾಡಿಲ್ಲ ಅವನ್ನ. ಸೊ ಆ ತರ extreme ಭಾವುಕ ಸನ್ನಿವೇಶನು ನಮ್ಮ ಬದುಕಲ್ಲಿ ಬಂದಿರುತ್ತೆ. ನಾವೆಷ್ಟೊ ಸಲ notice ಮಾಡಿರಲ್ಲ ಅವನ್ನ. ಸೊ, ಯಾವಾಗ ನಾವು notice ಮಾಡ್ತೀವಿ ಅಂದ್ರೆ, ನಾವು ಅದೇ ನಿಟ್ಟಿನಲ್ಲಿ ಯೋಚನೆ ಮಾಡ್ತಿರಬೇಕಾದ್ರೆ. ಅಂದ್ರೆ ಸಾಹಿತ್ಯ ಯಾಕೆ ನಮಗೆ ಬಹಳ ಮುಖ್ಯ ಆಗುತ್ತೆ ಅಂದ್ರೆ, ನಾವು ಬಹಳ ತಲೆ ಕೆಡಿಸಿಕೊಂಡು ಬಿಟ್ಟಿರ‍್ತೀವಿ. ಅದು ಬಿಟ್ರೆ ನಮಗೆ ಬೇರೆ ಏನೂ ಇಲ್ಲ ಅಂತ. ಸೊ, ಅದ್ಕೆ ನಮಗೆ ಎಷ್ಟೊ ವಿಷಯಗಳು ಭಾಳ important ಆಗಿ ಕಾಣುತ್ವೆ. ಬಟ್ ಬೇರೆ ಸಾಮಾನ್ಯ ಜನರಿಗೆ ಅವು important ಆಗಿ ಕಾಣಲ್ಲ. ಸೊ, ಅದು ಗಮನಿಸುವ ಸೂಕ್ಷ್ಮತೆ ಅದು, ಅಷ್ಟೇನೆ. ಅದ್ರಿಂದಾಗಿ ಹಾಗಿದೆ ಅಂತ ನಾನು ಅಂದ್ಕೊಂಡಿದೀನಿ.ಕಾದಂಬರಿಯ ಅನನ್ಯತೆಗೆ ನಿಮ್ಮ ನಿರೂಪಣಾ ಕ್ರಮ ಹೆಚ್ಚು ಹತ್ತಿರವಿದೆ ಎನ್ನುವ ಬಗ್ಗೆ ಅನೇಕ ವಿಮರ್ಶಕರ ನಿಲುವಿನ ಬಗ್ಗೆ ಗೊತ್ತು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ನನ್ನದೊಂದು ಸ್ವಲ್ಪ ಬೇರೆ ತರ ನಿಲುವಿದೆ ಇಲ್ಲಿ. ವಿಮರ್ಶಕರು ಅಥವಾ ಆ ತರದ ಯಾವುದೇ ಒಂದು ಗ್ರಹಿಕೆ ಇರುವಂಥವರಿಗೆ ಆ ಗ್ರಹಿಕೆ ಬಂದಿರೋದು ನಮ್ಮಲ್ಲಿರೊ ಸಾಂಪ್ರದಾಯಿಕ ಮಾದರಿಗಳಿಂದ. ಸಣ್ಣಕತೆಗಳು ಅಂದ್ರೆ ಅದಕ್ಕೆ ಒಂದು ಮಾದರಿಯನ್ನ ನಾವು ಪ್ರಪೋಸ್ ಮಾಡ್ತಾ ಇದೀವಿ. ಕಾದಂಬರಿ ಅಂದ್ರೆ ಅದಕ್ಕೆ ಒಂದು ಮಾದರಿಯನ್ನ ಪ್ರಪೋಸ್ ಮಾಡ್ತೀವಿ. ಕಾದಂಬರಿ ಎಲ್ಲಿಂದ ಬಂದಿದೆಯೋ ಅಲ್ಲಿ, ಯುರೋಪಿನಿಂದಲೇ ಬಂದಿರೋದದು, ಅವರದ್ದು ಸಾಂಪ್ರದಾಯಿಕ ಮಾದರಿಯೊಂದಿದೆ ಮತ್ತು ಹೊಸದಾಗಿ ಪುನರ್ವ್ಯಾಖ್ಯಾನ ಮಾಡಿರೋ ಮಾದರಿಗಳು ಇವೆ. ಈ ಮಿಲನ್ ಕುಂದೇರಾ ಕಾದಂಬರಿಗಳನ್ನ ನೋಡಿದ್ರೆ ಕಾದಂಬರಿಗಳಿಗಿಂತ ಹೆಚ್ಚು ಕತೆ ತರ ಇದೆ ಅದು. ಆದ್ರೆ ಕಾದಂಬರಿ ರೂಪದಲ್ಲಿ ಪಬ್ಲಿಷ್ ಆಗಿವೆ. ಮಿಲನ್ ಕುಂದೇರಾನ ಯಾವ್ದೇ ಒಂದು ಕೃತಿನ ಗಮನಿಸಿದ್ರೂನು ಹಾಗೇ ಅನಿಸ್ತಿರುತ್ತೆ ನಮಗೆ. ಅಲ್ಲಿ ಪ್ರಶ್ನೆ ಏನಿದೆ ಅಂದ್ರೆ ಒಂದು ನಾವು ಯಾವ ಮಾದರಿಗಳನ್ನ ಫಿಕ್ಸ್ ಮಾಡಿದೇವೆ ಆ ಮಾದರಿಗಳ ಮೂಲಕ ನಾವು ಬರಹಗಳನ್ನ ಸ್ವೀಕಾರ ಮಾಡ್ತೀವಿ. ಅದು ನನ್ನ ಪ್ರಕಾರ ಅಷ್ಟೋಂದು ಸಮರ್ಪಕ ಅಲ್ಲ ಅನ್ಸುತ್ತೆ. ತಪ್ಪು ಅಂತ ನಾನು ಹೇಳಲ್ಲ. ಅಷ್ಟೊಂದು ಸಮರ್ಪಕವಾದ ಗ್ರಹಿಕೆ ಅಲ್ಲ ಅದು.

ಆಮೇಲೆ ನನಗೆ ಯಾವಾಗ್ಲುನು ನಾನು ಬಹಳಷ್ಟು conflictsಗಳನ್ನ ಎದುರಿಸ್ತಾ ಇರ್ತೀನಿ. ಈ ಬರೀಬೇಕಾದಾಗ. ಅದ್ಯಾಕಂದ್ರೆ ಕತೆ ಅಂದ ತಕ್ಷಣ ಬರೀಬೇಕಾದ್ರೆ ಒಂದು ಸಿದ್ಧ ಮಾದರಿ ಇದೆ ಈಗಾಗ್ಲೆ. ಅಂದ್ರೆ ಪ್ರಸ್ತುತ ಸಿದ್ಧ ಮಾದರಿಯ ಕಲ್ಪನೆಗಳ ಬಗ್ಗೆ ನಾನು ಮಾತಾಡ್ತಾ ಇದ್ದೇನೆ. ಸಿದ್ಧ ಮಾದರಿಗಳ ಬಗ್ಗೆ ಅಲ್ಲ. ನಾನು ಅದರ ಸಿದ್ಧ ಮಾದರಿಗಳ ಬಗ್ಗೇನೆ ನಾನು ಮಾತಾಡ್ತಾ ಇಲ್ಲ. ಬಂಡಾಯದ ಒಂದು ಮಾದರಿಯಿದೆ. ನವ್ಯದವರದ್ದೊಂದು ಮಾದರಿಯಿದೆ. ಇನ್ನು ಕೆಲವು ತರದ ಕೆಲವು ಟಿಪಿಕಲ್ ಮಾದರಿಗಳಿವೆ. ಕಥಾ ಸ್ಪರ್ಧೆಗಳಿಗೆ ಬರೆಯೋ ಮಾದರಿನೆ ಇದೆ. ಅದ್ರ ಬಗ್ಗೆ ನಾನು ಮಾತಾಡ್ತಾ ಇಲ್ಲ. ಈಗ ಕಲ್ಪಿತ ಸಿದ್ಧ ಮಾದರಿ ಏನಂದ್ರೆ ಕತೆ ಅಂದ್ರೆ ಇಷ್ಟು ಪುಟಗಳ ಒಳಗಡೆ ಇರಬೇಕಂತ ಅನ್ನೋದು ಒಂದು. ಈಗ ಅದ್ರ ಅನುಭವ ಇದೆಯಲ್ಲ, ಅಂದ್ರೆ ಓದಿನ ಅನುಭವ, ಓದಿದ ಮೇಲೆ ಈಗ ಒಂದು ಕೃತಿಯನ್ನ ಓದಿದ ಮೇಲೆ ಅದು ದಟ್ಟವಾಗಿ ಕೊಡುವ ಅನುಭವ ಇದ್ಯಲ್ಲ, ಅದು ಮುಖ್ಯ ಅಂತ ನನಗನಿಸುತ್ತೆ.

ಅಂದ್ರೆ ಈಗ ನಾವು ಹಿಂದೆ ಚರ್ಚೆ ಮಾಡ್ತಾ ಇದ್ವಿ ನೋಡಿ, ಪೊಯೆಟ್ರಿಗೆ ನಾವು ಆತರ ಮಾಡಬಹುದು. ಬಟ್ ಗದ್ಯ ಬರಹದಲ್ಲಿ ಇದು ಕತೆ ಅಥವಾ ಕಾದಂಬರಿ - ಈ ತರದ ಚರ್ಚೆನೆ ಬಹಳ ಅಪ್ರಸ್ತುತ ಅಂತ ಅನ್ಸುತ್ತೆ ನನಗೆ. ಯಾಕಂದ್ರೆ ನಾನು ಓದೊ ಬೇರೆ ಬೇರೆ ದೇಶಗಳ ಎಷ್ಟೋ ಲೇಖಕರಲ್ಲಿ ಕತೆಗಳು ಅಂತ ಪಬ್ಲಿಷ್ ಮಾಡಿರೋದೆ actually ನೂರು ಪುಟಗಳ ಮೇಲಿದೆ. ಈಗ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಬರೆಯೊ ಕತೆಗಳನ್ನ ನೋಡಿದ್ರೆ, ಸಿಂಗರ್ ಬರೆಯೋ ಕತೆಗಳನ್ನ ನೋಡಿದ್ರೆ ಅಥವಾ even ಎಷ್ಟೋ ಆಫ್ರಿಕನ್ writers ಬರೆಯೋ ಕತೆಗಳನ್ನ ನೋಡಿದ್ರೆ ನೀವು, ಅವ್ರದೆಲ್ಲ ನೂರು ಪೇಜ್ ಮೇಲೆನೆ ಇದಾವೆ. ಕತೆಗಳು ಅಂತ ಪಬ್ಲಿಷ್ ಮಾಡಿದಾರೆ. ಪಬ್ಲಿಷ್ ಮಾಡ್ಬೇಕಾದ್ರೆ ನಿಮಗೆ ಒಂದು convenient form ಬೇಕು. ಅಂದ್ರೆ ಅದು convenient form ಅಷ್ಟೆನೆ ಅದು.
(ಚಿತ್ರಕೃಪೆ :ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2006 ಮತ್ತು 2008)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, August 10, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಆರು

ಆಧ್ಯಾತ್ಮ-ಸಂನ್ಯಾಸ-ಮಠ-ಸ್ವಾಮೀಜಿ ಇತ್ಯಾದಿ ನಿಮ್ಮ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುವ ಇನ್ನೊಂದು ಬಹುಮುಖ್ಯವಾದ ವಿದ್ಯಮಾನ. ಅದು ಜೀವನಾನುಭವದಿಂದ ಹುಟ್ಟಿದ ಆಧ್ಯಾತ್ಮದ ತತ್ವವಾಗಿ ಬರುವುದಿದೆ. ಜೀವನ ವಿಮುಖತೆಯಾಗಿ, ಸಂನ್ಯಾಸವೋ, ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗುವುದೋ, ಆತ್ಮಹತ್ಯೆ ಅಥವಾ ಸಾವಾಗಿಯೋ ಬರುವ ಜೀವನ ವಿಮುಖತೆಯಾಗಿಯೂ ಬರುವುದಿದೆ. ಮಠ ಮತ್ತು ಆಧ್ಯಾತ್ಮಿಕ ಸಿದ್ಧಿಯಾಗಿ ಅಂಗದ ಧರೆಯಲ್ಲಿ ಆಗುವ ಹಾಗೆ, ಬರುವುದಿದೆ. ಹೀಗೆ ಮತ್ತೆ ಮತ್ತೆ ಬರುವ ಈ ವಿದ್ಯಮಾನದ ಹಿನ್ನೆಲೆ ಏನು?

ವ್ಯಕ್ತಿತ್ವದಲ್ಲಿ ಆತರದ್ದೊಂದು extremity ಎಲ್ರಿಗು ಇರುತ್ತೆ ಅಂತ ಅಂದ್ಕೊಂಡಿದೀನಿ. ನನ್ನಲ್ಲು ಇರುತ್ತೆ. Renouncement ಇದ್ಯಲ್ಲ, ನಮ್ಗೆ ಎಷ್ಟೋ ಸಲ ಏನನಿಸ್ತಾ ಇರುತ್ತಂದ್ರೆ, ಈ adjustment ಮಾಡ್ಕೊಂಡು ಜೀವನ ಮಾಡೋದಿದ್ಯಲ್ಲ, ಎಲ್ಲಾ ಬಗೆಯ ಅರ್ಥದಲ್ಲು ನಾನು ಹೇಳ್ತಾ ಇದೀನಿ, ವಿಶಾಲವಾದ ಅರ್ಥದಲ್ಲಿ. ಅದು ನಮಗೆ ಕಿರಿಕಿರಿ ಮಾಡ್ತಾ ಇರುತ್ತೆ. ಇದು, ಇದನ್ನ ತಿರಸ್ಕಾರ ಮಾಡಿ ಬೇರೆ ಹೋಗಬೇಕು ನಾನು ಅಂತ ಅನಿಸ್ತಾ ಇರುತ್ತೆ. ಮಾನಸಿಕವಾಗಿ ಬಹಳ ಪ್ರಬಲವಾಗಿರುತ್ತೆ ಅದು. ಹಾಗೆ ಹೋಗಲಿಕ್ಕಾಗಲ್ಲ ಎಷ್ಟೋ ಸಲ.
ಅಂದ್ರೆ ಅದು ನಾವೇ ಸೃಷ್ಟಿ ಮಾಡಿಕೊಂಡಿರುವಂಥ ಅನಿವಾರ್ಯತೆ. ಅದ್ರ ಹಂಗೇ ಇಲ್ಲದೆ ಇರೋವ್ರು, ಹಂಗು ಹರಿದ ಶರಣರು, ಏನ್ಮಾಡ್ತಾರಂದ್ರೆ, ಈಗ ಅಂಗದ ಧರೆಯಲ್ಲಿ ನೋಡಿ. ‘ಅಂಗ’ದ ಧರೆ' ಅದು. ದೇಹವನ್ನ ನಾವು ಒಂದು ಭೂಮಿಯನ್ನಾಗಿ ಮಾಡ್ಕೊಂಡು ಅಥವಾ ಅದರ ಮೂಲಕವೇ ನಾವು ಹೋಗ್ಬೇಕು ಎನ್ನುವ ಒಂದು ಚಿಂತನೆ ಇದೆಯಲ್ಲ, ಅದರ ಮೂಲಕನೇ ನಾವು ಎಲ್ಲಿಗೋ ಹೋಗಬೇಕು ಎನ್ನೋದಿದ್ಯಲ್ಲ, ಆ ಚಿಂತನೆ. ಅದಕ್ಕೇ ಅಲ್ಲಮ ಅಲ್ಲಿಯೂ ಅದನ್ನ ಚಾಲೆಂಜ್ ಮಾಡ್ತಿದಾನೆ ಅವನು ಮತ್ತು ಬಹಳ ವ್ಯಂಗ್ಯ ಇದೆ ಅವನು ಹೇಳಬೇಕಾದ್ರೆ. ಲಾಸ್ಟ್ ಲೈನ್ ಹೇಳ್ಬೇಕಾದ್ರೆ; ನೀನು ಮೊದಲನೆ ಹಂತವನ್ನ ಮುಟ್ಟಬೇಕಾದ್ರೆ ಇದನ್ನ ಮಾಡ್ಬೇಕು, ಎರಡನೆ ಹಂತವನ್ನ ಮುಟ್ಟಬೇಕಾದ್ರೆ ಇದನ್ನ ಮಾಡ್ಬೇಕು, ಮೂರನೇ ಹಂತ ಮುಟ್ಟಿದವನು ಹಿಂಗಾಗ್ತಾನೆ. ಬಟ್ ಇದು ಎಲ್ಲವನ್ನು ಮುಟ್ಟದೇನೆ ತಿರಸ್ಕಾರ ಮಾಡಿ ಸರಳವಾಗಿ ಹೋಗ್ಬಿಡಬಹುದು ಅಂತ. ಅದು actually ಎಲ್ರಿಗು ತೀವ್ರವಾಗಿ ಅನಿಸ್ತಿರುತ್ತೆ. ನನಗೂ ಹಂಗೇನೆ ಅನಿಸ್ತಿರುತ್ತೆ. ಈ ಬಿಟ್ಟು ಹೋಗೋದು ಅನ್ನೊ ಒಂದು ವೈಯಕ್ತಿಕ ತುಡಿತ ಅದು. ಅದರ ಅರ್ಥ, ಆಧ್ಯಾತ್ಮಿಕ ತುಡಿತವೂ ಹೌದದು. ಆಧ್ಯಾತ್ಮ ಅಂದ್ರೆ ನಾನು ಬಹಳ ವಿಶಾಲವಾದ ನೆಲೆಯಲ್ಲಿ ಹೇಳ್ತಿದ್ದೀನಿ.

 ನಾನೊಬ್ಬ ನಾಸ್ತಿಕ ನಾನು. ಯಾವ ಧಾರ್ಮಿಕ ಪಂಥದಲ್ಲೂ ನಂಬಿಕೆಯಿಲ್ಲದವನು. actually nihilist ತರ ಇದೀನಿ ನಾನು. ಎಷ್ಟೋ ವಿಚಾರಗಳನ್ನ, ಎಲ್ಲವನ್ನ ತಿರಸ್ಕಾರ ಮಾಡೋದು ಅಂತಲ್ಲ ಅದು, ಯಾವ್ದನ್ನೇ ನೀವು ಟೆಸ್ಟ್ ಮಾಡಿದಾಗ ಅದು ಒಂದು ಹಂತದಲ್ಲಿ ಟೊಳ್ಳು ಅಂತ ಗೊತ್ತಾದ ಮೇಲೆ ಎಲ್ಲವನ್ನೂ 1-2-3-4 ನೂರರ ವರೆಗೆ ಟೆಸ್ಟ್ ಮಾಡಿ ಮಾಡಿ ಮಾಡಿ ತಿರಸ್ಕರಿಸುವ ಅಗತ್ಯ ಇರಲ್ಲ ಎಷ್ಟೋ ಸಲ.

ಸೊ, ಆ ತರದ್ದೊಂದು ತಿರಸ್ಕಾರದ ಭಾವನೆನೂ ಇರುತ್ತೆ ಮನಸ್ನಲ್ಲಿ. ಸೊ, ಹಂಗಾಗಿನೆ ಅದು actually ನನ್ನ ತುಡಿತವೆ ಅದು. ನಮ್ಮ ತಂದೆಯವರು ಆ ತರ ಇದ್ರು actually. ಅವರೇನು ಮಾಡೋವ್ರು ಅಂದ್ರೆ ಅವರು ಆವಾಗಾವಾಗ disappear ಆಗ್ತಾ ಇದ್ರು. disappear in the sense, ಅವರೇನು ಕಾಶಿಗೋ ಬದ್ರಿಗೋ ಹೋಗ್ತಿರಲಿಲ್ಲ. He used to go to my relatives. ನಮ್ಮ ಸಂಬಂಧಿಕರು ಎಲ್ಲೆಲ್ಲಿದ್ದಾರೆ ಅಲ್ಲಿ ಹೋಗಿ ಸುಮ್ನೆ ಒಂದು ತಿಂಗಳು, ಎರಡು ತಿಂಗಳು ಇರೋರು. ಬಹಳ ಆತಂಕ ಆಗ್ತಾ ಇತ್ತು ಮನೇಲಿ. ಮೊದಲೇ ಮನೇಲಿ ಆರ್ಥಿಕ ನೆಲೆಗಳು ಅಷ್ಟು ಚೆನ್ನಾಗಿರಲಿಲ್ಲ. ನಮ್ಮ ತಾಯಿಗೆ ತುಂಬ tenssion ಆಗಿಬಿಡೋದು. ಆಮೇಲೆ ಯಾವತ್ತೊ ಒಂದಿನ ಕಾಗದ ಬರೆಯೋರು, ನಾನಿಲ್ಲಿದೀನಿ, ಈ ತರದ ಮನುಷ್ಯ. ಸೊ, tension create ಮಾಡ್ತಾ ಇದ್ರು. ಈಗ ನನಗೆ, ನನಗೂ ಆ ತರಾನೆ ಎಷ್ಟೋ ಸಲ ಅನ್ಸೊದಿರುತ್ತೆ. ಆವಾಗ ನನಗೆ ಭಾಳ ಸಿಟ್ಟು ಬರ್ತಾ ಇತ್ತು. ಏನು ಬಹಳ irresponsible ಇದಾರೆ ಈ ಮನುಷ್ಯ. actually ನಮ್ಮ ತಂದೆ ಮೇಲೆ ಭಾಳ ದ್ವೇಷ ಇತ್ತು ನನಗೆ, ಆರಂಭಿಕ ದಿನಗಳಲ್ಲಿ. ಬಟ್ ಅದನ್ನು ಹೇಗೊ resolve ಮಾಡಿದೀನಿ. ಬಟ್ ಈಗ ನಮ್ ತಾಯಿಗಿಂತ ನಮ್ಮ ತಂದೆಯವರ ಪ್ರಭಾವನೇ ತುಂಬ ಇದೆ ನನ್ಮೇಲೆ, ವ್ಯಕ್ತಿತ್ವನಾ ಕಟ್ಟಿಕೊಡಬೇಕಾದ್ರೆ. He was extremely creative. ಏನನ್ನೆ ಒಂದು ಕಲೆಯಾಗಿ ಸೃಷ್ಟಿ ಮಾಡಬಲ್ಲ ಒಂದು ಗುಣ ಇತ್ತು ಅವರಿಗೆ. ಅದು ಬಹಳಷ್ಟಿದೆ ನನ್ನಲ್ಲಿ.

ಅಂದ್ರೆ ಅದು ಎಲ್ಲಾ ಮನುಷ್ಯನಲ್ಲು ಇರುತ್ತೆ ಆತರದ್ದೊಂದು. ನಿರಾಕರಣೆ ಅಂತ ನಾವು ಹೇಳ್ತಾ ಇದೀವಿ. ಬಟ್ ನಿರಾಕರಣೆಯನ್ನ ಅವನು ಇನ್ನೊಂದೇನೋ ಉನ್ನತವಾದದ್ದನ್ನ ಪಡಕೊಳ್ಳೋಕೆ ಮಾಡ್ತಾ ಇರ್ತಾನವನು, ಆ ನಿರಾಕರಣೆಯನ್ನ. ನನಗೆ, ಒಬ್ಬ ಒಂದು ಸಂಸಾರವನ್ನು ತ್ಯಜಿಸಿ ಹೋಗೋದು, ಆ ಕುಟುಂಬಕ್ಕೆ ಒಂದು ದೊಡ್ಡ ಆಘಾತಕಾರಿ ವಿಷಯ ಆಗಿರುತ್ತೆ. ಆದ್ರೆ, ಅವನ ನಿಲುವಿದೆಯಲ್ಲ, ಆಧ್ಯಾತ್ಮಿಕ ನಿಲುವಿರಬಹುದು ಅಥವಾ ಇನ್ನೇನೇ ನಿಲುವಿರಬಹುದು, ಆವಾಗ ಅದೇ ಅವ್ನಿಗೆ ಮುಖ್ಯವಾಗಿ ಕಾಣ್ತಿರುತ್ತೆ ಮತ್ತು ಅದೇ ಅವನಿಗೆ ಜೀವನಕ್ಕೆ ತೃಪ್ತಿಯನ್ನು ತಗೊಂಡು ಬರುವಂಥದ್ದಾಗಿರುತ್ತೆ. ಹಾಗಂತ ಯೋಚ್ನೆ ಮಾಡಿದ್ರಿಂದ ಹಂಗೆ ತಿರಸ್ಕಾರ ಮಾಡಿ ಹೋಗ್ತಾ ಇರ್ತಾರವ್ರು. ಬಟ್ realisation point ಕೂಡ ಒಂದಿರುತ್ತೆ. ಸೊ ಅದಕ್ಕಾಗಿ ಸ್ವಲ್ಪ ಸಮಯ ಆದ್ಮೇಲೆ ಎಷ್ಟೋ ಕಡೆ ವಾಪಾಸ್ ಬರ್ತಾರವರು. actually ಆತ್ಮಹತ್ಯೆ ಅಥವಾ ಸಂಪೂರ್ಣ ತಿರಸ್ಕಾರ ಅನ್ನೋ ತರ ನಾನೆಲ್ಲು ನೋಡಿಲ್ಲ. ಈಗ ನೀವು ಹೇಳಿದಾಗ ‘ಊರ ಮಧ್ಯದ ಕಣ್ಣ ಕಾಡಿನೊಳಗೆ’ ಆ ತರದ್ದೊಂದು episode ಬರುತ್ತೆ ಅಂತ ಸಂಪೂರ್ಣವಾಗಿ ನೆನಪಿಲ್ಲ ನನಗೆ, ಬಟ್ I have to recall it.

ಆದ್ರೆ ತಾಂತ್ರಿಕವಾಗಿ ನಾನೆಲ್ಲು ಯೋಚ್ನೆ ಮಾಡಿರಲ್ಲ ನಾನು ಆ ತರ. ಪ್ಲಾಟಿಂಗ್ ಅಥವಾ ಸಿದ್ಧ ಮಾದರಿ ಎಲ್ಲೂ ಇರಲ್ಲ ನನ್ನ ಕತೆಗಳಲ್ಲಿ. ಕೆಲವೊಂದು characters ಬರೀಬೇಕಾದಾಗ, ಎಷ್ಟೋ ಸಲ ಅಲ್ಲಿ ನನಗೇ ಗೊತ್ತಿಲ್ಲದಂತೆ ಬಂದಿರೋದೂ ಇರುತ್ತೆ. ಆದ್ರೆ, ಅವು ಏನೋ ಒಂದು ಎಫೆಕ್ಟ್ ಸೃಷ್ಟಿ ಮಾಡ್ಬೇಕು ಅಂತ ಬಂದಿರಲ್ಲ. ಅಥವಾ ಒಂದು ಪ್ಲಾಟ್‌ನ ತಂತ್ರವಾಗಿ ತಂದಿರಲ್ಲ. ಸೊ ಇದನ್ನ ನಾನು ಮರ್ತಿದ್ದೆ, ಈ ಕತೆಯನ್ನ.

ಒಂದೇನಂದ್ರೆ ಅವ್ನಿಗೆ ತುಂಬ contradictions ಇವೆ. ಆ contradictions ಯಾವ ತರದ್ದಿದೆ ಅಂದ್ರೆ ಆ ಪಾಪಪ್ರಜ್ಞೆ ಮತ್ತೆ ಅವನೇನಾಗ್ಬೇಕಂತಿದ್ದ ಅದಾಗ್ದೆ ಇರೋದು ಈ ತರದ್ದೆಲ್ಲ ತುಂಬ contradictions ಇವೆ ಅವ್ನಿಗೆ. ಸೊ ಅದು ಅದ್ರಲ್ಲೆಲ್ಲೊ ಒಂದ್ಕಡೆ ಬಂದಿದೆ ಅಂತನ್ಸುತ್ತೆ ಇದು. ಬಟ್ ಅದ್ರಲ್ಲಿ ಅವ್ನು ಎಲ್ಲ ಹಿಪಾಕ್ರಸಿ ಇದ್ಯಲ್ಲ, ಯಾವುದರ ವಿರುದ್ಧ ಎಲ್ಲ ಹೋರಾಟ ಮಾಡಿರ್ತಾನೊ ಅದ್ರಲ್ಲೆ ನಾ ಜೀವನ ಮಾಡಬೇಕಾದ್ರೆ ಯಾಕೆ ಮಾಡ್ಬೇಕು ಅಂತನ್ನೋದು. ಆ ತರ ಒಂದು ಪ್ರಶ್ನೆ ಎಲ್ಲ ಕಡೆ ಇರುತ್ತೆ. ಅದ್ಕೆ ಬೇರೆ ಬೇರೆ ಕತೆಯಲ್ಲುನು ಅದೇ ತರ ಬಂದಿದೆ ಅದು. even ಸುನಯನ ಕತೆಯಲ್ಲಿನು ಇದೆ ಅದು. ಅದು ಬದುಕಿನ ತೀವ್ರವಾದ ವ್ಯಾಮೋಹದಿಂದ, ತಾನೀತರ ಜೀವನವೇ ಮಾಡಕ್ಕಾಗಲ್ಲ ಅಂತಾದಾಗ ನಾನಿನ್ಯಾಕೆ ಬದುಕಿರಬೇಕು ಎಂತ ಎಷ್ಟೋ ಜನ ಸೂಯಿಸೈಡ್ ಮಾಡ್ಕೋತಾರೆ. ಅದು actually ಅಂತಿಮ ತಿರಸ್ಕಾರ ಅದು, ಸಮಾಜಕ್ಕೆ.

ಸೂಯಿಸೈಡ್ ನಾವು ನೋಡುವಾಗ ಒಬ್ಬ ಮನುಷ್ಯ ಸಮಾಜದಲ್ಲೆ ಇದ್ದು ಬಂಡಾಯ ಏಳುವುದಕ್ಕಿಂತ ಜಾಸ್ತಿ force ಬೇಕಾಗುತ್ತೆ ಅದಕ್ಕೆ. actually ಅದ್ರ ಬಗ್ಗೆನೆ ನಾನೆಲ್ಲೊ ಒಂದ್ಕಡೆ article ಬರ್ದಿದೀನಿ ಅನ್ಸುತ್ತೆ. ನೇರಳೆಮರದಲ್ಲಿ ಒಂದು ಪ್ರಬಂಧ ಇದೆ. ಅಂದ್ರೆ, ಆತ್ಮಹತ್ಯೆಯ ಬೇರೆ ವಿವಿಧ ರೂಪಗಳಿರುತ್ವಲ್ಲ. ಅದಕ್ಕೆ ನಾವು ಬೇರೆ ಬೇರೆ dimensions ಕೊಡ್ತಾ ಇದೀವಿ. ಇದನ್ನ ನೀವು ಈಗ ರಾಜಕೀಯವಾಗಿ ನೋಡಿದ್ರೆ, ಎಷ್ಟೊಂದು ವ್ಯವಸ್ಥಿತವಾದ ಒಂದು ರಾಜಕೀಯ ಸಂಚಾಗಿ ಪರಿವರ್ತನೆಗೊಂಡಿದೆ ಅಂದ್ರೆ ನಮ್ಮಲ್ಲಿ ಈ ಆತ್ಮಹತ್ಯಾ ದಾಳಿಕೋರರೇ ಇದ್ದಾರೆ. ಸೂಯಿಸೈಡ್ ಸ್ಕ್ವ್ಯಾಡ್ಸ್ ಅಂತ. LTTE ಯಂತೂ ಅದ್ರಲ್ಲಿ ಒಂದು extreme ಪರಿಣತಿಯನ್ನು ಸಾಧಿಸಿಬಿಟ್ಟಿತ್ತು. ಈಗ ಅಲ್ ಖೈದಾ, ಫಿದಾ ಗ್ರೂಪಿನವರಿದ್ದಾರೆ, ಅಲ್ ಖೈದಾದವರೆ, they have trained suicide squades. ಅಂದ್ರೆ ಇದಕ್ಕೊಂದು ರಾಜಕೀಯ ಸಿದ್ಧಾಂತ ಬೆರೆಸಿಬಿಟ್ರೆ ನೀವು, people are so mad about it. ಬಟ್ ಇಲ್ಲಿ ಅದಲ್ಲ ಇಲ್ಲಿ.

ಏನಂದ್ರೆ ಒಂದು ಜೀವನಕ್ಕೆ ಜೀವನದ ಎಲ್ಲಾ ದಾರಿಗಳೂ close ಆಗಿ ಬಿಟ್ಟಾಗ, ಒಂದು ಮುಂದುಗಡೆ ಇರೋ ಗೋಡೆಗೆ ಒದ್ದು ಒದ್ದು ನಾನು ದಾರಿ ಮಾಡ್ಕೋಬೇಕು. ಇಲ್ಲದಿದ್ರೆ ಅಲ್ಲೇ ಕೂತ್ಕೊಂಡು ಸಾಯ್ಬೇಕು ಅಷ್ಟೆ. ಸೊ, ಇವೆರಡರಲ್ಲಿ ಯಾವ್ದನ್ನು ಆಯ್ಕೆ ಮಾಡ್ಕೋತೀವಿ ಅನ್ನೋದು ನಮ್ಮ ವಿಲ್‌ಪವರ್‌ನಲ್ಲೇನೆ ಇರುತ್ತೆ ಅದು.

ಬಟ್ ಅದನ್ನ ತಂತ್ರವಾಗಿಯಂತೂ ನಾನದನ್ನ ಎಲ್ಲೂ ಬಳಸಿಕೊಂಡಿಲ್ಲ. ಮತ್ತೆ ನಾನು ಕತೆ ಬರೆಯೋವಾಗ ಒಂದು ಕತೆಗೂ ಇನ್ನೊಂದು ಕತೆಗೂ ನಾನು ಆ ತರ ಯೋಚ್ನೆ ಮಾಡಿ ಎಲ್ಲು ಬರೆದಿರೋಲ್ಲ. ಆಮೇಲೆ ಸಾಮಾನ್ಯವಾಗಿ ನಾನು ಕತೆ ಬರೆಯೋ ಅವಧಿ ಇದ್ಯಲ್ಲ, ಅದು ಜಾಸ್ತೀನೆ ಇರುತ್ತೆ. ಸಾಮಾನ್ಯವಾಗಿ ನೀವು ಕತೆಗಾರರನ್ನ ನೋಡಿದ್ರೆ ಆ ತರ prolific writer ಅಲ್ಲ ನಾನು. ಕೆಲವು ಕಡೆ ನಾನು ಮೂರು-ನಾಲ್ಕು-ಐದು ಕೆಲವು ಕಡೆ ಎಂಟೆಂಟು ವರ್ಷ ಗ್ಯಾಪಿದೆ ನನ್ನ ಒಂದು ಕತೆಗೂ ಇನ್ನೊಂದಕ್ಕು. ಈಗ ಹೆಚ್ಚು ಕಡಿಮೆ ಎರಡು ವರ್ಷದ ಮೇಲಾಯ್ತು ನಾನು ಕೊನೆಯ ಕತೆ ಬರೆದು. ಅಂದ್ರೆ ನಾನು ಕತೆ ಬರೆಯೋದೆ ಒಂದು ತುಡಿತ ಆಗಿರಲ್ಲ ನನಗೆ. ಒಂದು ಕತೆನ ನಾನು ಮೂರ್ನಾಲ್ಕು ವರ್ಷದಿಂದ ಬರೀಬೇಕು ಬರೀಬೇಕು ಅಂತ ತೀವ್ರವಾಗಿ ಅಂದ್ಕೋಳ್ತಾ ಇದ್ರುನು ಆಗ್ತಾ ಇಲ್ಲ ನನ್ಗದು. ಸೊ, unless i am convinced mentally myself that I have to write this, ನಾನು ಬರೀಲಿಕ್ಕೆ ಹೋಗಲ್ಲ. ಸೊ ಹೀಗಾಗಿ ಅದ್ರ ತಂತ್ರದ ಭಾಗವಾಗಿ ಎಲ್ಲೂ ಮುಂದುವರಿಸ್ಕೊಂಡು ನಾ ಬಂದಿರಲ್ಲ. ಅದೆಲ್ಲೊ subconscious levelನಲ್ಲಿ ಮತ್ತೆ ಮತ್ತೆ ಕೆಲವು ವಿಷಯಗಳು ಬರ್ತಾ ಇರಬೋದು. ಅಷ್ಟೊಂದು ನನ್ನ ಅದು ಕಾಡಿರಬಹುದು ಅಷ್ಟೆ.

ಮತ್ತೆ ಆತ್ಮನಿವೇದನೆಯ, ಅದು ಕೂಡ ತಂತ್ರವಾಗಿಯೇನೂ ಅಲ್ಲ. ಅಂದ್ರೆ ನನಗೆ ಒಂದನ್ನ ಆ ತನಕ ಹೇಳಿರೋ ರೀತೀಲಿ ಹೇಳೊಕ್ಕಾಗಲ್ಲ ಅನಿಸಿದಾಗ ಇದುವರೆಗೆ ಹೇಳಿರೋ ರೀತಿನ ಮತ್ತೆ ಮತ್ತೆ ಒಡೆದು ಇನ್ನೇನೊ ಹೇಳದೇ ಇದ್ರೆ ಅದನ್ನ ಹೇಳಕ್ಕಾಗಲ್ಲ ಅನಿಸಿದಾಗ ಹಾಗೆ ಮಾಡಿರಬಹುದು. ಸಮೀರನ ಸ್ವಗತಾನು ಅಷ್ಟೆನೆ. ಕತೆ ಬಹಳ bitter ಆಗಿ end ಆಗುತ್ತದು. ಆಮೇಲೆ ನನಗೂ ಗೊತ್ತಿಲ್ಲ ಏನಾಯ್ತು ಅಂತ. ಸೊ ನನ್ ಕತೆಗಳಲ್ಲಿ ಆ ತರದ್ದೊಂದು ಅಂತ್ಯಗಳನ್ನ ನಾನು ಯಾವತ್ತು ನಿರ್ಧಾರ ಮಾಡಿರಲ್ಲ. ಮತ್ತು ಈಗ ಸಾಧಿಸಿರೋ ಅಂತ್ಯಗಳು ಬಹಳಷ್ಟು ರೂಪಕಗಳು ಅವು. very suggestive and symbolic ends. They are not dead ends. They lived thereafter happily ಅಂತ ಇಲ್ವೇ ಇಲ್ಲ. ಅಂದ್ರೆ ಅಷ್ಟೆ ಇರುತ್ತೆ ಯಾವಾಗ್ಲು. ಜೀವನಾನು ಹಾಗೇ ಇರುತ್ತೆ. ಒಂದನ್ನು ನಾವು ಮುಕ್ತಾಯಗೊಳಿಸಿ ಅಲ್ಲಿಗೇ ಬಿಟ್ಟಿರಲ್ಲ ಯಾವ್ದುನು. ಬೆಳೆಯುತ್ತೆ ಆಮೇಲೆ. ಯಾವ್ದೇ ಒಂದು ಬರಿ issueನೆ ಆಗಬೇಕಾಗಿಲ್ಲ. ನಂಬಿಕೆಗಳು, ಮೌಲ್ಯ, ಭಾವನೆಗಳು ಅದು ಮತ್ತೆಲ್ಲೊ ಓಪನ್ ಆಗುತ್ತದು. ಸೊ, ಹಂಗೆ ನನಗೆ ಯಾವಾಗ್ಲು ಇಷ್ಟೇ ಮಾಡೋಕೆ ಸಾಧ್ಯ ಇದೆ ಇಲ್ಲಿ ಈ ಕ್ಷಣಕ್ಕೆ ಅನಿಸಿದಾಗ ನಾನು ಮುಗಿಸಿರ್ತೀನಿ ಅಷ್ಟೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, August 5, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಐದು

ಇವತ್ತಿನ ಮೂಲಭೂತವಾದದತ್ತ ಆಕರ್ಷಣೆ ಬೆಳೆಸಿಕೊಳ್ಳುತ್ತಿರುವ ಯುವ ಸಮುದಾಯದ ಆಳದ ಬಂಡಾಯ, ಪ್ರತಿರೋಧದ ಬಯಕೆ, ಭುಗಿಲೇಳುವ ಬಯಕೆ - ಇವುಗಳನ್ನ ನೀವು ಅದೇ ಪಾತಳಿಯಿಂದ
[ "ತತ್‌ಕ್ಷಣದ ಶೋಷಣೆಯ ಕಾರಣಗಳು ಇಲ್ಲದಾಗಲೂ ಮನಸ್ಸೊಂದು ಕ್ರಾಂತಿಕಾರಿಯಾಗಲು ಯಾಕೆ ಹಾತೊರೆಯುತ್ತದೆ? ಯಾಕೆ ಬಂಡಾಯವೇಳುತ್ತದೆ? ಸರಳವಾಗಿ ಹೇಳುವುದಾದರೆ, ಇನ್ನಷ್ಟು ತೀವ್ರವಾದ ಸಂಬಂಧಗಳ ಅಗತ್ಯಕ್ಕಾಗಿ." ] ನೋಡುತ್ತೀರಾ ಅಥವಾ ಅದನ್ನು ಬೇರೆ ತರ ವಿಶ್ಲೇಷಿಸುತ್ತೀರ?

ಆ ತರದ ಭಾವುಕ ಪ್ರವಾಹ ಒಂದು ಇದೆಯಲ್ಲ, ಏನಂದ್ರೆ, ಯಾವಾಗ್ಲುನು ಸಮಾಜ ಏನು ಸ್ಥಗಿತವಾಗಿರಲ್ಲ. ಸಮಾಜ, ಬಹಳ ಚಲನಶೀಲವಾದ ಗುಣ ಅದರದ್ದು. ಸಮಾಜದ ಗುಣವೇ ಚಲನಶೀಲತೆ. ಈಗ ಒಂದು ಸಮಾಜ ಅಂದ್ಮೇಲೆ ಯೂತ್ಸು ಇರ್ತಾರೆ ಅದ್ರಲ್ಲಿ ಮತ್ತು ಯಾವ್ದೇ ಒಂದು ಸಮಾಜದಲ್ಲಿ ಯುವಕರೇ ಒಂದು ಸಮಾಜವನ್ನ ಕಟ್ಟೋವರಾಗಿರ್ತಾರೆ . ಯಾಕಂದ್ರೆ ಅವ್ರಿಗೆ ಆ ಶಕ್ತಿ, force ಇರುತ್ತೆ, ಉಳಿದವರ್ಯಾರಿಗೂ ಇರಲ್ಲ. ಬಟ್ ಅದನ್ನ ದಾಟಿ ಮುಂದೆ ಹೋಗಿರ್ತಾರಲ್ಲ, ಅವರನ್ನ ಗಮನಿಸಿದ್ರೆ ಎರಡು ತರದ ಪ್ರಶ್ನೆ ಇರುತ್ತೆ ಇಲ್ಲಿ.

ಒಂದು, ನಿರಂತರವಾಗಿ ಈ ತರದ್ದೊಂದು ಪ್ರವಾಹ ಇದ್ದೇ ಇರುತ್ತೆ. ಆದ್ರೆ ಈ ಪ್ರವಾಹವನ್ನ ರಾಜಕೀಯವಾಗಿ ನಿಯಂತ್ರಣ ಮಾಡುವಂಥದ್ದು ಎಲ್ಲಾ ಕಾಲ್ದಲ್ಲು ಇದ್ದೇ ಇರುತ್ತೆ. ಈಗ ನೋಡಿ, ಸಹಜವಾದ ನೀರಿನ ಪ್ರವಾಹ ತಗೊಂಡ್ರುನು ನಾವು ಡ್ಯಾಮ್ ಕಟ್ತೀವಲ್ಲ, ಅದು ರಾಜಕೀಯ ಅದು. ನಿನ್ನನ್ನ ಅಲ್ಲಿ ನಿಲ್ಲಿಸ್ತೀವಿ ಅನ್ನೋದು, ಅದು ರಾಜಕೀಯ.

ಈಗ ಆ ಪ್ರವಾಹವನ್ನ ನೋಡಿದ್ರೆ, ಅದಕ್ಕೆ ಕೂಡ ಒಂದು ರಾಜಕೀಯ ಚೌಕಟ್ಟು ಯಾವಾಗ್ಲುನು ಇರುತ್ತೆ. ಎಪ್ಪತ್ತರ ದಶಕ ಅಥವಾ ಆ ನಂತರದ್ದು, ಒಟ್ಟಾರೆ ಆ ಕಾಲದ ಒಂದು ರಾಜಕೀಯ ಸಿದ್ಧಾಂತಗಳಿವೆಯಲ್ಲ, ಎಲ್ಲ ಒಂದಕ್ಕೊಂದು ಒಂದಕ್ಕೊಂದು ಕೊಂಡಿ ತರ ಇವೆ ಅವು. ಈಗ ನಮ್ಮ ರಾಜಕೀಯ ಸಿದ್ಧಾಂತ ಇದೆಯಲ್ಲ, ಅದು ಯಾವಾಗ್ಲುನು ಒಂದು larger ಆದದ್ದಕ್ಕೆ connect ಆಗಿರುತ್ತೆ. ಒಂದು ವಿಶ್ವಕ್ಕೆ connect ಆಗಿರುತ್ತದು. ಸೊ, ಆಗಿನ ರಾಜಕೀಯ ಸಿದ್ಧಾಂತಗಳನ್ನ ನೀವು ನೋಡಿದ್ರೆ, ನಮ್ಮಲ್ಲಿ ಸಹಜವಾಗಿನೆ ಮಾರ್ಕ್ಸ್‌ವಾದವನ್ನ ಒಂದು ಆಶಾವಾದಿ ನೆಲೆಯಲ್ಲಿ accept ಮಾಡ್ಕೊಂಡಿದ್ವಿ. ಇದು ಸ್ವಾತಂತ್ರ್ಯದ ನಂತರ, ಅದರ ಪೂರ್ವದ್ದಲ್ಲ. ನೆಹರೂ ಅವರು ಬಹಳ ವಿಶಾಲವಾದ ನೆಲೆಯಲ್ಲಿ ಮಾರ್ಕ್ಸ್‌ವಾದವನ್ನ ಒಪ್ಪಿದ್ರು. ಯಾಕಂದ್ರೆ ರಷ್ಯಾದಿಂದ ಅವ್ರಿಗೆ ರಾಜಕೀಯ ಲಾಭಗಳು ಇದ್ವು. ಅಥವಾ ಅವರ ಉದ್ದೇಶವೂ actually ಪ್ರಾಮಾಣಿಕವಾಗಿದ್ದಿರಬಹುದು. ಅದರ failures ಏನೇ ಇರ್ಲಿ. ನೆಹರೂ ಸಿದ್ಧಾಂತದ failures ಏನೇ ಇದ್ರುನು ಯಾವ್ದೇ ಸಮಾಜವನ್ನ ಹಿಂದಕ್ಕೆ ತಗೊಂಡು ಹೋಗ್ಬೇಕು ಅನ್ನತಕ್ಕಂಥದು ಖಂಡಿತಾ ಇರ್ಲಿಲ್ಲ. ಅಂದ್ರೆ ಈ ಸಿದ್ಧಾಂತಗಳನ್ನ ನಾವು ಒಂದು ದೇಶವಾಗಿ ಒಪ್ಪೋದೊಂದಿರುತ್ತೆ, ರಾಜಕೀಯವಾಗಿ ನಾನು ಹೇಳ್ತಾ ಇರೋದು. ಮತ್ತು ವೈಯಕ್ತಿಕ ನೆಲೆಯಲ್ಲಿ ಒಪ್ಪೋವಂತ ಒಂದು ಸಿದ್ಧಾಂತ ಇರುತ್ತೆ. ಸೊ. ಇದು ಆ ದಶಕಗಳಲ್ಲಿ ನೀವು ನೋಡಿದ್ರೆ, ಇಡೀ ದೇಶದ ನೆಲೆಯಲ್ಲೂ ವಿಶಾಲವಾಗಿ ನಾವು ಒಪ್ಪಿರೋ ಸಿದ್ಧಾಂತನು ಅದೇ ಆಗಿತ್ತು. ಸಮಾಜಕ್ಕೆ ಸ್ವಾತಂತ್ರ್ಯ ಮತ್ತು discrimination ಇಲ್ದೇ ಇರೋದು, ನೆಹರೂ ಅವರ ಸಿದ್ಧಾಂತದಲ್ಲಿ ಇತ್ತು. ಆಮೇಲೆ ನಮ್ಮ ಘೋಷಣೆಗಳೂ ಅವೇ ಇವೆ. ಸ್ವಾತಂತ್ರ್ಯದ ಘೋಷಣೆಗಳನ್ನ ನೋಡಿದ್ರೆ ನೀವು, ಅದು ಮಾರ್ಕ್ಸ್‌ವಾದಕ್ಕೆ ಪೂರಕವಾಗಿತ್ತು. ಮಾರ್ಕ್ಸ್‌ವಾದಿ ಸಿದ್ಧಾಂತಗಳನ್ನ ಪ್ರಚಾರ ಮಾಡೋಕೆ ಅವಕಾಶವಿತ್ತು ಇವರಿಗೆ. ಅದಕ್ಕೆ ರಷ್ಯನ್ ಪಬ್ಲಿಕೇಶನ್ಸ್ ಅತ್ಯಂತ ಕಡಿಮೆ ದರದಲ್ಲಿ ಅಥವಾ ಕೆಲವು ಸಲ ಫ್ರೀಯಾಗಿನೂ ಕೊಟ್ಟಿದ್ದಾರೆ. ಅಂದ್ರೆ ಸಿದ್ಧಾಂತವಾಗಿ ಇದನ್ನ promote ಮಾಡೋಕೆ ಅವಕಾಶ ಇದ್ದಿದ್ರಿಂದ, ಆ ಕಾಲದ ಯೂತ್ಸ್ ಇದ್ದಾರಲ್ಲ ಅವರು ಈ ಮಾರ್ಗದಲ್ಲಿ ಆಸಕ್ತರಾಗಿದ್ದರು, ಆವಾಗಿನ ಪ್ರವಾಹದ ರಾಜಕೀಯ ಚೌಕಟ್ಟು ಈ ತರ ಇತ್ತು.
ಅಂದ್ರೆ ultimately ನನಗನಿಸೋದು, ಈಗ ಯಾವ್ದೇ ಪ್ರಗತಿಪರವಾದ ಸಿದ್ಧಾಂತವನ್ನ ತಗೊಳ್ಳಿ. ಅದ್ರಿಂದ ಸಮಾಜಕ್ಕೆ ಹಾನಿ ಖಂಡಿತ ಆಗಲ್ಲ. ಕೆಲವು perversions ಇರುತ್ತೆ. ಯಾವುದೇ ಸಮಾಜದಲ್ಲಿ ಅದು side affects ಅನ್ನೋದು ಇರುತ್ತೆ. ಸೋವಿಯತ್ ರಷ್ಯಾದ ಬಗ್ಗೆ ಮಾತಾಡ್ತ ಇಲ್ಲ. ಯಾವುದೇ ಒಂದು ಪ್ರಗತಿಪರ ಆಶಯವಿರುವಂಥ ಸಿದ್ಧಾಂತದ ಬಗ್ಗೆ. ಅಂದ್ರೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೆಲಸ ಮಾಡುವಂಥದ್ದು, ಸೊ ಇಡೀ ದೇಶದ ಆಲೋಚನಾ ವಿಧಾನ ಆ ತರ ಇತ್ತು ಆವಾಗ. ಸೊ, ಯೂತ್ಸ್ ಬಹುಪಾಲು ಯೂತ್ಸ್ ಅದ್ರಲ್ಲಿ ಪಾಲ್ಗೊಂಡಿದ್ರೆ, ಅವರು towards good things they were moveing.

ಬಟ್ ಈವಾಗ ನೀವದರ ವಿರುದ್ಧವಾದ ನೆಲೆಯಲ್ಲಿ ನೋಡಿದ್ರೆ, ಒಂದು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆದ ಬಹಳಷ್ಟು ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳು ಬಹಳ ಮುಖ್ಯವಾಗಿವೆ. ಈ ತರದ್ದೇನಾದ್ರು ಒಂದು ಇಡೀ ವಿಶ್ವದಲ್ಲೆ ಬದಲಾವಣೆ ಆಗಿದ್ದಿದ್ರೆ, ಭಾವುಕ ನೆಲೆಯಲ್ಲಿ, ಮುಖ್ಯವಾಗಿ ಅದಕ್ಕೆ ಬಹಳಷ್ಟು ಕಾರಣಗಳಿರುತ್ವೆ.

Atleast pre-soviet era, collpase ಆಗೋದಕ್ಕಿಂತ ಮುಂಚೆ, ನಮಗೆ ಎರಡು ತರದ ಬದಲಾವಣೆಗಳು ಸಾಧ್ಯ ಇದೆ ಈ ಜಗತ್ತಿಗೆ ಅಂತ ನಾವು ನೋಡೋದು ಸಾಧ್ಯ ಇತ್ತು. ಒಂದು ಮಾರ್ಕ್ಸ್‌ವಾದವನ್ನ ಒಪ್ಕೊಂಡಿರೋವಂಥ ಕಮ್ಯುನಿಸ್ಟ್ ದೇಶಗಳ ಬೆಳವಣಿಗೆ. ಇನ್ನೊಂದು Capitalismನ್ನ ಒಪ್ಕೊಂಡಿರೋವಂಥ ಅಮೆರಿಕ ಅಥವಾ ಯುರೋಪಿಯನ್ ಕೆಲವು ರಾಷ್ಟ್ರಗಳದ್ದು. ಬಟ್ ಈಗ, ಸೋವಿಯತ್ ರಷ್ಯಾದ ಪತನ ಇದೆಯಲ್ಲ, ಅದು ವಿಶ್ವಕ್ಕೆ ಭಾಳ ಒಂದು, ರಾಜಕೀಯವಾದ ದೊಡ್ಡ ಆಘಾತ ಅದು. ಅದು ಯಾವತ್ತೂನು ಆಗ್ಬಾರ್ದಾಗಿತ್ತದು. ಆದರೆ ದೌರ್ಭಾಗ್ಯವಶಾತ್ ಎಲ್ಲಾ ವ್ಯವಸ್ಥೆಗಳು ಮನುಷ್ಯರಿಂದಲೇ ನಡೆಯೋದ್ರಿಂದ, - ಇದು ಬಹಳ ತಲೆಕೆಡಿಸಿಕೊಂಡಿದೀನಿ actually ನಾನು. ಅಂಗದ ಧರೆ ಗಮನಿಸಿದ್ರು ಅದರಲ್ಲಿ ಇದೇ ಬರುತ್ತೆ, ಅದಿಲ್ಲಿ ಬೇಡ, ಆಮೇಲೆ ಹೇಳ್ತೀನಿ. 


ಈ ಚೌಕಟ್ಟುಗಳಿರುತ್ತವಲ್ಲ, ಈ ಚೌಕಟ್ಟುಗಳನ್ನ ಮೀರೋದೊಂದಿರುತ್ತೆ ಮತ್ತು ರಚನೆ ಮಾಡೋದೊಂದಿರುತ್ತೆ ಯಾವಾಗ್ಲುನು. ರಚನೆ ಮತ್ತು ವಿಘಟನೆ ಎರಡೂ ಒಟ್ಟೊಟ್ಟಿಗೆ ಒಟ್ಟೊಟ್ಟಿಗೆ ನಡೀತಾ ಇರುತ್ತೆ. ಸೊ, ಈ ವಿಘಟನೆ ಇದೆಯಲ್ಲ, ಸೊವಿಯತ್ ರಷ್ಯಾದ ವಿಘಟನೆ ಅಥವಾ ಸಿದ್ಧಾಂತದ, actually ಸಿದ್ಧಾಂತದ ಸೋಲಲ್ಲ ಅದು. ಬಟ್ ಸಾಮಾನ್ಯವಾಗಿ ಯಾವ ತರ ಸ್ವೀಕರಿಸ್ತೀವಿ ಅಂದ್ರೆ ನಾವು, ಒಬ್ಬ ಮನುಷ್ಯ ಸೋತ ಅಂದ್ರೆ ಅದು ಅವನ ಸಿದ್ಧಾಂತದ ಸೋಲು ಅಂತ ಬಹಳ ಬೇಗ ತೀರ್ಮಾನಮಾಡಿ ಬಿಡ್ತೀವಿ. conclusion ಅದು. ಆದರೆ ವ್ಯಕ್ತಿಗಳ ಸೋಲಷ್ಟೇ ಅದು. ಇಡೀ ಸೋವಿಯತ್ ಬ್ಲಾಕಿನ ಜೊತೆಗೆ ಯಾರು ಯಾರೆಲ್ಲ ಗುರುತಿಸಿಕೊಂಡಿದ್ರೋ ಮಾರ್ಕ್ಸ್‌ವಾದಿ ಸಿದ್ಧಾಂತದ ನೆಲೆಯಲ್ಲಿ, ಅವರ ಸೋಲಷ್ಟೆ ಅದು. ಬಟ್ ಒಂದು ಸಿದ್ಧಾಂತಕ್ಕೆ ನಾವದನ್ನ ಆರೋಪಿಸಿ ಬಿಟ್ವಿ. ಆಮೇಲೆ ಅದೇ ಕಾಲಕ್ಕೆ efforts ಇದೆಯಲ್ಲ, ಆ efforts ಕುಸಿದಿದ್ದರಿಂದ ವೈಯಕ್ತಿಕ ಇತಿಮಿತಿಗಳಲ್ಲಿ ಇನ್ನೊಂದು ವರ್ಗ ಇದೆಯಲ್ಲ, ಅಂದ್ರೆ ಬಂಡವಾಳಶಾಹಿ ವರ್ಗ ಏನಿದೆಯಲ್ಲ, ಅವರಿಗೆ "ನೋಡಿ ನಿಮ್ಗೇನು ಮಾಡಕ್ಕಾಗಲ್ಲ, actually ನಿಮಗಿರೋದು ಇದೊಂದೇ." ಅನ್ನೋದು ಸಾಧ್ಯ ಆಯ್ತು. ಅಂದ್ರೆ ಎರಡು ಮಾರ್ಗಗಳು merge ಆಗ್ಬಿಟ್ಟು ಒಂದೇ ಮಾರ್ಗ ಅಂತಾಗಿಬಿಡೋದಿದ್ಯಲ್ಲ, it is very dangerous. ಸೊ, ಬದಲಾವಣೆಯಾಗೋಕ್ಕಿರೋದು ಒಂದೇ ಮಾರ್ಗ ಅಂತಾದಾಗ ಬಹಳ uncomfortable ಇರುತ್ತೆ ಆ zoneನಲ್ಲಿ. ಅವ್ರೇನು ಮಾಡಿದ್ರು ಅಂತಂದ್ರೆ, actually ಮಾರ್ಕ್ಸ್‌ವಾದವನ್ನ defeat ಮಾಡ್ಬೇಕು ಅಂತ ಬಂಡವಾಳಶಾಹಿಗಳು ಮಾಡಿರೋದು ಎಲ್ಲರಿಗೂ ಗೊತ್ತೇ ಇದೆ. ಸಿಐಎ operations ಇರಬಹುದು, ಅಥವ insurgency ಬಳಸಿದ್ದಿರಬಹುದು, ಅಲ್ ಖೈದಾ ತರದ groupಗಳನ್ನ ಬೆಳೆಸಿದ್ದಿರಬಹುದು.


ಆದ್ರೆ ಈ Side affects ಇರುತ್ತಲ್ಲ; ಈಗ, ಕ್ಯಾನ್ಸರ್ ಟ್ರೀಟ್ ಮಾಡೋಕೆ ನೀವು ಕಿಮೊಥೆರಫಿ is the best available medicine; ಬಟ್ ಅದು ಕ್ರಿಯೇಟ್ ಮಾಡೋ side affects ಇದೆಯಲ್ಲ, ಅವನು ಸತ್ತೇ ಹೋಗ್ಬಿಡ್ತಾನದ್ರಲ್ಲಿ. ಅವನಿಗೆ ರೋಗನ cure ಮಾಡ್ಬೇಕಂತ ಉದ್ದೇಶ ಇದ್ರುನು ರೋಗಿಯನ್ನ ಸಾಯಿಸಿಬಿಡುತ್ತೆ ಅದು. ಸೊ, ಆಗ ಇವ್ರು ಬೆಳೆಸಿರೋದಿದ್ಯಲ್ಲ, ಅದು ಒಂದು ಮೂಲಭೂತವಾದವನ್ನ ಅತ್ಯಂತ ಪ್ರಬಲವಾಗಿ ಬೆಳೆಯೋಕೆ ಅವಕಾಶ ಮಾಡಿಕೊಡ್ತು. ಇಸ್ಲಾಮಿಕ್ ಮೂಲಭೂತವಾದ. ಸೊ ಅದನ್ನ ರಾಜಕೀಯವಾಗಿ encash ಮಾಡ್ಕೊಳ್ಳೋವಂಥ ಜನಗಳು ಎಲ್ಲಾ ಕಡೆಯಲ್ಲು ಇದ್ರು. ಸೊ, ಇಲ್ಲಿ ನಮ್ಮ ಹಿಂದೂ ಮೂಲಭೂತವಾದಿಗಳಿದ್ದಾರಲ್ಲ, ಅವ್ರಿಗೆ ಅತ್ಯಂತ ತಕ್ಷಣಕ್ಕೆ ಸಿಕ್ಕಿದ್ದು ಇದು. ಅಲ್ಲಿವರೆಗೂ ನೋಡಿ ಆರೆಸ್ಸೆಸ್ ಭಾರತದಲ್ಲಿ ಎಷ್ಟೋ ವರ್ಷಗಳಿಂದ ಇದೆ. ಬಟ್ ಅವ್ರು ಏನೇ ಪ್ರಯತ್ನ ಪಟ್ರು ಅವ್ರಿಗೆ ರಾಜಕೀಯವಾಗಿ ಪ್ರಬಲವಾದ ಶಕ್ತಿಯಾಗಿ emerge ಆಗೋಕೆ ಸಾಧ್ಯವಾಗಿರ್ಲಿಲ್ಲ. ಅಂದ್ರೆ ಈಗ ಅವರು ಒಳಗಡೆಯಿಂದ ಒಂದು ಅವಕಾಶಗಳನ್ನ ಹುಡುಕ್ತಾ ಇದ್ರಲ್ಲ, ಅದು ಹೊರಗಡೆಯಿಂದ ಅವಕಾಶ ಒದಗಿಸಿಕೊಡ್ತು. ಅಂದ್ರೆ ಯಾವ್ದೊ ಒಂದು issue ಮೇಲೆ. ಮುಂಚೆ ಆದ್ರೆ ಅವ್ರು ಹಿಂದು-ಮುಸ್ಲಿಂ ದ್ವೇಷವನ್ನು ಬಿತ್ತತಾ ಇದ್ರುನು ಅದು ಅಷ್ಟೇನೂ ಯಶಸ್ವಿ ರಾಜಕೀಯ ಪ್ರವಾಹ ಆಗಿರ್ಲಿಲ್ಲ. ಬಟ್ ಇಲ್ಲಿ ಇಸ್ಲಾಮಿಕ್ ಮೂಲಭೂತವಾದ ಬೆಳೀತಾ ಇದ್ದಾಗ ಅವ್ರಿಗೆ ಸುಲಭ ಆಗ್ಬಿಡ್ತು. ನೋಡಿ ಅವರು ಹಂಗ್ ಮಾಡ್ತಿದಾರೆ, ಹಿಂಗ್ ಮಾಡ್ತಿದಾರೆ. ಅಂದ್ರೆ ಅವ್ರಿಗೆ organise ಆಗಕ್ಕೆ ಒಂದು ಪೊಲಿಟಿಕಲ್ ವೆಪನನ್ನ ಈ ಸೋವಿಯತ್ ರಷ್ಯಾ ವಿಫಲವಾಗಿದ್ದು ಮತ್ತು ಬೇರೆ ಬೇರೆ ದೇಶಗಳಲ್ಲಿ ಇಸ್ಲಾಮಿಕ್ ಮೂಲಭೂತವಾದ ಬೆಳೀತಾ ಇದ್ದಿದ್ದು - ಎರಡೂ ಕೂಡಿ ಮಾಡಿಕೊಡ್ತು. ಇಲ್ಲಿ ಮೂಲಭೂತವಾದಿಗಳು ಎಲ್ಲಾ ಕಡೆ ಇರ್ತಾರೆ. ಆದರೆ ಇಲ್ಲಿ ಮುಸ್ಲಿಂ ಯಾವತ್ತಿಗುನು ನಿಮ್ಗೆ ಅಷ್ಟೇನೂ ಇನ್‌ಟಾಲರೇಬಲ್ ಅನ್ನೋತರ ಏನು ಕ್ರಿಯೇಟ್ ಮಾಡಿರ್ಲಿಲ್ಲ. ಈಗ ದಕ್ಷಿಣಕನ್ನಡವನ್ನೆ ತಗೊಳೊದಾದ್ರೆ ಅಷ್ಟೇನೂ ಇನ್‌ಟಾಲರೇಬಲ್ ಆಗಿ ಇದ್ದಿರ್ಲಿಕ್ಕಿಲ್ಲ ಮುಸ್ಲಿಮ್ಸು. ಆದ್ರೆ ಇವ್ರಿಗೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇದ್ಯಲ್ಲ, ಅವ್ರು ತಮ್ಮ political powersನ್ನ regain ಮಾಡ್ಕೊಳ್ಳೋಕೆ ಬಹಳ ಒಳ್ಳೆಯ ಅವಕಾಶ ಆಯ್ತು.

ಇನ್ನೂ ದೌರ್ಭಾಗ್ಯ ಏನು ಅಂದ್ರೆ ಈ ತರದ ಯಾವ್ದೇ ಒಂದು ಸಮಾಜದ ಬದಲಾವಣೆಯ ಪ್ರಕ್ರಿಯೆ ಇರುತ್ತಲ್ಲ, ಅದು, ಮಾರ್ಕ್ಸ್‌ವಾದನೇ ಇರಬಹುದು ಅಥವಾ otherwise, ಅದರ extremeನಲ್ಲಿ ಮೂಲಭೂತವಾದ ಇರಬಹುದು, ಅವರಿಗೆಲ್ಲ ತಕ್ಷಣ vulnerable community ಒಂದಿರುತ್ತೆ. ತಕ್ಷಣಕ್ಕೆ ಕೈಗೆ ಸಿಗೋದು. ಅದು ಯಾವ್ದಂದ್ರೆ, ಯಾವಾಗ್ಲುನು ಕೆಳವರ್ಗದವ್ರು. ಈ ಮೇಲ್ವರ್ಗದವರಿಗೆ ಸ್ವಲ್ಪ ಯೋಚನೆ ಇರುತ್ತೆ. ಈಗ ನಾನು ಮೂಲಭೂತವಾದಿ ಆಗ್ಬೇಕ, ಅಥವಾ ಏನೂ ಆಗ್ಬಾರ್ದ, ಮಾರ್ಕ್ಸ್‌ವಾದಿ ಆಗ್ಬೇಕ ಅಂತ ಆಯ್ಕೆ ನನಗಿರುತ್ತೆ. ಅದಕ್ಕೆ cultural capital ಅಂತ ಹೇಳ್ತಾರಲ್ಲ, ಅದು ನನಗೆ ಅವಕಾಶ ಮಾಡ್ಕೊಟ್ಟಿದೆ. ಯೋಚನೆ ಮಾಡುವಂಥ ಅವಕಾಶ ನನಗೆ ಮಾಡ್ಕೊಟ್ಟಿದೆ. ನನ್ನ ಶಿಕ್ಷಣನೆ ಇರಬಹುದು, ಸಮಾಜದ ಪರಿಸರನೇ ಇರಬಹುದು ಅಂಥ ಅವಕಾಶ ಮಾಡ್ಕೊಟ್ಟಿದೆ. ಬಟ್ ಎಲ್ರು untouched ಆಗಿ ಉಳಿದ community ಇರುತ್ತೆ ಯಾವಾಗ್ಲುನು. ಸೊ, ಅವರಿಗೆ ಏನೂ ಇಲ್ಲ actually. ವೈಚಾರಿಕವಾಗಿ ಮುಕ್ತವಾಗಿದಾರೆ ಅವರು. ಅಥವಾ ಅವರ ಜೀವನದಲ್ಲಿ ಅವ್ರು ಬ್ಯುಸಿ ಇದಾರೆ. ಸೊ, ಅಲ್ಲಿ ಹೋಗ್ಬಿಟ್ಟು ನೀವು, ಈಗ ಹಿಂದೂವಾದಿಗಳು actually encash ಮಾಡಿದ್ದು ಆ ತರದ ಕಮ್ಯುನಿಟಿಯನ್ನ. ಕೆಳವರ್ಗಗಳಿವೆಯಲ್ಲ, ದಲಿತ ಸಂಘರ್ಷ ಸಮಿತಿಯ ವ್ಯಾಪ್ತಿಗೆ ಬರದೇ ಇರುವಂಥ ಕೆಲವು ವರ್ಗಗಳಿವೆ, ಅಂದ್ರೆ ಅವ್ರುನು ದಲಿತರೇ. ಬಟ್ ಇವ್ರ ಸಂಪರ್ಕಕ್ಕೆ ಬಂದಿಲ್ಲ, ಹೇಗೊ. ಇವರ ವ್ಯಾಪ್ತಿ ಇಲ್ಲದೆ ಇರೋದ್ರಿಂದ ಬಂದಿಲ್ದೆ ಇರಬಹುದು, reach ಇಲ್ದೆ ಇರೋದ್ರಿಂದ ಬಂದಿಲ್ದೆ ಇರಬಹುದು. ಆಮೇಲೆ ಅಲ್ಲಿನು ಒಂದು political group ಇರುತ್ತೆ, ಯಾವಾಗ್ಲುನು. ಅಂದ್ರೆ ಈ ಶಿಕ್ಷಣ ಮತ್ತು ಸಾಮಾಜಿಕ ಸ್ಥಾನಮಾನಗಳನ್ನ ಪಡಕೊಂಡು ಅವಕಾಶಗಳಿಗೆ ಕಾಯ್ತಾ ಇರ್ತಾವೆ. ಸೊ, ಹಿಂದೂಯಿಸಂ ಅವ್ರಿಗೆ ಜಾಸ್ತಿ ಕರೆಸ್ನಿ ತಗೊಂಡ್ಬರುತ್ತೆ ಅನ್ನೊದಾದ್ರೆ ಅದನ್ನ ಆಯ್ಕೆ ಮಾಡ್ಕೊಳ್ತಾರೆ. ಅದಕ್ಕೆ ಯಾವತ್ತು ದೇವಸ್ಥಾನಕ್ಕೇ ಹೋಗ್ದೆ ಇರೋರನ್ನ ಇಲ್ಲಿ ಬಾಬಾ ಬುಡನ್‌ಗಿರಿಗೆ ಹೋಗ್ಬಿಟ್ಟು, ಹಿಂಗ್ ಕುಂಕುಮ ಹಚ್ಚ್ಕೊಂಬಿಟ್ಟು ತ್ರಿಶೂಲ ಹಿಡ್ಕೊಂಡು ಅವ್ನಿಗೆ ಒಂದು ನೂರ ಜನರ ಬೆಂಬಲ ಇದ್ರೆ, ಆ ನೂರು ಜನರ ರೊಚ್ಚಿರೋ ತರ ಮಾತಾಡ್ತ ಇರ್ತಾನೆ ಅವ್ನು. ಹೋಗಿ ತಲೆ ಕಡಿದ್ಬಿಡಿ ಅನ್ನೋತರ. ಸೊ, ಇದು ನಮ್ಮ ಸಮಾಜದಲ್ಲೆ ಇರುವಂಥ ದೋಷ ಇದು. ಯಾಕಂದ್ರೆ ಆ ತರದ ಯೂತ್ ಗ್ರೂಪ್ ಯಾವಾಗ್ಲು ಇರುತ್ತೆ. ಅವರನ್ನ ಯಾವ ಕಡೆಗೆ ನಾವು ನಡೆಸ್ತೀವಿ ಅನ್ನೋದು, ಸಾಮಾಜಿಕವಾಗಿ ನಾವು ಸಮರ್ಥವಾದ ರಾಜಕೀಯ ಸಿದ್ಧಾಂತವನ್ನ ಅವರಿಗೆ ಪ್ರಸ್ತಾಪ ಮಾಡೋಕೆ ನಮಗೆ ಶಕ್ತಿ ಇಲ್ಲದೇ ಇದ್ರೆ, ಅವ್ರು obviously ಇಂಥಾ ಕಡೆಗೇ ಹೋಗ್ತಾರೆ. ಈ ತರ ಹೋಗೋದ್ರಿಂದ ಏನಾಗುತ್ತೆ ಅಂತಂದ್ರೆ ಸಮಾಜಕ್ಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ damage ಮಾಡ್ತಾ ಇರ್ತಾರಿವ್ರು.
ಈ ಬಂಡಾಯ ಚಳುವಳಿ, ಅಥವಾ ದಲಿತ ಸಂಘರ್ಷ ಸಮಿತಿಯ ರಾಜಕೀಯ ಚಳುವಳಿ, ಅದು ಬಹುಪಾಲು ಸಮಾಜಕ್ಕೆ ಒಳ್ಳೆಯದನ್ನೆ ಮಾಡಿದೆ, ಕೆಟ್ಟದ್ದನ್ನಂತೂ ಖಂಡಿತಾ ಮಾಡಿಲ್ಲ ಅವ್ರು. ಅದ್ರಿಂದ ಕೆಲವ್ರು perverted ಆಗಿ ಏನೇನೊ ಆಗಿರಬಹುದು. ಬಟ್ ಆ ಚಳುವಳಿಯ ಬಾಹ್ಯ ರೂಪ ಇದೆಯಲ್ಲ, ಅದರ ತೆಕ್ಕೆಗೆ ಬಂದವ್ರು ಯೋಚನೆ ಮಾಡೋಕೆ ಸುರು ಮಾಡಿದ್ರು, ಸ್ಕೂಲುಗಳಿಗೆ ಹೋಗೋಕೆ ಸುರು ಮಾಡಿದ್ರು, ಶಿಕ್ಷಣ ಪಡಕೊಂಡ್ರು. ಸೊ, that is the positive side. Here, there is no positive side. ಬರೀ Hatredness ಇರೋ ಕಡೆ positive side ಹೆಂಗಿರೋಕೆ ಸಾಧ್ಯ? ಸೊ, ಅವ್ರ ಅಂತ್ಯ ಹಂಗೆನೆ ಆಗ್ಬೇಕಾಗುತ್ತೆ. ಸೊ, ಅವ್ರಿಂದ ಸಮಾಜದ ಸ್ವಾಸ್ಥ್ಯ ಬಹಳ ಬೇಗ, ಕ್ಷಿಪ್ರಗತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಡ್ತಾ ಹೋಗುತ್ತೆ. ದೌರ್ಭಾಗ್ಯ ಅಷ್ಟೆ ಅದು.

(ಚಿತ್ರಗಳು : ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಹಳೆಯ ಸಂಚಿಕೆಗಳಿಂದ, ಕೃತಜ್ಞತಾಪೂರ್ವಕ) ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ