Tuesday, August 10, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಆರು

ಆಧ್ಯಾತ್ಮ-ಸಂನ್ಯಾಸ-ಮಠ-ಸ್ವಾಮೀಜಿ ಇತ್ಯಾದಿ ನಿಮ್ಮ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುವ ಇನ್ನೊಂದು ಬಹುಮುಖ್ಯವಾದ ವಿದ್ಯಮಾನ. ಅದು ಜೀವನಾನುಭವದಿಂದ ಹುಟ್ಟಿದ ಆಧ್ಯಾತ್ಮದ ತತ್ವವಾಗಿ ಬರುವುದಿದೆ. ಜೀವನ ವಿಮುಖತೆಯಾಗಿ, ಸಂನ್ಯಾಸವೋ, ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗುವುದೋ, ಆತ್ಮಹತ್ಯೆ ಅಥವಾ ಸಾವಾಗಿಯೋ ಬರುವ ಜೀವನ ವಿಮುಖತೆಯಾಗಿಯೂ ಬರುವುದಿದೆ. ಮಠ ಮತ್ತು ಆಧ್ಯಾತ್ಮಿಕ ಸಿದ್ಧಿಯಾಗಿ ಅಂಗದ ಧರೆಯಲ್ಲಿ ಆಗುವ ಹಾಗೆ, ಬರುವುದಿದೆ. ಹೀಗೆ ಮತ್ತೆ ಮತ್ತೆ ಬರುವ ಈ ವಿದ್ಯಮಾನದ ಹಿನ್ನೆಲೆ ಏನು?

ವ್ಯಕ್ತಿತ್ವದಲ್ಲಿ ಆತರದ್ದೊಂದು extremity ಎಲ್ರಿಗು ಇರುತ್ತೆ ಅಂತ ಅಂದ್ಕೊಂಡಿದೀನಿ. ನನ್ನಲ್ಲು ಇರುತ್ತೆ. Renouncement ಇದ್ಯಲ್ಲ, ನಮ್ಗೆ ಎಷ್ಟೋ ಸಲ ಏನನಿಸ್ತಾ ಇರುತ್ತಂದ್ರೆ, ಈ adjustment ಮಾಡ್ಕೊಂಡು ಜೀವನ ಮಾಡೋದಿದ್ಯಲ್ಲ, ಎಲ್ಲಾ ಬಗೆಯ ಅರ್ಥದಲ್ಲು ನಾನು ಹೇಳ್ತಾ ಇದೀನಿ, ವಿಶಾಲವಾದ ಅರ್ಥದಲ್ಲಿ. ಅದು ನಮಗೆ ಕಿರಿಕಿರಿ ಮಾಡ್ತಾ ಇರುತ್ತೆ. ಇದು, ಇದನ್ನ ತಿರಸ್ಕಾರ ಮಾಡಿ ಬೇರೆ ಹೋಗಬೇಕು ನಾನು ಅಂತ ಅನಿಸ್ತಾ ಇರುತ್ತೆ. ಮಾನಸಿಕವಾಗಿ ಬಹಳ ಪ್ರಬಲವಾಗಿರುತ್ತೆ ಅದು. ಹಾಗೆ ಹೋಗಲಿಕ್ಕಾಗಲ್ಲ ಎಷ್ಟೋ ಸಲ.
ಅಂದ್ರೆ ಅದು ನಾವೇ ಸೃಷ್ಟಿ ಮಾಡಿಕೊಂಡಿರುವಂಥ ಅನಿವಾರ್ಯತೆ. ಅದ್ರ ಹಂಗೇ ಇಲ್ಲದೆ ಇರೋವ್ರು, ಹಂಗು ಹರಿದ ಶರಣರು, ಏನ್ಮಾಡ್ತಾರಂದ್ರೆ, ಈಗ ಅಂಗದ ಧರೆಯಲ್ಲಿ ನೋಡಿ. ‘ಅಂಗ’ದ ಧರೆ' ಅದು. ದೇಹವನ್ನ ನಾವು ಒಂದು ಭೂಮಿಯನ್ನಾಗಿ ಮಾಡ್ಕೊಂಡು ಅಥವಾ ಅದರ ಮೂಲಕವೇ ನಾವು ಹೋಗ್ಬೇಕು ಎನ್ನುವ ಒಂದು ಚಿಂತನೆ ಇದೆಯಲ್ಲ, ಅದರ ಮೂಲಕನೇ ನಾವು ಎಲ್ಲಿಗೋ ಹೋಗಬೇಕು ಎನ್ನೋದಿದ್ಯಲ್ಲ, ಆ ಚಿಂತನೆ. ಅದಕ್ಕೇ ಅಲ್ಲಮ ಅಲ್ಲಿಯೂ ಅದನ್ನ ಚಾಲೆಂಜ್ ಮಾಡ್ತಿದಾನೆ ಅವನು ಮತ್ತು ಬಹಳ ವ್ಯಂಗ್ಯ ಇದೆ ಅವನು ಹೇಳಬೇಕಾದ್ರೆ. ಲಾಸ್ಟ್ ಲೈನ್ ಹೇಳ್ಬೇಕಾದ್ರೆ; ನೀನು ಮೊದಲನೆ ಹಂತವನ್ನ ಮುಟ್ಟಬೇಕಾದ್ರೆ ಇದನ್ನ ಮಾಡ್ಬೇಕು, ಎರಡನೆ ಹಂತವನ್ನ ಮುಟ್ಟಬೇಕಾದ್ರೆ ಇದನ್ನ ಮಾಡ್ಬೇಕು, ಮೂರನೇ ಹಂತ ಮುಟ್ಟಿದವನು ಹಿಂಗಾಗ್ತಾನೆ. ಬಟ್ ಇದು ಎಲ್ಲವನ್ನು ಮುಟ್ಟದೇನೆ ತಿರಸ್ಕಾರ ಮಾಡಿ ಸರಳವಾಗಿ ಹೋಗ್ಬಿಡಬಹುದು ಅಂತ. ಅದು actually ಎಲ್ರಿಗು ತೀವ್ರವಾಗಿ ಅನಿಸ್ತಿರುತ್ತೆ. ನನಗೂ ಹಂಗೇನೆ ಅನಿಸ್ತಿರುತ್ತೆ. ಈ ಬಿಟ್ಟು ಹೋಗೋದು ಅನ್ನೊ ಒಂದು ವೈಯಕ್ತಿಕ ತುಡಿತ ಅದು. ಅದರ ಅರ್ಥ, ಆಧ್ಯಾತ್ಮಿಕ ತುಡಿತವೂ ಹೌದದು. ಆಧ್ಯಾತ್ಮ ಅಂದ್ರೆ ನಾನು ಬಹಳ ವಿಶಾಲವಾದ ನೆಲೆಯಲ್ಲಿ ಹೇಳ್ತಿದ್ದೀನಿ.

 ನಾನೊಬ್ಬ ನಾಸ್ತಿಕ ನಾನು. ಯಾವ ಧಾರ್ಮಿಕ ಪಂಥದಲ್ಲೂ ನಂಬಿಕೆಯಿಲ್ಲದವನು. actually nihilist ತರ ಇದೀನಿ ನಾನು. ಎಷ್ಟೋ ವಿಚಾರಗಳನ್ನ, ಎಲ್ಲವನ್ನ ತಿರಸ್ಕಾರ ಮಾಡೋದು ಅಂತಲ್ಲ ಅದು, ಯಾವ್ದನ್ನೇ ನೀವು ಟೆಸ್ಟ್ ಮಾಡಿದಾಗ ಅದು ಒಂದು ಹಂತದಲ್ಲಿ ಟೊಳ್ಳು ಅಂತ ಗೊತ್ತಾದ ಮೇಲೆ ಎಲ್ಲವನ್ನೂ 1-2-3-4 ನೂರರ ವರೆಗೆ ಟೆಸ್ಟ್ ಮಾಡಿ ಮಾಡಿ ಮಾಡಿ ತಿರಸ್ಕರಿಸುವ ಅಗತ್ಯ ಇರಲ್ಲ ಎಷ್ಟೋ ಸಲ.

ಸೊ, ಆ ತರದ್ದೊಂದು ತಿರಸ್ಕಾರದ ಭಾವನೆನೂ ಇರುತ್ತೆ ಮನಸ್ನಲ್ಲಿ. ಸೊ, ಹಂಗಾಗಿನೆ ಅದು actually ನನ್ನ ತುಡಿತವೆ ಅದು. ನಮ್ಮ ತಂದೆಯವರು ಆ ತರ ಇದ್ರು actually. ಅವರೇನು ಮಾಡೋವ್ರು ಅಂದ್ರೆ ಅವರು ಆವಾಗಾವಾಗ disappear ಆಗ್ತಾ ಇದ್ರು. disappear in the sense, ಅವರೇನು ಕಾಶಿಗೋ ಬದ್ರಿಗೋ ಹೋಗ್ತಿರಲಿಲ್ಲ. He used to go to my relatives. ನಮ್ಮ ಸಂಬಂಧಿಕರು ಎಲ್ಲೆಲ್ಲಿದ್ದಾರೆ ಅಲ್ಲಿ ಹೋಗಿ ಸುಮ್ನೆ ಒಂದು ತಿಂಗಳು, ಎರಡು ತಿಂಗಳು ಇರೋರು. ಬಹಳ ಆತಂಕ ಆಗ್ತಾ ಇತ್ತು ಮನೇಲಿ. ಮೊದಲೇ ಮನೇಲಿ ಆರ್ಥಿಕ ನೆಲೆಗಳು ಅಷ್ಟು ಚೆನ್ನಾಗಿರಲಿಲ್ಲ. ನಮ್ಮ ತಾಯಿಗೆ ತುಂಬ tenssion ಆಗಿಬಿಡೋದು. ಆಮೇಲೆ ಯಾವತ್ತೊ ಒಂದಿನ ಕಾಗದ ಬರೆಯೋರು, ನಾನಿಲ್ಲಿದೀನಿ, ಈ ತರದ ಮನುಷ್ಯ. ಸೊ, tension create ಮಾಡ್ತಾ ಇದ್ರು. ಈಗ ನನಗೆ, ನನಗೂ ಆ ತರಾನೆ ಎಷ್ಟೋ ಸಲ ಅನ್ಸೊದಿರುತ್ತೆ. ಆವಾಗ ನನಗೆ ಭಾಳ ಸಿಟ್ಟು ಬರ್ತಾ ಇತ್ತು. ಏನು ಬಹಳ irresponsible ಇದಾರೆ ಈ ಮನುಷ್ಯ. actually ನಮ್ಮ ತಂದೆ ಮೇಲೆ ಭಾಳ ದ್ವೇಷ ಇತ್ತು ನನಗೆ, ಆರಂಭಿಕ ದಿನಗಳಲ್ಲಿ. ಬಟ್ ಅದನ್ನು ಹೇಗೊ resolve ಮಾಡಿದೀನಿ. ಬಟ್ ಈಗ ನಮ್ ತಾಯಿಗಿಂತ ನಮ್ಮ ತಂದೆಯವರ ಪ್ರಭಾವನೇ ತುಂಬ ಇದೆ ನನ್ಮೇಲೆ, ವ್ಯಕ್ತಿತ್ವನಾ ಕಟ್ಟಿಕೊಡಬೇಕಾದ್ರೆ. He was extremely creative. ಏನನ್ನೆ ಒಂದು ಕಲೆಯಾಗಿ ಸೃಷ್ಟಿ ಮಾಡಬಲ್ಲ ಒಂದು ಗುಣ ಇತ್ತು ಅವರಿಗೆ. ಅದು ಬಹಳಷ್ಟಿದೆ ನನ್ನಲ್ಲಿ.

ಅಂದ್ರೆ ಅದು ಎಲ್ಲಾ ಮನುಷ್ಯನಲ್ಲು ಇರುತ್ತೆ ಆತರದ್ದೊಂದು. ನಿರಾಕರಣೆ ಅಂತ ನಾವು ಹೇಳ್ತಾ ಇದೀವಿ. ಬಟ್ ನಿರಾಕರಣೆಯನ್ನ ಅವನು ಇನ್ನೊಂದೇನೋ ಉನ್ನತವಾದದ್ದನ್ನ ಪಡಕೊಳ್ಳೋಕೆ ಮಾಡ್ತಾ ಇರ್ತಾನವನು, ಆ ನಿರಾಕರಣೆಯನ್ನ. ನನಗೆ, ಒಬ್ಬ ಒಂದು ಸಂಸಾರವನ್ನು ತ್ಯಜಿಸಿ ಹೋಗೋದು, ಆ ಕುಟುಂಬಕ್ಕೆ ಒಂದು ದೊಡ್ಡ ಆಘಾತಕಾರಿ ವಿಷಯ ಆಗಿರುತ್ತೆ. ಆದ್ರೆ, ಅವನ ನಿಲುವಿದೆಯಲ್ಲ, ಆಧ್ಯಾತ್ಮಿಕ ನಿಲುವಿರಬಹುದು ಅಥವಾ ಇನ್ನೇನೇ ನಿಲುವಿರಬಹುದು, ಆವಾಗ ಅದೇ ಅವ್ನಿಗೆ ಮುಖ್ಯವಾಗಿ ಕಾಣ್ತಿರುತ್ತೆ ಮತ್ತು ಅದೇ ಅವನಿಗೆ ಜೀವನಕ್ಕೆ ತೃಪ್ತಿಯನ್ನು ತಗೊಂಡು ಬರುವಂಥದ್ದಾಗಿರುತ್ತೆ. ಹಾಗಂತ ಯೋಚ್ನೆ ಮಾಡಿದ್ರಿಂದ ಹಂಗೆ ತಿರಸ್ಕಾರ ಮಾಡಿ ಹೋಗ್ತಾ ಇರ್ತಾರವ್ರು. ಬಟ್ realisation point ಕೂಡ ಒಂದಿರುತ್ತೆ. ಸೊ ಅದಕ್ಕಾಗಿ ಸ್ವಲ್ಪ ಸಮಯ ಆದ್ಮೇಲೆ ಎಷ್ಟೋ ಕಡೆ ವಾಪಾಸ್ ಬರ್ತಾರವರು. actually ಆತ್ಮಹತ್ಯೆ ಅಥವಾ ಸಂಪೂರ್ಣ ತಿರಸ್ಕಾರ ಅನ್ನೋ ತರ ನಾನೆಲ್ಲು ನೋಡಿಲ್ಲ. ಈಗ ನೀವು ಹೇಳಿದಾಗ ‘ಊರ ಮಧ್ಯದ ಕಣ್ಣ ಕಾಡಿನೊಳಗೆ’ ಆ ತರದ್ದೊಂದು episode ಬರುತ್ತೆ ಅಂತ ಸಂಪೂರ್ಣವಾಗಿ ನೆನಪಿಲ್ಲ ನನಗೆ, ಬಟ್ I have to recall it.

ಆದ್ರೆ ತಾಂತ್ರಿಕವಾಗಿ ನಾನೆಲ್ಲು ಯೋಚ್ನೆ ಮಾಡಿರಲ್ಲ ನಾನು ಆ ತರ. ಪ್ಲಾಟಿಂಗ್ ಅಥವಾ ಸಿದ್ಧ ಮಾದರಿ ಎಲ್ಲೂ ಇರಲ್ಲ ನನ್ನ ಕತೆಗಳಲ್ಲಿ. ಕೆಲವೊಂದು characters ಬರೀಬೇಕಾದಾಗ, ಎಷ್ಟೋ ಸಲ ಅಲ್ಲಿ ನನಗೇ ಗೊತ್ತಿಲ್ಲದಂತೆ ಬಂದಿರೋದೂ ಇರುತ್ತೆ. ಆದ್ರೆ, ಅವು ಏನೋ ಒಂದು ಎಫೆಕ್ಟ್ ಸೃಷ್ಟಿ ಮಾಡ್ಬೇಕು ಅಂತ ಬಂದಿರಲ್ಲ. ಅಥವಾ ಒಂದು ಪ್ಲಾಟ್‌ನ ತಂತ್ರವಾಗಿ ತಂದಿರಲ್ಲ. ಸೊ ಇದನ್ನ ನಾನು ಮರ್ತಿದ್ದೆ, ಈ ಕತೆಯನ್ನ.

ಒಂದೇನಂದ್ರೆ ಅವ್ನಿಗೆ ತುಂಬ contradictions ಇವೆ. ಆ contradictions ಯಾವ ತರದ್ದಿದೆ ಅಂದ್ರೆ ಆ ಪಾಪಪ್ರಜ್ಞೆ ಮತ್ತೆ ಅವನೇನಾಗ್ಬೇಕಂತಿದ್ದ ಅದಾಗ್ದೆ ಇರೋದು ಈ ತರದ್ದೆಲ್ಲ ತುಂಬ contradictions ಇವೆ ಅವ್ನಿಗೆ. ಸೊ ಅದು ಅದ್ರಲ್ಲೆಲ್ಲೊ ಒಂದ್ಕಡೆ ಬಂದಿದೆ ಅಂತನ್ಸುತ್ತೆ ಇದು. ಬಟ್ ಅದ್ರಲ್ಲಿ ಅವ್ನು ಎಲ್ಲ ಹಿಪಾಕ್ರಸಿ ಇದ್ಯಲ್ಲ, ಯಾವುದರ ವಿರುದ್ಧ ಎಲ್ಲ ಹೋರಾಟ ಮಾಡಿರ್ತಾನೊ ಅದ್ರಲ್ಲೆ ನಾ ಜೀವನ ಮಾಡಬೇಕಾದ್ರೆ ಯಾಕೆ ಮಾಡ್ಬೇಕು ಅಂತನ್ನೋದು. ಆ ತರ ಒಂದು ಪ್ರಶ್ನೆ ಎಲ್ಲ ಕಡೆ ಇರುತ್ತೆ. ಅದ್ಕೆ ಬೇರೆ ಬೇರೆ ಕತೆಯಲ್ಲುನು ಅದೇ ತರ ಬಂದಿದೆ ಅದು. even ಸುನಯನ ಕತೆಯಲ್ಲಿನು ಇದೆ ಅದು. ಅದು ಬದುಕಿನ ತೀವ್ರವಾದ ವ್ಯಾಮೋಹದಿಂದ, ತಾನೀತರ ಜೀವನವೇ ಮಾಡಕ್ಕಾಗಲ್ಲ ಅಂತಾದಾಗ ನಾನಿನ್ಯಾಕೆ ಬದುಕಿರಬೇಕು ಎಂತ ಎಷ್ಟೋ ಜನ ಸೂಯಿಸೈಡ್ ಮಾಡ್ಕೋತಾರೆ. ಅದು actually ಅಂತಿಮ ತಿರಸ್ಕಾರ ಅದು, ಸಮಾಜಕ್ಕೆ.

ಸೂಯಿಸೈಡ್ ನಾವು ನೋಡುವಾಗ ಒಬ್ಬ ಮನುಷ್ಯ ಸಮಾಜದಲ್ಲೆ ಇದ್ದು ಬಂಡಾಯ ಏಳುವುದಕ್ಕಿಂತ ಜಾಸ್ತಿ force ಬೇಕಾಗುತ್ತೆ ಅದಕ್ಕೆ. actually ಅದ್ರ ಬಗ್ಗೆನೆ ನಾನೆಲ್ಲೊ ಒಂದ್ಕಡೆ article ಬರ್ದಿದೀನಿ ಅನ್ಸುತ್ತೆ. ನೇರಳೆಮರದಲ್ಲಿ ಒಂದು ಪ್ರಬಂಧ ಇದೆ. ಅಂದ್ರೆ, ಆತ್ಮಹತ್ಯೆಯ ಬೇರೆ ವಿವಿಧ ರೂಪಗಳಿರುತ್ವಲ್ಲ. ಅದಕ್ಕೆ ನಾವು ಬೇರೆ ಬೇರೆ dimensions ಕೊಡ್ತಾ ಇದೀವಿ. ಇದನ್ನ ನೀವು ಈಗ ರಾಜಕೀಯವಾಗಿ ನೋಡಿದ್ರೆ, ಎಷ್ಟೊಂದು ವ್ಯವಸ್ಥಿತವಾದ ಒಂದು ರಾಜಕೀಯ ಸಂಚಾಗಿ ಪರಿವರ್ತನೆಗೊಂಡಿದೆ ಅಂದ್ರೆ ನಮ್ಮಲ್ಲಿ ಈ ಆತ್ಮಹತ್ಯಾ ದಾಳಿಕೋರರೇ ಇದ್ದಾರೆ. ಸೂಯಿಸೈಡ್ ಸ್ಕ್ವ್ಯಾಡ್ಸ್ ಅಂತ. LTTE ಯಂತೂ ಅದ್ರಲ್ಲಿ ಒಂದು extreme ಪರಿಣತಿಯನ್ನು ಸಾಧಿಸಿಬಿಟ್ಟಿತ್ತು. ಈಗ ಅಲ್ ಖೈದಾ, ಫಿದಾ ಗ್ರೂಪಿನವರಿದ್ದಾರೆ, ಅಲ್ ಖೈದಾದವರೆ, they have trained suicide squades. ಅಂದ್ರೆ ಇದಕ್ಕೊಂದು ರಾಜಕೀಯ ಸಿದ್ಧಾಂತ ಬೆರೆಸಿಬಿಟ್ರೆ ನೀವು, people are so mad about it. ಬಟ್ ಇಲ್ಲಿ ಅದಲ್ಲ ಇಲ್ಲಿ.

ಏನಂದ್ರೆ ಒಂದು ಜೀವನಕ್ಕೆ ಜೀವನದ ಎಲ್ಲಾ ದಾರಿಗಳೂ close ಆಗಿ ಬಿಟ್ಟಾಗ, ಒಂದು ಮುಂದುಗಡೆ ಇರೋ ಗೋಡೆಗೆ ಒದ್ದು ಒದ್ದು ನಾನು ದಾರಿ ಮಾಡ್ಕೋಬೇಕು. ಇಲ್ಲದಿದ್ರೆ ಅಲ್ಲೇ ಕೂತ್ಕೊಂಡು ಸಾಯ್ಬೇಕು ಅಷ್ಟೆ. ಸೊ, ಇವೆರಡರಲ್ಲಿ ಯಾವ್ದನ್ನು ಆಯ್ಕೆ ಮಾಡ್ಕೋತೀವಿ ಅನ್ನೋದು ನಮ್ಮ ವಿಲ್‌ಪವರ್‌ನಲ್ಲೇನೆ ಇರುತ್ತೆ ಅದು.

ಬಟ್ ಅದನ್ನ ತಂತ್ರವಾಗಿಯಂತೂ ನಾನದನ್ನ ಎಲ್ಲೂ ಬಳಸಿಕೊಂಡಿಲ್ಲ. ಮತ್ತೆ ನಾನು ಕತೆ ಬರೆಯೋವಾಗ ಒಂದು ಕತೆಗೂ ಇನ್ನೊಂದು ಕತೆಗೂ ನಾನು ಆ ತರ ಯೋಚ್ನೆ ಮಾಡಿ ಎಲ್ಲು ಬರೆದಿರೋಲ್ಲ. ಆಮೇಲೆ ಸಾಮಾನ್ಯವಾಗಿ ನಾನು ಕತೆ ಬರೆಯೋ ಅವಧಿ ಇದ್ಯಲ್ಲ, ಅದು ಜಾಸ್ತೀನೆ ಇರುತ್ತೆ. ಸಾಮಾನ್ಯವಾಗಿ ನೀವು ಕತೆಗಾರರನ್ನ ನೋಡಿದ್ರೆ ಆ ತರ prolific writer ಅಲ್ಲ ನಾನು. ಕೆಲವು ಕಡೆ ನಾನು ಮೂರು-ನಾಲ್ಕು-ಐದು ಕೆಲವು ಕಡೆ ಎಂಟೆಂಟು ವರ್ಷ ಗ್ಯಾಪಿದೆ ನನ್ನ ಒಂದು ಕತೆಗೂ ಇನ್ನೊಂದಕ್ಕು. ಈಗ ಹೆಚ್ಚು ಕಡಿಮೆ ಎರಡು ವರ್ಷದ ಮೇಲಾಯ್ತು ನಾನು ಕೊನೆಯ ಕತೆ ಬರೆದು. ಅಂದ್ರೆ ನಾನು ಕತೆ ಬರೆಯೋದೆ ಒಂದು ತುಡಿತ ಆಗಿರಲ್ಲ ನನಗೆ. ಒಂದು ಕತೆನ ನಾನು ಮೂರ್ನಾಲ್ಕು ವರ್ಷದಿಂದ ಬರೀಬೇಕು ಬರೀಬೇಕು ಅಂತ ತೀವ್ರವಾಗಿ ಅಂದ್ಕೋಳ್ತಾ ಇದ್ರುನು ಆಗ್ತಾ ಇಲ್ಲ ನನ್ಗದು. ಸೊ, unless i am convinced mentally myself that I have to write this, ನಾನು ಬರೀಲಿಕ್ಕೆ ಹೋಗಲ್ಲ. ಸೊ ಹೀಗಾಗಿ ಅದ್ರ ತಂತ್ರದ ಭಾಗವಾಗಿ ಎಲ್ಲೂ ಮುಂದುವರಿಸ್ಕೊಂಡು ನಾ ಬಂದಿರಲ್ಲ. ಅದೆಲ್ಲೊ subconscious levelನಲ್ಲಿ ಮತ್ತೆ ಮತ್ತೆ ಕೆಲವು ವಿಷಯಗಳು ಬರ್ತಾ ಇರಬೋದು. ಅಷ್ಟೊಂದು ನನ್ನ ಅದು ಕಾಡಿರಬಹುದು ಅಷ್ಟೆ.

ಮತ್ತೆ ಆತ್ಮನಿವೇದನೆಯ, ಅದು ಕೂಡ ತಂತ್ರವಾಗಿಯೇನೂ ಅಲ್ಲ. ಅಂದ್ರೆ ನನಗೆ ಒಂದನ್ನ ಆ ತನಕ ಹೇಳಿರೋ ರೀತೀಲಿ ಹೇಳೊಕ್ಕಾಗಲ್ಲ ಅನಿಸಿದಾಗ ಇದುವರೆಗೆ ಹೇಳಿರೋ ರೀತಿನ ಮತ್ತೆ ಮತ್ತೆ ಒಡೆದು ಇನ್ನೇನೊ ಹೇಳದೇ ಇದ್ರೆ ಅದನ್ನ ಹೇಳಕ್ಕಾಗಲ್ಲ ಅನಿಸಿದಾಗ ಹಾಗೆ ಮಾಡಿರಬಹುದು. ಸಮೀರನ ಸ್ವಗತಾನು ಅಷ್ಟೆನೆ. ಕತೆ ಬಹಳ bitter ಆಗಿ end ಆಗುತ್ತದು. ಆಮೇಲೆ ನನಗೂ ಗೊತ್ತಿಲ್ಲ ಏನಾಯ್ತು ಅಂತ. ಸೊ ನನ್ ಕತೆಗಳಲ್ಲಿ ಆ ತರದ್ದೊಂದು ಅಂತ್ಯಗಳನ್ನ ನಾನು ಯಾವತ್ತು ನಿರ್ಧಾರ ಮಾಡಿರಲ್ಲ. ಮತ್ತು ಈಗ ಸಾಧಿಸಿರೋ ಅಂತ್ಯಗಳು ಬಹಳಷ್ಟು ರೂಪಕಗಳು ಅವು. very suggestive and symbolic ends. They are not dead ends. They lived thereafter happily ಅಂತ ಇಲ್ವೇ ಇಲ್ಲ. ಅಂದ್ರೆ ಅಷ್ಟೆ ಇರುತ್ತೆ ಯಾವಾಗ್ಲು. ಜೀವನಾನು ಹಾಗೇ ಇರುತ್ತೆ. ಒಂದನ್ನು ನಾವು ಮುಕ್ತಾಯಗೊಳಿಸಿ ಅಲ್ಲಿಗೇ ಬಿಟ್ಟಿರಲ್ಲ ಯಾವ್ದುನು. ಬೆಳೆಯುತ್ತೆ ಆಮೇಲೆ. ಯಾವ್ದೇ ಒಂದು ಬರಿ issueನೆ ಆಗಬೇಕಾಗಿಲ್ಲ. ನಂಬಿಕೆಗಳು, ಮೌಲ್ಯ, ಭಾವನೆಗಳು ಅದು ಮತ್ತೆಲ್ಲೊ ಓಪನ್ ಆಗುತ್ತದು. ಸೊ, ಹಂಗೆ ನನಗೆ ಯಾವಾಗ್ಲು ಇಷ್ಟೇ ಮಾಡೋಕೆ ಸಾಧ್ಯ ಇದೆ ಇಲ್ಲಿ ಈ ಕ್ಷಣಕ್ಕೆ ಅನಿಸಿದಾಗ ನಾನು ಮುಗಿಸಿರ್ತೀನಿ ಅಷ್ಟೆ.

No comments: