Thursday, August 5, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಐದು

ಇವತ್ತಿನ ಮೂಲಭೂತವಾದದತ್ತ ಆಕರ್ಷಣೆ ಬೆಳೆಸಿಕೊಳ್ಳುತ್ತಿರುವ ಯುವ ಸಮುದಾಯದ ಆಳದ ಬಂಡಾಯ, ಪ್ರತಿರೋಧದ ಬಯಕೆ, ಭುಗಿಲೇಳುವ ಬಯಕೆ - ಇವುಗಳನ್ನ ನೀವು ಅದೇ ಪಾತಳಿಯಿಂದ
[ "ತತ್‌ಕ್ಷಣದ ಶೋಷಣೆಯ ಕಾರಣಗಳು ಇಲ್ಲದಾಗಲೂ ಮನಸ್ಸೊಂದು ಕ್ರಾಂತಿಕಾರಿಯಾಗಲು ಯಾಕೆ ಹಾತೊರೆಯುತ್ತದೆ? ಯಾಕೆ ಬಂಡಾಯವೇಳುತ್ತದೆ? ಸರಳವಾಗಿ ಹೇಳುವುದಾದರೆ, ಇನ್ನಷ್ಟು ತೀವ್ರವಾದ ಸಂಬಂಧಗಳ ಅಗತ್ಯಕ್ಕಾಗಿ." ] ನೋಡುತ್ತೀರಾ ಅಥವಾ ಅದನ್ನು ಬೇರೆ ತರ ವಿಶ್ಲೇಷಿಸುತ್ತೀರ?

ಆ ತರದ ಭಾವುಕ ಪ್ರವಾಹ ಒಂದು ಇದೆಯಲ್ಲ, ಏನಂದ್ರೆ, ಯಾವಾಗ್ಲುನು ಸಮಾಜ ಏನು ಸ್ಥಗಿತವಾಗಿರಲ್ಲ. ಸಮಾಜ, ಬಹಳ ಚಲನಶೀಲವಾದ ಗುಣ ಅದರದ್ದು. ಸಮಾಜದ ಗುಣವೇ ಚಲನಶೀಲತೆ. ಈಗ ಒಂದು ಸಮಾಜ ಅಂದ್ಮೇಲೆ ಯೂತ್ಸು ಇರ್ತಾರೆ ಅದ್ರಲ್ಲಿ ಮತ್ತು ಯಾವ್ದೇ ಒಂದು ಸಮಾಜದಲ್ಲಿ ಯುವಕರೇ ಒಂದು ಸಮಾಜವನ್ನ ಕಟ್ಟೋವರಾಗಿರ್ತಾರೆ . ಯಾಕಂದ್ರೆ ಅವ್ರಿಗೆ ಆ ಶಕ್ತಿ, force ಇರುತ್ತೆ, ಉಳಿದವರ್ಯಾರಿಗೂ ಇರಲ್ಲ. ಬಟ್ ಅದನ್ನ ದಾಟಿ ಮುಂದೆ ಹೋಗಿರ್ತಾರಲ್ಲ, ಅವರನ್ನ ಗಮನಿಸಿದ್ರೆ ಎರಡು ತರದ ಪ್ರಶ್ನೆ ಇರುತ್ತೆ ಇಲ್ಲಿ.

ಒಂದು, ನಿರಂತರವಾಗಿ ಈ ತರದ್ದೊಂದು ಪ್ರವಾಹ ಇದ್ದೇ ಇರುತ್ತೆ. ಆದ್ರೆ ಈ ಪ್ರವಾಹವನ್ನ ರಾಜಕೀಯವಾಗಿ ನಿಯಂತ್ರಣ ಮಾಡುವಂಥದ್ದು ಎಲ್ಲಾ ಕಾಲ್ದಲ್ಲು ಇದ್ದೇ ಇರುತ್ತೆ. ಈಗ ನೋಡಿ, ಸಹಜವಾದ ನೀರಿನ ಪ್ರವಾಹ ತಗೊಂಡ್ರುನು ನಾವು ಡ್ಯಾಮ್ ಕಟ್ತೀವಲ್ಲ, ಅದು ರಾಜಕೀಯ ಅದು. ನಿನ್ನನ್ನ ಅಲ್ಲಿ ನಿಲ್ಲಿಸ್ತೀವಿ ಅನ್ನೋದು, ಅದು ರಾಜಕೀಯ.

ಈಗ ಆ ಪ್ರವಾಹವನ್ನ ನೋಡಿದ್ರೆ, ಅದಕ್ಕೆ ಕೂಡ ಒಂದು ರಾಜಕೀಯ ಚೌಕಟ್ಟು ಯಾವಾಗ್ಲುನು ಇರುತ್ತೆ. ಎಪ್ಪತ್ತರ ದಶಕ ಅಥವಾ ಆ ನಂತರದ್ದು, ಒಟ್ಟಾರೆ ಆ ಕಾಲದ ಒಂದು ರಾಜಕೀಯ ಸಿದ್ಧಾಂತಗಳಿವೆಯಲ್ಲ, ಎಲ್ಲ ಒಂದಕ್ಕೊಂದು ಒಂದಕ್ಕೊಂದು ಕೊಂಡಿ ತರ ಇವೆ ಅವು. ಈಗ ನಮ್ಮ ರಾಜಕೀಯ ಸಿದ್ಧಾಂತ ಇದೆಯಲ್ಲ, ಅದು ಯಾವಾಗ್ಲುನು ಒಂದು larger ಆದದ್ದಕ್ಕೆ connect ಆಗಿರುತ್ತೆ. ಒಂದು ವಿಶ್ವಕ್ಕೆ connect ಆಗಿರುತ್ತದು. ಸೊ, ಆಗಿನ ರಾಜಕೀಯ ಸಿದ್ಧಾಂತಗಳನ್ನ ನೀವು ನೋಡಿದ್ರೆ, ನಮ್ಮಲ್ಲಿ ಸಹಜವಾಗಿನೆ ಮಾರ್ಕ್ಸ್‌ವಾದವನ್ನ ಒಂದು ಆಶಾವಾದಿ ನೆಲೆಯಲ್ಲಿ accept ಮಾಡ್ಕೊಂಡಿದ್ವಿ. ಇದು ಸ್ವಾತಂತ್ರ್ಯದ ನಂತರ, ಅದರ ಪೂರ್ವದ್ದಲ್ಲ. ನೆಹರೂ ಅವರು ಬಹಳ ವಿಶಾಲವಾದ ನೆಲೆಯಲ್ಲಿ ಮಾರ್ಕ್ಸ್‌ವಾದವನ್ನ ಒಪ್ಪಿದ್ರು. ಯಾಕಂದ್ರೆ ರಷ್ಯಾದಿಂದ ಅವ್ರಿಗೆ ರಾಜಕೀಯ ಲಾಭಗಳು ಇದ್ವು. ಅಥವಾ ಅವರ ಉದ್ದೇಶವೂ actually ಪ್ರಾಮಾಣಿಕವಾಗಿದ್ದಿರಬಹುದು. ಅದರ failures ಏನೇ ಇರ್ಲಿ. ನೆಹರೂ ಸಿದ್ಧಾಂತದ failures ಏನೇ ಇದ್ರುನು ಯಾವ್ದೇ ಸಮಾಜವನ್ನ ಹಿಂದಕ್ಕೆ ತಗೊಂಡು ಹೋಗ್ಬೇಕು ಅನ್ನತಕ್ಕಂಥದು ಖಂಡಿತಾ ಇರ್ಲಿಲ್ಲ. ಅಂದ್ರೆ ಈ ಸಿದ್ಧಾಂತಗಳನ್ನ ನಾವು ಒಂದು ದೇಶವಾಗಿ ಒಪ್ಪೋದೊಂದಿರುತ್ತೆ, ರಾಜಕೀಯವಾಗಿ ನಾನು ಹೇಳ್ತಾ ಇರೋದು. ಮತ್ತು ವೈಯಕ್ತಿಕ ನೆಲೆಯಲ್ಲಿ ಒಪ್ಪೋವಂತ ಒಂದು ಸಿದ್ಧಾಂತ ಇರುತ್ತೆ. ಸೊ. ಇದು ಆ ದಶಕಗಳಲ್ಲಿ ನೀವು ನೋಡಿದ್ರೆ, ಇಡೀ ದೇಶದ ನೆಲೆಯಲ್ಲೂ ವಿಶಾಲವಾಗಿ ನಾವು ಒಪ್ಪಿರೋ ಸಿದ್ಧಾಂತನು ಅದೇ ಆಗಿತ್ತು. ಸಮಾಜಕ್ಕೆ ಸ್ವಾತಂತ್ರ್ಯ ಮತ್ತು discrimination ಇಲ್ದೇ ಇರೋದು, ನೆಹರೂ ಅವರ ಸಿದ್ಧಾಂತದಲ್ಲಿ ಇತ್ತು. ಆಮೇಲೆ ನಮ್ಮ ಘೋಷಣೆಗಳೂ ಅವೇ ಇವೆ. ಸ್ವಾತಂತ್ರ್ಯದ ಘೋಷಣೆಗಳನ್ನ ನೋಡಿದ್ರೆ ನೀವು, ಅದು ಮಾರ್ಕ್ಸ್‌ವಾದಕ್ಕೆ ಪೂರಕವಾಗಿತ್ತು. ಮಾರ್ಕ್ಸ್‌ವಾದಿ ಸಿದ್ಧಾಂತಗಳನ್ನ ಪ್ರಚಾರ ಮಾಡೋಕೆ ಅವಕಾಶವಿತ್ತು ಇವರಿಗೆ. ಅದಕ್ಕೆ ರಷ್ಯನ್ ಪಬ್ಲಿಕೇಶನ್ಸ್ ಅತ್ಯಂತ ಕಡಿಮೆ ದರದಲ್ಲಿ ಅಥವಾ ಕೆಲವು ಸಲ ಫ್ರೀಯಾಗಿನೂ ಕೊಟ್ಟಿದ್ದಾರೆ. ಅಂದ್ರೆ ಸಿದ್ಧಾಂತವಾಗಿ ಇದನ್ನ promote ಮಾಡೋಕೆ ಅವಕಾಶ ಇದ್ದಿದ್ರಿಂದ, ಆ ಕಾಲದ ಯೂತ್ಸ್ ಇದ್ದಾರಲ್ಲ ಅವರು ಈ ಮಾರ್ಗದಲ್ಲಿ ಆಸಕ್ತರಾಗಿದ್ದರು, ಆವಾಗಿನ ಪ್ರವಾಹದ ರಾಜಕೀಯ ಚೌಕಟ್ಟು ಈ ತರ ಇತ್ತು.
ಅಂದ್ರೆ ultimately ನನಗನಿಸೋದು, ಈಗ ಯಾವ್ದೇ ಪ್ರಗತಿಪರವಾದ ಸಿದ್ಧಾಂತವನ್ನ ತಗೊಳ್ಳಿ. ಅದ್ರಿಂದ ಸಮಾಜಕ್ಕೆ ಹಾನಿ ಖಂಡಿತ ಆಗಲ್ಲ. ಕೆಲವು perversions ಇರುತ್ತೆ. ಯಾವುದೇ ಸಮಾಜದಲ್ಲಿ ಅದು side affects ಅನ್ನೋದು ಇರುತ್ತೆ. ಸೋವಿಯತ್ ರಷ್ಯಾದ ಬಗ್ಗೆ ಮಾತಾಡ್ತ ಇಲ್ಲ. ಯಾವುದೇ ಒಂದು ಪ್ರಗತಿಪರ ಆಶಯವಿರುವಂಥ ಸಿದ್ಧಾಂತದ ಬಗ್ಗೆ. ಅಂದ್ರೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೆಲಸ ಮಾಡುವಂಥದ್ದು, ಸೊ ಇಡೀ ದೇಶದ ಆಲೋಚನಾ ವಿಧಾನ ಆ ತರ ಇತ್ತು ಆವಾಗ. ಸೊ, ಯೂತ್ಸ್ ಬಹುಪಾಲು ಯೂತ್ಸ್ ಅದ್ರಲ್ಲಿ ಪಾಲ್ಗೊಂಡಿದ್ರೆ, ಅವರು towards good things they were moveing.

ಬಟ್ ಈವಾಗ ನೀವದರ ವಿರುದ್ಧವಾದ ನೆಲೆಯಲ್ಲಿ ನೋಡಿದ್ರೆ, ಒಂದು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆದ ಬಹಳಷ್ಟು ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳು ಬಹಳ ಮುಖ್ಯವಾಗಿವೆ. ಈ ತರದ್ದೇನಾದ್ರು ಒಂದು ಇಡೀ ವಿಶ್ವದಲ್ಲೆ ಬದಲಾವಣೆ ಆಗಿದ್ದಿದ್ರೆ, ಭಾವುಕ ನೆಲೆಯಲ್ಲಿ, ಮುಖ್ಯವಾಗಿ ಅದಕ್ಕೆ ಬಹಳಷ್ಟು ಕಾರಣಗಳಿರುತ್ವೆ.

Atleast pre-soviet era, collpase ಆಗೋದಕ್ಕಿಂತ ಮುಂಚೆ, ನಮಗೆ ಎರಡು ತರದ ಬದಲಾವಣೆಗಳು ಸಾಧ್ಯ ಇದೆ ಈ ಜಗತ್ತಿಗೆ ಅಂತ ನಾವು ನೋಡೋದು ಸಾಧ್ಯ ಇತ್ತು. ಒಂದು ಮಾರ್ಕ್ಸ್‌ವಾದವನ್ನ ಒಪ್ಕೊಂಡಿರೋವಂಥ ಕಮ್ಯುನಿಸ್ಟ್ ದೇಶಗಳ ಬೆಳವಣಿಗೆ. ಇನ್ನೊಂದು Capitalismನ್ನ ಒಪ್ಕೊಂಡಿರೋವಂಥ ಅಮೆರಿಕ ಅಥವಾ ಯುರೋಪಿಯನ್ ಕೆಲವು ರಾಷ್ಟ್ರಗಳದ್ದು. ಬಟ್ ಈಗ, ಸೋವಿಯತ್ ರಷ್ಯಾದ ಪತನ ಇದೆಯಲ್ಲ, ಅದು ವಿಶ್ವಕ್ಕೆ ಭಾಳ ಒಂದು, ರಾಜಕೀಯವಾದ ದೊಡ್ಡ ಆಘಾತ ಅದು. ಅದು ಯಾವತ್ತೂನು ಆಗ್ಬಾರ್ದಾಗಿತ್ತದು. ಆದರೆ ದೌರ್ಭಾಗ್ಯವಶಾತ್ ಎಲ್ಲಾ ವ್ಯವಸ್ಥೆಗಳು ಮನುಷ್ಯರಿಂದಲೇ ನಡೆಯೋದ್ರಿಂದ, - ಇದು ಬಹಳ ತಲೆಕೆಡಿಸಿಕೊಂಡಿದೀನಿ actually ನಾನು. ಅಂಗದ ಧರೆ ಗಮನಿಸಿದ್ರು ಅದರಲ್ಲಿ ಇದೇ ಬರುತ್ತೆ, ಅದಿಲ್ಲಿ ಬೇಡ, ಆಮೇಲೆ ಹೇಳ್ತೀನಿ. 


ಈ ಚೌಕಟ್ಟುಗಳಿರುತ್ತವಲ್ಲ, ಈ ಚೌಕಟ್ಟುಗಳನ್ನ ಮೀರೋದೊಂದಿರುತ್ತೆ ಮತ್ತು ರಚನೆ ಮಾಡೋದೊಂದಿರುತ್ತೆ ಯಾವಾಗ್ಲುನು. ರಚನೆ ಮತ್ತು ವಿಘಟನೆ ಎರಡೂ ಒಟ್ಟೊಟ್ಟಿಗೆ ಒಟ್ಟೊಟ್ಟಿಗೆ ನಡೀತಾ ಇರುತ್ತೆ. ಸೊ, ಈ ವಿಘಟನೆ ಇದೆಯಲ್ಲ, ಸೊವಿಯತ್ ರಷ್ಯಾದ ವಿಘಟನೆ ಅಥವಾ ಸಿದ್ಧಾಂತದ, actually ಸಿದ್ಧಾಂತದ ಸೋಲಲ್ಲ ಅದು. ಬಟ್ ಸಾಮಾನ್ಯವಾಗಿ ಯಾವ ತರ ಸ್ವೀಕರಿಸ್ತೀವಿ ಅಂದ್ರೆ ನಾವು, ಒಬ್ಬ ಮನುಷ್ಯ ಸೋತ ಅಂದ್ರೆ ಅದು ಅವನ ಸಿದ್ಧಾಂತದ ಸೋಲು ಅಂತ ಬಹಳ ಬೇಗ ತೀರ್ಮಾನಮಾಡಿ ಬಿಡ್ತೀವಿ. conclusion ಅದು. ಆದರೆ ವ್ಯಕ್ತಿಗಳ ಸೋಲಷ್ಟೇ ಅದು. ಇಡೀ ಸೋವಿಯತ್ ಬ್ಲಾಕಿನ ಜೊತೆಗೆ ಯಾರು ಯಾರೆಲ್ಲ ಗುರುತಿಸಿಕೊಂಡಿದ್ರೋ ಮಾರ್ಕ್ಸ್‌ವಾದಿ ಸಿದ್ಧಾಂತದ ನೆಲೆಯಲ್ಲಿ, ಅವರ ಸೋಲಷ್ಟೆ ಅದು. ಬಟ್ ಒಂದು ಸಿದ್ಧಾಂತಕ್ಕೆ ನಾವದನ್ನ ಆರೋಪಿಸಿ ಬಿಟ್ವಿ. ಆಮೇಲೆ ಅದೇ ಕಾಲಕ್ಕೆ efforts ಇದೆಯಲ್ಲ, ಆ efforts ಕುಸಿದಿದ್ದರಿಂದ ವೈಯಕ್ತಿಕ ಇತಿಮಿತಿಗಳಲ್ಲಿ ಇನ್ನೊಂದು ವರ್ಗ ಇದೆಯಲ್ಲ, ಅಂದ್ರೆ ಬಂಡವಾಳಶಾಹಿ ವರ್ಗ ಏನಿದೆಯಲ್ಲ, ಅವರಿಗೆ "ನೋಡಿ ನಿಮ್ಗೇನು ಮಾಡಕ್ಕಾಗಲ್ಲ, actually ನಿಮಗಿರೋದು ಇದೊಂದೇ." ಅನ್ನೋದು ಸಾಧ್ಯ ಆಯ್ತು. ಅಂದ್ರೆ ಎರಡು ಮಾರ್ಗಗಳು merge ಆಗ್ಬಿಟ್ಟು ಒಂದೇ ಮಾರ್ಗ ಅಂತಾಗಿಬಿಡೋದಿದ್ಯಲ್ಲ, it is very dangerous. ಸೊ, ಬದಲಾವಣೆಯಾಗೋಕ್ಕಿರೋದು ಒಂದೇ ಮಾರ್ಗ ಅಂತಾದಾಗ ಬಹಳ uncomfortable ಇರುತ್ತೆ ಆ zoneನಲ್ಲಿ. ಅವ್ರೇನು ಮಾಡಿದ್ರು ಅಂತಂದ್ರೆ, actually ಮಾರ್ಕ್ಸ್‌ವಾದವನ್ನ defeat ಮಾಡ್ಬೇಕು ಅಂತ ಬಂಡವಾಳಶಾಹಿಗಳು ಮಾಡಿರೋದು ಎಲ್ಲರಿಗೂ ಗೊತ್ತೇ ಇದೆ. ಸಿಐಎ operations ಇರಬಹುದು, ಅಥವ insurgency ಬಳಸಿದ್ದಿರಬಹುದು, ಅಲ್ ಖೈದಾ ತರದ groupಗಳನ್ನ ಬೆಳೆಸಿದ್ದಿರಬಹುದು.


ಆದ್ರೆ ಈ Side affects ಇರುತ್ತಲ್ಲ; ಈಗ, ಕ್ಯಾನ್ಸರ್ ಟ್ರೀಟ್ ಮಾಡೋಕೆ ನೀವು ಕಿಮೊಥೆರಫಿ is the best available medicine; ಬಟ್ ಅದು ಕ್ರಿಯೇಟ್ ಮಾಡೋ side affects ಇದೆಯಲ್ಲ, ಅವನು ಸತ್ತೇ ಹೋಗ್ಬಿಡ್ತಾನದ್ರಲ್ಲಿ. ಅವನಿಗೆ ರೋಗನ cure ಮಾಡ್ಬೇಕಂತ ಉದ್ದೇಶ ಇದ್ರುನು ರೋಗಿಯನ್ನ ಸಾಯಿಸಿಬಿಡುತ್ತೆ ಅದು. ಸೊ, ಆಗ ಇವ್ರು ಬೆಳೆಸಿರೋದಿದ್ಯಲ್ಲ, ಅದು ಒಂದು ಮೂಲಭೂತವಾದವನ್ನ ಅತ್ಯಂತ ಪ್ರಬಲವಾಗಿ ಬೆಳೆಯೋಕೆ ಅವಕಾಶ ಮಾಡಿಕೊಡ್ತು. ಇಸ್ಲಾಮಿಕ್ ಮೂಲಭೂತವಾದ. ಸೊ ಅದನ್ನ ರಾಜಕೀಯವಾಗಿ encash ಮಾಡ್ಕೊಳ್ಳೋವಂಥ ಜನಗಳು ಎಲ್ಲಾ ಕಡೆಯಲ್ಲು ಇದ್ರು. ಸೊ, ಇಲ್ಲಿ ನಮ್ಮ ಹಿಂದೂ ಮೂಲಭೂತವಾದಿಗಳಿದ್ದಾರಲ್ಲ, ಅವ್ರಿಗೆ ಅತ್ಯಂತ ತಕ್ಷಣಕ್ಕೆ ಸಿಕ್ಕಿದ್ದು ಇದು. ಅಲ್ಲಿವರೆಗೂ ನೋಡಿ ಆರೆಸ್ಸೆಸ್ ಭಾರತದಲ್ಲಿ ಎಷ್ಟೋ ವರ್ಷಗಳಿಂದ ಇದೆ. ಬಟ್ ಅವ್ರು ಏನೇ ಪ್ರಯತ್ನ ಪಟ್ರು ಅವ್ರಿಗೆ ರಾಜಕೀಯವಾಗಿ ಪ್ರಬಲವಾದ ಶಕ್ತಿಯಾಗಿ emerge ಆಗೋಕೆ ಸಾಧ್ಯವಾಗಿರ್ಲಿಲ್ಲ. ಅಂದ್ರೆ ಈಗ ಅವರು ಒಳಗಡೆಯಿಂದ ಒಂದು ಅವಕಾಶಗಳನ್ನ ಹುಡುಕ್ತಾ ಇದ್ರಲ್ಲ, ಅದು ಹೊರಗಡೆಯಿಂದ ಅವಕಾಶ ಒದಗಿಸಿಕೊಡ್ತು. ಅಂದ್ರೆ ಯಾವ್ದೊ ಒಂದು issue ಮೇಲೆ. ಮುಂಚೆ ಆದ್ರೆ ಅವ್ರು ಹಿಂದು-ಮುಸ್ಲಿಂ ದ್ವೇಷವನ್ನು ಬಿತ್ತತಾ ಇದ್ರುನು ಅದು ಅಷ್ಟೇನೂ ಯಶಸ್ವಿ ರಾಜಕೀಯ ಪ್ರವಾಹ ಆಗಿರ್ಲಿಲ್ಲ. ಬಟ್ ಇಲ್ಲಿ ಇಸ್ಲಾಮಿಕ್ ಮೂಲಭೂತವಾದ ಬೆಳೀತಾ ಇದ್ದಾಗ ಅವ್ರಿಗೆ ಸುಲಭ ಆಗ್ಬಿಡ್ತು. ನೋಡಿ ಅವರು ಹಂಗ್ ಮಾಡ್ತಿದಾರೆ, ಹಿಂಗ್ ಮಾಡ್ತಿದಾರೆ. ಅಂದ್ರೆ ಅವ್ರಿಗೆ organise ಆಗಕ್ಕೆ ಒಂದು ಪೊಲಿಟಿಕಲ್ ವೆಪನನ್ನ ಈ ಸೋವಿಯತ್ ರಷ್ಯಾ ವಿಫಲವಾಗಿದ್ದು ಮತ್ತು ಬೇರೆ ಬೇರೆ ದೇಶಗಳಲ್ಲಿ ಇಸ್ಲಾಮಿಕ್ ಮೂಲಭೂತವಾದ ಬೆಳೀತಾ ಇದ್ದಿದ್ದು - ಎರಡೂ ಕೂಡಿ ಮಾಡಿಕೊಡ್ತು. ಇಲ್ಲಿ ಮೂಲಭೂತವಾದಿಗಳು ಎಲ್ಲಾ ಕಡೆ ಇರ್ತಾರೆ. ಆದರೆ ಇಲ್ಲಿ ಮುಸ್ಲಿಂ ಯಾವತ್ತಿಗುನು ನಿಮ್ಗೆ ಅಷ್ಟೇನೂ ಇನ್‌ಟಾಲರೇಬಲ್ ಅನ್ನೋತರ ಏನು ಕ್ರಿಯೇಟ್ ಮಾಡಿರ್ಲಿಲ್ಲ. ಈಗ ದಕ್ಷಿಣಕನ್ನಡವನ್ನೆ ತಗೊಳೊದಾದ್ರೆ ಅಷ್ಟೇನೂ ಇನ್‌ಟಾಲರೇಬಲ್ ಆಗಿ ಇದ್ದಿರ್ಲಿಕ್ಕಿಲ್ಲ ಮುಸ್ಲಿಮ್ಸು. ಆದ್ರೆ ಇವ್ರಿಗೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇದ್ಯಲ್ಲ, ಅವ್ರು ತಮ್ಮ political powersನ್ನ regain ಮಾಡ್ಕೊಳ್ಳೋಕೆ ಬಹಳ ಒಳ್ಳೆಯ ಅವಕಾಶ ಆಯ್ತು.

ಇನ್ನೂ ದೌರ್ಭಾಗ್ಯ ಏನು ಅಂದ್ರೆ ಈ ತರದ ಯಾವ್ದೇ ಒಂದು ಸಮಾಜದ ಬದಲಾವಣೆಯ ಪ್ರಕ್ರಿಯೆ ಇರುತ್ತಲ್ಲ, ಅದು, ಮಾರ್ಕ್ಸ್‌ವಾದನೇ ಇರಬಹುದು ಅಥವಾ otherwise, ಅದರ extremeನಲ್ಲಿ ಮೂಲಭೂತವಾದ ಇರಬಹುದು, ಅವರಿಗೆಲ್ಲ ತಕ್ಷಣ vulnerable community ಒಂದಿರುತ್ತೆ. ತಕ್ಷಣಕ್ಕೆ ಕೈಗೆ ಸಿಗೋದು. ಅದು ಯಾವ್ದಂದ್ರೆ, ಯಾವಾಗ್ಲುನು ಕೆಳವರ್ಗದವ್ರು. ಈ ಮೇಲ್ವರ್ಗದವರಿಗೆ ಸ್ವಲ್ಪ ಯೋಚನೆ ಇರುತ್ತೆ. ಈಗ ನಾನು ಮೂಲಭೂತವಾದಿ ಆಗ್ಬೇಕ, ಅಥವಾ ಏನೂ ಆಗ್ಬಾರ್ದ, ಮಾರ್ಕ್ಸ್‌ವಾದಿ ಆಗ್ಬೇಕ ಅಂತ ಆಯ್ಕೆ ನನಗಿರುತ್ತೆ. ಅದಕ್ಕೆ cultural capital ಅಂತ ಹೇಳ್ತಾರಲ್ಲ, ಅದು ನನಗೆ ಅವಕಾಶ ಮಾಡ್ಕೊಟ್ಟಿದೆ. ಯೋಚನೆ ಮಾಡುವಂಥ ಅವಕಾಶ ನನಗೆ ಮಾಡ್ಕೊಟ್ಟಿದೆ. ನನ್ನ ಶಿಕ್ಷಣನೆ ಇರಬಹುದು, ಸಮಾಜದ ಪರಿಸರನೇ ಇರಬಹುದು ಅಂಥ ಅವಕಾಶ ಮಾಡ್ಕೊಟ್ಟಿದೆ. ಬಟ್ ಎಲ್ರು untouched ಆಗಿ ಉಳಿದ community ಇರುತ್ತೆ ಯಾವಾಗ್ಲುನು. ಸೊ, ಅವರಿಗೆ ಏನೂ ಇಲ್ಲ actually. ವೈಚಾರಿಕವಾಗಿ ಮುಕ್ತವಾಗಿದಾರೆ ಅವರು. ಅಥವಾ ಅವರ ಜೀವನದಲ್ಲಿ ಅವ್ರು ಬ್ಯುಸಿ ಇದಾರೆ. ಸೊ, ಅಲ್ಲಿ ಹೋಗ್ಬಿಟ್ಟು ನೀವು, ಈಗ ಹಿಂದೂವಾದಿಗಳು actually encash ಮಾಡಿದ್ದು ಆ ತರದ ಕಮ್ಯುನಿಟಿಯನ್ನ. ಕೆಳವರ್ಗಗಳಿವೆಯಲ್ಲ, ದಲಿತ ಸಂಘರ್ಷ ಸಮಿತಿಯ ವ್ಯಾಪ್ತಿಗೆ ಬರದೇ ಇರುವಂಥ ಕೆಲವು ವರ್ಗಗಳಿವೆ, ಅಂದ್ರೆ ಅವ್ರುನು ದಲಿತರೇ. ಬಟ್ ಇವ್ರ ಸಂಪರ್ಕಕ್ಕೆ ಬಂದಿಲ್ಲ, ಹೇಗೊ. ಇವರ ವ್ಯಾಪ್ತಿ ಇಲ್ಲದೆ ಇರೋದ್ರಿಂದ ಬಂದಿಲ್ದೆ ಇರಬಹುದು, reach ಇಲ್ದೆ ಇರೋದ್ರಿಂದ ಬಂದಿಲ್ದೆ ಇರಬಹುದು. ಆಮೇಲೆ ಅಲ್ಲಿನು ಒಂದು political group ಇರುತ್ತೆ, ಯಾವಾಗ್ಲುನು. ಅಂದ್ರೆ ಈ ಶಿಕ್ಷಣ ಮತ್ತು ಸಾಮಾಜಿಕ ಸ್ಥಾನಮಾನಗಳನ್ನ ಪಡಕೊಂಡು ಅವಕಾಶಗಳಿಗೆ ಕಾಯ್ತಾ ಇರ್ತಾವೆ. ಸೊ, ಹಿಂದೂಯಿಸಂ ಅವ್ರಿಗೆ ಜಾಸ್ತಿ ಕರೆಸ್ನಿ ತಗೊಂಡ್ಬರುತ್ತೆ ಅನ್ನೊದಾದ್ರೆ ಅದನ್ನ ಆಯ್ಕೆ ಮಾಡ್ಕೊಳ್ತಾರೆ. ಅದಕ್ಕೆ ಯಾವತ್ತು ದೇವಸ್ಥಾನಕ್ಕೇ ಹೋಗ್ದೆ ಇರೋರನ್ನ ಇಲ್ಲಿ ಬಾಬಾ ಬುಡನ್‌ಗಿರಿಗೆ ಹೋಗ್ಬಿಟ್ಟು, ಹಿಂಗ್ ಕುಂಕುಮ ಹಚ್ಚ್ಕೊಂಬಿಟ್ಟು ತ್ರಿಶೂಲ ಹಿಡ್ಕೊಂಡು ಅವ್ನಿಗೆ ಒಂದು ನೂರ ಜನರ ಬೆಂಬಲ ಇದ್ರೆ, ಆ ನೂರು ಜನರ ರೊಚ್ಚಿರೋ ತರ ಮಾತಾಡ್ತ ಇರ್ತಾನೆ ಅವ್ನು. ಹೋಗಿ ತಲೆ ಕಡಿದ್ಬಿಡಿ ಅನ್ನೋತರ. ಸೊ, ಇದು ನಮ್ಮ ಸಮಾಜದಲ್ಲೆ ಇರುವಂಥ ದೋಷ ಇದು. ಯಾಕಂದ್ರೆ ಆ ತರದ ಯೂತ್ ಗ್ರೂಪ್ ಯಾವಾಗ್ಲು ಇರುತ್ತೆ. ಅವರನ್ನ ಯಾವ ಕಡೆಗೆ ನಾವು ನಡೆಸ್ತೀವಿ ಅನ್ನೋದು, ಸಾಮಾಜಿಕವಾಗಿ ನಾವು ಸಮರ್ಥವಾದ ರಾಜಕೀಯ ಸಿದ್ಧಾಂತವನ್ನ ಅವರಿಗೆ ಪ್ರಸ್ತಾಪ ಮಾಡೋಕೆ ನಮಗೆ ಶಕ್ತಿ ಇಲ್ಲದೇ ಇದ್ರೆ, ಅವ್ರು obviously ಇಂಥಾ ಕಡೆಗೇ ಹೋಗ್ತಾರೆ. ಈ ತರ ಹೋಗೋದ್ರಿಂದ ಏನಾಗುತ್ತೆ ಅಂತಂದ್ರೆ ಸಮಾಜಕ್ಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ damage ಮಾಡ್ತಾ ಇರ್ತಾರಿವ್ರು.
ಈ ಬಂಡಾಯ ಚಳುವಳಿ, ಅಥವಾ ದಲಿತ ಸಂಘರ್ಷ ಸಮಿತಿಯ ರಾಜಕೀಯ ಚಳುವಳಿ, ಅದು ಬಹುಪಾಲು ಸಮಾಜಕ್ಕೆ ಒಳ್ಳೆಯದನ್ನೆ ಮಾಡಿದೆ, ಕೆಟ್ಟದ್ದನ್ನಂತೂ ಖಂಡಿತಾ ಮಾಡಿಲ್ಲ ಅವ್ರು. ಅದ್ರಿಂದ ಕೆಲವ್ರು perverted ಆಗಿ ಏನೇನೊ ಆಗಿರಬಹುದು. ಬಟ್ ಆ ಚಳುವಳಿಯ ಬಾಹ್ಯ ರೂಪ ಇದೆಯಲ್ಲ, ಅದರ ತೆಕ್ಕೆಗೆ ಬಂದವ್ರು ಯೋಚನೆ ಮಾಡೋಕೆ ಸುರು ಮಾಡಿದ್ರು, ಸ್ಕೂಲುಗಳಿಗೆ ಹೋಗೋಕೆ ಸುರು ಮಾಡಿದ್ರು, ಶಿಕ್ಷಣ ಪಡಕೊಂಡ್ರು. ಸೊ, that is the positive side. Here, there is no positive side. ಬರೀ Hatredness ಇರೋ ಕಡೆ positive side ಹೆಂಗಿರೋಕೆ ಸಾಧ್ಯ? ಸೊ, ಅವ್ರ ಅಂತ್ಯ ಹಂಗೆನೆ ಆಗ್ಬೇಕಾಗುತ್ತೆ. ಸೊ, ಅವ್ರಿಂದ ಸಮಾಜದ ಸ್ವಾಸ್ಥ್ಯ ಬಹಳ ಬೇಗ, ಕ್ಷಿಪ್ರಗತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಡ್ತಾ ಹೋಗುತ್ತೆ. ದೌರ್ಭಾಗ್ಯ ಅಷ್ಟೆ ಅದು.

(ಚಿತ್ರಗಳು : ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಹಳೆಯ ಸಂಚಿಕೆಗಳಿಂದ, ಕೃತಜ್ಞತಾಪೂರ್ವಕ)

No comments: