Saturday, September 11, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಹನ್ನೆರಡು

ಅನಂತಮೂರ್ತಿಯವರ ಅವಸ್ಥೆ ಕಾದಂಬರಿಯಲ್ಲಿ ಅಣ್ಣಾಜಿ ಮತ್ತು ಕೃಷ್ಣಪ್ಪನ ಮಧ್ಯೆ ಒಂದು ಪುಟ್ಟ ಚರ್ಚೆ ನಡೆಯುತ್ತೆ. ಕ್ಷುದ್ರ ದೈನಂದಿನ ಅಂತ ಆ ಬಗ್ಗೆ ಕೃಷ್ಣಪ್ಪನ ಒಂಥರಾ ತಿರಸ್ಕಾರದ ಮಾತು ಮತ್ತು ಅದರಲ್ಲೇ ನಿಜವಾದ ಜೀವನದ ಸೌಂದರ್ಯ ಇದೆ ಅನ್ನೋ ತರ ಅಣ್ಣಾಜಿಯ ವಾದ. ನಿಮ್ಮ ಕೆಲವು ಟಿಪ್ಪಣಿಗಳು, ಸಾಮಾನ್ಯ ಜನರ ದೈನಂದಿನಗಳೇ ರೂಪಕಗಳನ್ನು ಒದಗಿಸುತ್ತವೆ ಎನ್ನುವಂಥವು ಮತ್ತೆ ಕತೆಗಳಲ್ಲಿ ನೀವು ಚಿತ್ರಿಸುವ ಬದುಕು ಎರಡೂ ಅಣ್ಣಾಜಿಯ ನಿಲುವನ್ನೇ ಎತ್ತಿ ಹಿಡಿತವೆ. ಇದನ್ನ ಸ್ವಲ್ಪ ವಿವರಿಸಬಹುದ?

ಕತೆ ಬರೆಯೋದಕ್ಕೆ ಒಂದು ಸಿದ್ಧ ಮಾದರಿ ಇರುತ್ತೆ. ಬೇರೆ ಬೇರೆ ತರದ ಸಿದ್ಧ ಮಾದರಿಗಳು. ಅವು ನಮ್ಮ ಒಂದು ಸಾಹಿತ್ಯಿಕ ಆಶಯಗಳನ್ನ ಪ್ರತಿನಿಧಿಸ್ತಾ ಇಲ್ಲ. ಪ್ರಥಮವಾಗಿ ಸಾಹಿತಿಯಾಗಿ ನೀವು ಇದನ್ನು ನೋಡೋದಾದ್ರೆ. ಪ್ರತಿನಿಧಿಸ್ತಾ ಇಲ್ಲ ಅಂತ ನಾನು ಅಂದುಕೊಂಡಾಗ ಮತ್ತೆ ಬರಹಗಾರನಾಗಬೇಕು ಇಲ್ಲದಿದ್ದರೆ ಬೇರೆ ಪರ್ಯಾಯ ನನಗಿಲ್ಲ ಅಂದುಕೊಂಡಾಗ ಈ ಪ್ರಶ್ನೆ ಮುಖ್ಯವಾಗುತ್ತೆ. ಬರಹಗಾರನಾಗಬೇಕು ಇಲ್ಲದಿದ್ದರೆ ಬೇರೆ ನನಗೇನೂ ಗೊತ್ತಿಲ್ಲ ಅನ್ನೋದು ನನ್ನ decision ಇದೆ. ನಂದು ಅಥವ ಯಾವ್ದೇ ಒಬ್ಬ ಬರಹಗಾರನದ್ದು. ಆವಾಗ ಅವನು ಈ comfort zoneನ್ನು ಪ್ರತೀ ಕ್ಷಣಾನು break ಮಾಡ್ತಾನೆ ಇರಬೇಕಾಗುತ್ತೆ.

ಆಮೇಲೆ ನಾನು ಬೆಳೆದಿರೋದೆ ಬರೀ ಅಂತಲ್ಲೆ. ಸೊ, ಈಗ ಜನಾ ಮಾತನಾಡೋದಿರುತ್ತಲ್ಲ, ಎಷ್ಟೊಂದು ರೂಪಕಗಳಲ್ಲಿ ಆಕರ್ಷಕವಾಗಿ ಮಾತಾಡ್ತಿರ‍್ತಾರೆ ಈ ಜನಗಳು ಅಂದ್ರೆ, ಅವರವರ ಪ್ರಾದೇಶಿಕ ನುಡಿಕಟ್ಟಿನಲ್ಲಿ. ಉತ್ತರ ಕರ್ನಾಟಕದ ಕಡೆ ಹೋದ್ರೆ ಅವರ ಬಹುಪಾಲು ಮಾತುಕತೆ ಗಾದೆಗಳಲ್ಲಿರುತ್ತೆ. ಗಾದೆ ಅಥವಾ ಒಡಪುಗಳಲ್ಲಿರುತ್ತೆ. ಅಂದ್ರೆ, ಕ್ಷುಲ್ಲಕ, ನಾವೇನು ಕ್ಷುದ್ರ ಜಗತ್ತು ಅಂತ ಹೇಳ್ತೀವಲ್ಲ, ಅಂಥ ಜಗತ್ತಿನ ವ್ಯವಹಾರದಲ್ಲು ಕೂಡ ಭಾಷೆಯನ್ನು ಒಂದು ರೂಪಕವಾಗಿ ಅನ್ನೋ ತರ ಅವರು ಬಳಸ್ತಾ ಇರ‍್ತಾರೆ.

Actually ಒಂದು ಯಕ್ಷಗಾನದಲ್ಲಿ ಇರುವ ಜನ ಅಥವಾ ಕಲಾವಿದರು, ಮುಖ್ಯವಾಗಿ ನಿಮ್ಮ ತಾಳಮದ್ದಲೆಯಂಥ ಪ್ರಕಾರದಲ್ಲಿ ಹೇಗೆ reconstruct ಮಾಡ್ತಾರೆ ಪುರಾಣವನ್ನ, ಮಹಾಕಾವ್ಯವನ್ನ ಅಂದ್ರೆ, ಅವರ personal ದ್ವೇಷಗಳು, ಅಸೂಯೆಗಳು, ಅವೆಲ್ಲ ಏನೇ ಇದ್ರುನು ಅದು ವೈಯಕ್ತಿಕ ಮಟ್ಟದಲ್ಲಿ ಇದ್ದೇ ಇದೆ. at the same time, ಅದು ಈ ಕಲೆಗೆ response ಆಗಿ ವೈಯಕ್ತಿಕವನ್ನು ಮೀರಿದ ವಿಶ್ವಮಟ್ಟದಲ್ಲೂ ಇದೆ. ಅವರ ವೈಯಕ್ತಿಕ ದ್ವೇಷ, ಅಸೂಯೆಗಳನ್ನ ಅವನು ತೀರಿಸಿಕೊಳ್ಳೋ ವಿಧಾನ ಇದೆಯಲ್ಲ, ಈ ಪ್ರಸಂಗಕ್ಕೆ ಅನ್ವಯ ಮಾಡಿ ಹೇಳೋವಾಗ ಅವನು ವೈಯಕ್ತಿಕ ನೆಲೆಯನ್ನ ಮೀರಿ ಬಿಟ್ಟಿದ್ದಾನೆ ಅದನ್ನು ಹೇಳಿದಾಗ. ಅದನ್ನು ಹೇಳುವ ಒಂದು ಕ್ಷಣ ಇದೆಯಲ್ಲ, ಅದನ್ನ ವಿಶ್ವಮಟ್ಟಕ್ಕೇರಿಸ್ತಾ ಇದಾನವನು. ಆ ತರಾನೇ ಕೇಳ್ತಾನವನು. ಒಳಗಡೆ ಎಷ್ಟೇ ಈರ್ಷ್ಯೆ ಇದ್ರುನು, ಕೇಳಬೇಕಾದಾಗ ಆ ತರ ಕೇಳಲ್ಲ ಅವನು. ಅಷ್ಟೊಂದು ರೂಪಕವಾಗಿ ಅವನು ಕೇಳ್ತಾ ಇದ್ದಾನೆ.

ಸೊ, ಜನಸಾಮಾನ್ಯರು actually ಅದೇ ತರಾನೆ ಜೀವನ ಮಾಡ್ತಾ ಇರ‍್ತಾರೆ. ನಾವು ಅವರನ್ನ ಪ್ರತ್ಯೇಕವಾಗಿ ಗುರುತಿಸಬೇಕಾದ ಅಗತ್ಯವಿರಲ್ಲ. ಅದಕ್ಕೆ ನನ್ನ ಕತೆಗಳಲ್ಲಿ ಕಥಾನಕ ಮುಖ್ಯವಾಗಲ್ಲ. ಹೋದವಾರ ಒಂದು ಕಡೆ ಚರ್ಚೆಗೆ ಹೋದಾಗ ಒಬ್ಬರು ಕೇಳಿದ್ರು. ಕಥಾವಸ್ತುವಿರಲ್ಲವಲ್ಲ ನಿಮ್ಮ ಕತೆಗಳಲ್ಲಿ; ಮತ್ತು ಭಾಷೆ ಬೇರೆ ಕಥೆ ಬೇರೆ ಅನ್ನೋ ತರ ಇರುತ್ತೆ, ಅದು ಅಷ್ಟು ಚೆನ್ನಾಗಿಲ್ಲ ಅದು, ಅಷ್ಟು ಸರಿಯಲ್ಲ ಅದು ಅಂತ, ಅವ್ರುನು ಒಬ್ಬ ಕತೆಗಾರ್ರು ಹೇಳಿದ್ರು. ನಾ ಹೇಳ್ದೆ ಅವರಿಗೆ, ಘಟನೆಗಳು ಅಥವಾ ಸಂಗತಿಗಳು - ಅವೇ ಕತೆಗಳು ಅಂತ ನಾನು ತಿಳ್ಕೊಂಡಿಲ್ಲ. ಬೇರೆಯವ್ರು ತಿಳ್ಕೊಂಡಿರಬಹುದು. ಸೊ, ಅದರ ಮೂಲಕ ನನಗೆ ಏನು ಒಂದು ವ್ಯಕ್ತಿವಿಶಿಷ್ಟತೆ ಇದೆಯಲ್ಲ, again ಅದು ಬಂದಿರೋದು ಸಮಾಜದಿಂದ, ನಂದೇನೂ ಇಲ್ಲ. ನಂದು ಸ್ವಲ್ಪ ಪರಿಶ್ರಮ ಇದೆ, ಓದೋದು ಮತ್ತು ಅದರ ಬಗ್ಗೆ ಯೋಚನೆ ಮಾಡೋದು - ಇದು ನನ್ನ ಪರಿಶ್ರಮ. ಅವ್ರು ಕೊಟ್ಟಿರೋದಿದ್ಯಲ್ಲ, ಭಾಷೆ, ಹಾಗೆ ಭಾಷೇನೆ ಒಂದು ರೂಪಕ ಹಾಗೆ ನೋಡಿದ್ರೆ. ಭಾಷೆ ಮತ್ತು ಭಾವನೆಗೆ ಬಹಳ ತೆಳುವಾದ ಒಂದು ಗೆರೆಯಿದೆ, ಕೂದಲಷ್ಟು ತೆಳು. ಅವೆರಡೂ ಬೇರೆ ಬೇರೆನೆ ಅಲ್ಲ ಅನ್ನೊ ತರ ಇರುತ್ವೆ, ಬಟ್ ಬೇರೆ ಬೇರೆನೆ ಅವು. ಇನ್ನು ಎಷ್ಟೋ ಸಲ ಭಾಷೆಯ ಅಗತ್ಯಾನೆ ಇರೋಲ್ಲ. ಈಗ ಸಣ್ಣಮಳೆ ಬರ‍್ತಾ ಇದೆ ಅಂತ ಇಟ್ಕೊಳ್ಳಿ. ನಾವು ಇಲ್ಲಿ ಕಿಟಕಿ ಪಕ್ಕ ನಿಂತು ನೋಡ್ತಾ ಇದ್ರೆ..... ಅದ್ರಿಂದ ತೊಂದ್ರೆ ಅನುಭವಿಸ್ತಾ ಇರೋವನಿಗೆ ಅದು ಬೇರೆ ತರಾನೆ ಇರುತ್ತೆ ಅದು ಬಿಡಿ. ಸುಮ್ನೆ ನೋಡ್ತಾ ಇರೋವ್ನಿಗೆ ಅದು ಏನೇನೊ ನೆನಪಿಸ ಬಹುದು ಅವ್ನಿಗೆ, ನೆನಪುಗಳು ಎಲ್ಲೆಲ್ಲೊ ಲೀಡ್ ಮಾಡುತ್ತೆ. ಭಾವುಕವಾಗಿ, ಭಾವನೆ ಮೂಲಕ. ಸೊ, ಅದ್ರಿಂದ ಪಡೆಯೋ ಆನಂದ ಇದ್ಯಲ್ಲ ಅವ್ನಿಗೆ ಅದಕ್ಕೆ ಭಾಷೆಯ ಅಗತ್ಯ ಇಲ್ಲ. ಭಾಷೆ ಯಾವಾಗ ಅಗತ್ಯ ಬರುತ್ತಂದ್ರೆ, ಅದನ್ನ ಇನ್ನೊಬ್ನಿಗೆ communicate ಮಾಡ್ಬೇಕಂದಾಗ ಭಾಷೆಯ ಅಗತ್ಯ ಬರುತ್ತೆ. ಸೊ, ಇಲ್ಲಿ ಏನ್ಮಾಡ್ತಾರಂದ್ರೆ ಯಾವಾಗ್ಲುನು ರೂಪಕಗಳಲ್ಲಿ, ಸಾಮಾನ್ಯ ಜನರ ಬಗ್ಗೆ ನಾನು ಹೇಳೋದು ನಾನಿದನ್ನ.

ಸುಮ್ನೆ ಜಗಳ ಆಡ್ಬೇಕಾದ್ರುನು ತೀರಾ ಭಾವುಕವಾಗಿ ಕುಸಿದಾಗ ಜನ ಬಯ್ಯೋಕೆ ಸುರುಮಾಡ್ತಾರೆ. ಅಲ್ಲಿಯವರೆಗುನು ಜಗಳ ಯಾವ ತರದಲ್ಲಿರುತ್ತೆ ಅಂದ್ರೆ ಬಹಳ ರೂಪಕವಾಗಿರುತ್ತೆ. ನೀನು ಹಂಗ್ಮಾಡಿದಿ, ಹಿಂಗ್ಮಾಡಿದಿ... ಆತರದ್ದೇನೊ ಲಿಂಕ್ ಇರುತ್ತೆ. ಅದಕ್ಕೆ, ಆ ಲಿಂಕೇ ಏನಿದೆ, ಅದು accumulate ಮಾಡಿ ಜಗಳಕ್ಕೆ contribute ಮಾಡುತ್ತೆ. ಆ ಲಿಂಕೇ ನಿಜವಾದ ಜಗಳಕ್ಕೆ ಕಾರಣ ಅಲ್ಲ. ರೂಪಕಗಳೇ ಜಗಳಕ್ಕೆ ಕಾರಣವಾಗಿದೆ. ಸೊ, ಈ ಜನಜೀವನದ ಅತ್ಯಂತ ಕ್ಷುಲ್ಲಕ ಸಂಗತಿಗಳು, ವಿಚಾರಗಳು ಅಥವಾ ಜೀವನವೆ ಇದೆಯಲ್ಲ. ಅದು, ಸುಮ್ನೆ ನೀವದನ್ನ ಗಮನಿಸ್ತಾ ಹೋದಾಗ ಮಾತ್ರ ನಿಮಗನಿಸುತ್ತೆ. ನೀವದರ ಭಾಗವಾಗಿದ್ದಾಗ actually ನಿಮಗೆ ಹಾಗನಿಸಲ್ಲ. ಅದರ ಮಹತ್ವ ಯಾವಾಗ ಬರುತ್ತೆ ಅಂದ್ರೆ ಅದನ್ನ ನೀವು ರೆಕಾರ್ಡ್ ಮಾಡ್ಬೇಕಾದ್ರೆ ಅದನ್ನ ನೀವು ರೂಪಕವಾಗಿ ಗ್ರಹಿಸ್ತೀರಿ. ಅಂದ್ರೆ ಈಗ ‘ಹೊಳೆಬದಿಯ ಬೆಳಗು’ ಕತೆಯಲ್ಲಿನೆ ಇರಬಹುದು, ಅಥವಾ ‘ನೀಲಿ ಆಕಾಶದ ಹಣ್ಣು’ ಕತೆಯಲ್ಲಿನೆ ಇರಬಹುದು. even ಹಶಂಬಿ ಇದೆಯಲ್ಲ, ಅದನ್ನು ಆವಾಗ ನಾನು actually ಪ್ರಜ್ಞಾಪೂರ್ವಕವಾಗಿನೆ ಬರ‍್ದಿದೀನಿ. ಅದರ ದೈನಂದಿನ ಕ್ಷುಲ್ಲಕ ಎನ್ನಬಹುದಾದ ವಿವರಗಳಿವೆಯಲ್ಲ. ತಮ್ಮನಿಗೆ ಸ್ನಾನ ಮಾಡಿಸೋದು, ತಲೆ ಬಾಚೋದು ಇದೆಲ್ಲ ಇದ್ಯಲ್ಲ, ಇದು ಅವಳ ಜೀವನಕ್ಕೆ ಒಂದು ಅತ್ಯಂತ ಸಂಭ್ರಮವನ್ನ ಆ ಕ್ಷಣಕ್ಕೆ ತಂದ್ಕೊಡುತ್ತೆ. ಉಳಿದಿದ್ದೇನೂ ಇಲ್ಲ ಅವಳಿಗೆ, ಅದೇ ಜೀವನದ ಸಂತೋಷ. ಅವನನ್ನ ಹಾಗೆ ಚೇಸ್ ಮಾಡ್ಕೊಂಡು, ಅದು actually ಬಹಳ picturesque ಇದೆ ಅದು. ಅದನ್ನ ಹಂಗೇ imagine ಮಾಡಿ ನಾನದನ್ನ ಬರೆದಿದೀನಿ. ಅಂದ್ರೆ ಜನರ ಜೀವನದಲ್ಲೆನೆ ಎಲ್ಲಾ ಇರುತ್ತೆ actually. ಸೊ, ಅದನ್ನ ನೀವು ಪ್ರತ್ಯೇಕವಾಗಿ ನಿಮಗದರ ಅನುಭವ ಇಲ್ದೆ ನೀವದನ್ನ ರೂಢಿಸಿಕೊಳ್ಲಿಕ್ಕೆ ಹೋದಾಗ ಕಷ್ಟ ಆಗುತ್ತೆ. ಬಟ್ ನನಗೆ ಅದು ಯಾವತ್ತಿಗು ಕಷ್ಟ ಆಗಿಲ್ಲ ಯಾಕಂದ್ರೆ ಅವರ ಜೊತೆಗೇನೆ ನಾನು ಬೆಳೆದು ಬಂದಿದೀನಿ. ಆಮೇಲೆ ಬಹಳ ರೂಪಕಗಳಲ್ಲಿ ಮಾತಾಡ್ತಾರೆ ಜನ. ಮಾತಾಡ್ಬೇಕಾದ್ರೆ, ಸಾಮಾನ್ಯ ಜನ. ಈಗ ಬಸ್ಸುಗಳಲ್ಲಿ ಕುಳಿತಾಗ ಮಾತಾಡೋದು ನೋಡಿದ್ರೆ ನೀವು, ಸಾಮಾನ್ಯ ಜನ, ಕ್ಷುಲ್ಲಕ ವಿಷಯಗಳು ಏನೇ ಇರಬಹುದು. ಮತ್ತೆ ಏನೋ ಒಂದು almost enlightend buddhaನ ತರ ಮಾತಾಡ್ತ ಇರ‍್ತಾರೆ. ಸೊ, ಆವಾಗೆಲ್ಲ ನಮ್ಮಷ್ಟು ಶ್ರಮವೇ ಇಲ್ಲ ಅವರಿಗೆ, ಬೌದ್ಧಿಕವಾಗಿ. ಬಟ್ ಅವರ ಅನುಭವದಿಂದ ಅದೆಂಗೆ ಬಂದಿರ‍್ತದೆ ಅಂದ್ರೆ ಅವ್ನು ಎಲ್ಲನು ಒಂಥರ just passing comment ತರ ಮಾಡ್ತಾ ಇರ‍್ತಾನವ್ನು.

ಸೊ, ಅದನ್ನ ನೀವು ಸ್ವಲ್ಪ ಎಚ್ಚರದಿಂದ ನೋಡ್ಬಿಟ್ರೆ ಸಾಕು, ಅದು ಸಿಕ್ಬಿಡ್ತದೆ ನಿಮ್ಗೆ. ಅದನ್ನ ಹುಡ್ಕೊಂಡು ಹೋಗ್ಬೇಕಂತ ಏನಿಲ್ಲ. ಯಾವಾಗ ಹುಡಿಕ್ಕೊಂಡೋಗ್ಬೇಕಾಗುತ್ತಂದ್ರೆ, ಬರೀ ಅದನ್ನೆ ಒಂದು ಹಿಪೊಕ್ರಟಿಕ್ ನೆಲೆ ಇರುತ್ತೆ ನೋಡಿ, ಭಾಷೆಗೆ. ಬರೀ - ‘ಸೂಕ್ಷ್ಮತೆ’ - ಮಾತಾಡಿಬಿಟ್ರೆ ಆಗಲ್ಲ. ಅಲ್ಲಿ ಬರುತ್ತೆ. ಅವ್ನು ನಿನಗಿಂತ ಜಾಸ್ತಿ ಸೂಕ್ಷ್ಮಸಂವೇದಿಯಾಗಿಯೇ ಇದ್ದಾನೆ.

ಅಲ್ಲಿ ಬರುತ್ತೆ ನೋಡಿ, ಯಾವ್ದೊ ಒಂದು ಕತೆಯಲ್ಲಿ ಬರೋ ಆ ಬೋಲ್ಡಿಬಾಬಂಗು, ಆ ಇವ್ಳಿಗೂ ಮತ್ತು ಆ ಮುದುಕಿಗು ಸಂಬಂಧವೇ ಇಲ್ಲ. ಬಟ್ ಒಂದು ಹಂತದಲ್ಲಿ ಅವ್ನು ಚಾ ತಂದುಕೊಡೋದಿದ್ಯಲ್ಲ. ಅದು ವಾಸ್ತವಿಕ ನೆಲೆಯಲ್ಲಿ ಭಾಳ ಒಂದು ಡ್ರಾಬ್ ಅನ್ನೋ ತರ ನಡೀತಾ ಇರುತ್ತದು. ಸುಮ್ನೆ ನೀವದನ್ನ ನೋಡ್ದಾಗ, ಒಂದು ಟೀ ತಗೊಂಡು ಹೋಗಿ ಹಿಂಗ್ ಕೊಡೋದಿದ್ಯಲ್ಲ, ಅದು ನೋಡೋವ್ನಿಗೆ ಬರಿ ಡ್ರಾಬ್ ಅದು. ಏನಿಲ್ಲ ಅಲ್ಲಿ. ಬಟ್ ಅವನು ಕೋಡೋವ್ನಿಗೆ ಭಾವುಕ ನೆಲೆಯಲ್ಲೆ ಇದೆ ಅದು. ಸೊ, ಅದನ್ನ ನಾನು ಗ್ರಹಿಸ್ತೀನಿ. ಸೊ, ಅದನ್ನ ತಗೊಂಡು ಹೋಗಿ ಕೊಡ್ಬೇಕಾದ್ರೆ ಒಂದು emotional process ಇದೆ. ಕಣ್ಣಲ್ಲಿ ನೀರಿರುತ್ತೆ, ಅನ್ನೊವಂಥದ್ದೇನೊ, ಸನ್ನಿವೇಶಗಳು ಬೇರೆ ಏನೊ ಇರುತ್ತೆ. ಆದ್ರೆ ಅಲ್ಲಿ, ಆ ಕ್ಷಣ ಅವ್ನಿಗೆ ಗೊತ್ತಿರುತ್ತದು, ಅನುಭವಿಸ್ತಾ ಇದಾನವ್ನು. ಏನೋ ನಾವು ಕೆಲವು ಕತೆಗಳನ್ನೋದಿದಾಗ ನಮಗೆ ಹಂಗೆ ಆಗುತ್ತೆ. ತುಂಬ ಭಾವುಕವಾಗಿ distrub ಆಗಿ ಬಿಡ್ತೀವಿ. ತುಂಬ ಹೊತ್ತು ಬೇಕಾಗುತ್ತೆ ಸುಧಾರಿಸಿಕೊಳ್ಳೋಕೆ. ಸೊ, ಯಾಕಂದ್ರೆ ಅಷ್ಟೊಂದು powerful images ಮತ್ತು ರೂಪಕಗಳನ್ನವರು ಜೀವನದಿಂದನೆ ಪಡೆದಿದಾರೆ. ಮತ್ತು ಸೋಸಿರ‍್ತಾರೆ ಅದರಲ್ಲಿ.

ಹಂಗಂಗೆ ತಗೊಂಬಂದು ಬರೇ ಒಂದು ಸುಮ್ನೆ ಜನ ಮಾತಾಡೊ ತರನೆ ಹಾಗೇ ಬರೆದ್ರೆ ಅದರಲ್ಲಿ ವಿಶೇಷವಾದ್ದು ಏನಿರಲ್ಲ. ಏನಿರುತ್ತೆ, ಬರೆ ಅಲ್ಲಿರೋದನ್ನ ನೀನು ಬರೆದಿದೀಯ, reproduce ಮಾಡಿದೀಯ. ಬಟ್ ಕಲಾವಿದ ಆದವನಿಗೆ ಇನ್ನೂ ಒಂದು ಸಣ್ಣ ಜವಾಬ್ದಾರಿ ಇರುತ್ತೆ. ಗುರುತರ ಅಂತ ನಾನು ಹೇಳಲ್ಲ. ಆ ರೂಪಕವನ್ನು ಅವನು actually ಸೋಸಿರಬೇಕಾಗಿರುತ್ತೆ. ಅಲ್ಲೇನೊ ಒಂದಿದೆ. ಅದನ್ನು ಸೋಸಿಬಿಟ್ಟು ಅದನ್ನು ಕೊಟ್ಟಾಗ actually ಈ ತರ ಇತ್ತು. ಅದನ್ನ ಮಾಡ್ಬೇಕಾದಾಗ ಈ ತರ ಇರ‍್ಲಿಲ್ಲ. ಬಟ್ ಅವನ intention ಈ ತರ ಇದೆ. ಅವನು ಬೆಳಗ್ಗೆ ಬೆಳಗ್ಗೆನೆ ಆ ಒಂದು ಧಾವಂತದಲ್ಲಿ ಟೀ ತಗೊಂಡು ಅವರನ್ನೆಲ್ಲ ಎಲ್ಲಿದ್ದಾರೊ ಹುಡ್ಕೊಂಡು ಹೋಗಿ ಅದನ್ನ ಕೊಡ್ಬೇಕಾದ್ರೆ, ಕೊಡ್ಬೇಕಾದ ಕ್ರಿಯೆಯಲ್ಲಿ ನಿನಗಾತರ ಕಾಣ್ತಾ ಇಲ್ಲ. ಬಟ್ ನೀನದನ್ನ ಅದಿಷ್ಟನ್ನ ತಗೊಂಡ್ ಬಂದು ಅದನ್ನ ಈಕಡೆ ಇಟ್ಟು ನೋಡಿದ್ರೆ, ಗೊತ್ತಾಗುತ್ತೆ. ಎಷ್ಟು ಭಾವನೆ ಇತ್ತು ಅದರಲ್ಲಿ, ಎಷ್ಟು ಅವನು ಫೀಲ್ ಮಾಡಿದಾನೆ. ಎಷ್ಟು ಆತಂಕದಿಂದ ನೋಡಿದಾನೆ ಸನ್ನಿವೇಶವನ್ನ ಅನ್ನೋದು ನಮಗೆ ಗೊತ್ತಾಗುತ್ತೆ. ಸೊ, ಅದು ಬಹಳ ಮುಖ್ಯ ಅಂತ ನನಗನಿಸುತ್ತೆ. ಯಾಕಂದ್ರೆ, ಎಲ್ಲೋ ಒಂದ್ಕಡೆ ನಾನು ಬರ‍್ದಿದೀನಿ, ಈ ನಮ್ಮನೇಲಿ ನಮ್ಮಕ್ಕಂದಿರು ರಂಗೋಲಿ ಹಾಕೋರು. ಹಾಂ, ಈ ರಂಗೋಲಿ ಕಲ್ಲುಗಳನ್ನ ಮಾರ‍್ತಾರೆ ನಮ್ಕಡೆ. ಕಲ್ಲುಗಳು ಗುಡ್ಡಗಳಲ್ಲಿರುತ್ವೆ. ರಂಗೋಲಿ ಗುಡ್ಡಗಳೇ ಇರುತ್ವೆ ನಮ್ಕಡೆ. ಅಲ್ಲಿಂದ ಇಷ್ಟಿಷ್ಟು ಕಲ್ಲುಗಳನ್ನ ತಂದು ಮಾರ‍್ತಾರೆ. ನಮ್ಮಕ್ಕಂದಿರು ಏನ್ಮಾಡೋರಂದ್ರೆ ಅವನ್ನ ಒಂದು ಒರಳಲ್ಲಿ ಹಾಕಿ ಕುಟ್ಟೀಕುಟ್ಟೀಕುಟ್ಟಿ ಈ ಬಟ್ಟೆಯಲ್ಲಿ ಸೋಸೋವ್ರದನ್ನ. ಕೊನೇಗೆ ರಂಗೋಲಿಯಾಗುತ್ತೆ ಅದು. ಬಟ್ ಸುಮ್ನೆ ನೀವು raw ಆಗಿ ಅದನ್ನ ನೀವು ನೋಡಿದ್ರೆ ಏನಿಲ್ಲ ಅಲ್ಲಿ. ಕಲ್ಲಿಗೇನು ಬೆಲೆಯಿರಲ್ಲ. ರಂಗೋಲಿ ನೋಡಿದ್ರೆ ನೀವು, ರಂಗೋಲಿಗೆ ರೂಪಕಗಳ ಶಕ್ತಿಯಿದೆ. ಏನೆಲ್ಲ ಬಿಡಿಸ್ಬೋದು ನೀವು. ನಿಮ್ಮ imagination ನಲ್ಲಿ ಏನಿದೆ ಅಷ್ಟನ್ನು ಅದು ನಿಮ್ಮ ಎದ್ರುಗಡೆ ಪ್ರಸ್ತುತಪಡಿಸುತ್ತೆ. ಸೊ, ನಿಮ್ಮ ಮನಸ್ಸಿನಲ್ಲೇನಿದೆ, ಆ imaginationಅನ್ನು, ಅಷ್ಟುನು. ಅದನ್ನ ಬಿಡಿಸೋಕೆ ನಿಮಗೆ ರಂಗೋಲಿ ಬೇಕಾಗುತ್ತೆ. ಸೊ, ಭಾಷೆನೂ ಅಷ್ಟೆನೆ. actually ಭಾಷೇನೆ ಒಂದು ರೂಪಕ ಅಂತ ಯಾವಾಗ್ಲು ಅನಿಸ್ತಾ ಇರುತ್ತೆ ನನಗೆ.

ಸೊ ಇಷ್ಟೊಂದು ವಿವರಗಳು ಯಾಕೆ ಬರುತ್ತೆ, ಬೇಕಾಗಿತ್ತ ಇದು, ಇಪ್ಪತ್ತು ಪೇಜಿನಲ್ಲಿ ಬಂದಿದೆ ಅದು. ಹೆಚ್ಚಾಯ್ತಲ್ಲ ಅದು? ಬಟ್ ನನಗೆ ಅದೇ ಮುಖ್ಯ. ನಾನು ಈ ಒಂದೇ ಲೈನಿನಲ್ಲಿ ಹೇಳ್ಬೇಕಾದ್ರೆ ಆ ಕತೆ, ಕತೆಯಲ್ಲಿ ಈ ಹಶಂಬಿ ಮತ್ತು ಅವರೆಲ್ಲ ಉರೂಸಿಗೆ ಹೋಗಿ ವಾಪಾಸ್ ಬಂದ್ರು, ಆಮೇಲೆ ಅವರ ಜೀವನದಲ್ಲಿ ಒಂದಷ್ಟು ದುರಂತಗಳು ನಡೆದ್ವು. ಅಷ್ಟೆ ಕತೆ ಅದು. ಬಟ್ ಅಷ್ಟು - ನಲವತ್ತು ಪೇಜ್ ಯಾಕೆ ಬರೀಬೇಕಾಗಿತ್ತು ನಾನು? ಆದ್ರೆ ಅಷ್ಟೇ ಹೇಳೋದು ನನಗೆ ಬೇಕಾಗಿಲ್ಲ. ಸಂಗತಿಯನ್ನ ನಾನು ಹೇಳೋಕೆ ಇಷ್ಟ ಪಡಲ್ಲ. ಅದರ ಮಧ್ಯೆ ಅವರ ಜೀವನದಲ್ಲಿ ಏನೇನೇನೋ ಇದೆಯಲ್ಲ, ಅದೆಲ್ಲವನ್ನು ಅರ್ಥ ಮಾಡಿಕೊಳ್ಳೊಕೆ ಪ್ರಯತ್ನ ಪಟ್ಟಿದೀನಿ. ಈ ಕ್ಲೀಷೆಯ ಮಾದರಿಗಳು ಬೇಡ ಅಂತ ಈ ತರದ ಒಂದು ಮಾದರಿಯನ್ನ ಒಪ್ಕೊಂಡಿದೀನಿ.ಅವರ ದೈನಂದಿನದಲ್ಲೇ ಇರುತ್ತೆ ಸಂಭ್ರಮ ಆ ತರ. ಇನ್ನು ಈ ‘ನಕ್ಷತ್ರಯಾತ್ರಿಕರು’ ಇದೆಯಲ್ಲ. ನನಗೆ ಆ ವಯಸ್ಸಿನಲ್ಲಿ ಸಿನಿಮಾ ನಾಟಕ ನೋಡೋ ಸಿಕ್ಕಾಪಟ್ಟೆ ಹುಚ್ಚು. ಸಿನಿಮಾಗಳನ್ನ, ದಿನಕ್ಕೆರಡು ಸಿನಿಮಾ ನೋಡ್ತಾ ಇದ್ದಿದ್ದು ಇತ್ತು. ಮತ್ತು ಅಲ್ಲಿ, ನಾಟಕ ಕಂಪೆನಿಗಳು ತುಂಬಾ ಇವೆ. ಯಕ್ಷಗಾನದಲ್ಲು ಅಷ್ಟೆನೆ. ಗಂಟೆಗಟ್ಲೆ ಮೇಕಪ್ ಮಾಡ್ಕೊಳ್ತಾರೆ ನೋಡಿ. ಪ್ರತಿದಿವ್ಸ ಒಂಭತ್ತಕ್ಕೆ ಷೋ ಇದ್ರೆ, ಸಂಜೆ ಆರು ಏಳು ಗಂಟೆಗೆಲ್ಲ ಈ ಬಣ್ಣ ಹಚ್ಚಿಕೊಳ್ಳೋ ಕೆಲಸ ಸುರುಮಾಡ್ತಾರೆ. ನಾವು ದಿನಾ ಹೋಗಿ ಕೂತ್ಕೊಳ್ಳೋದಲ್ಲಿ ಸುಮ್ನೆ. ಅಂದ್ರೆ ನಾನೊಂದು imagination ಮಾಡ್ಕೊಂಡ್ರಿತಿದ್ನಲ್ಲ, ಅದ್ಕೇನಾದ್ರು ಸಿಗುತ್ತಾ ಅಂತ ನೋಡ್ತಾ ಇರೋದು. ಆಮೇಲೆ ಸ್ಟೇಜ್ ಮೇಲೆ ಬಂದ್ರೆ ಬೇರೆನೆ. ಅವೆಲ್ಲವು ಎಲ್ಲೋ ಭಾಳಾ ಕಾಡ್ತಾ ಇರೋ ರೂಪಕಗಳು ಅವು ನನಗೆ. ಅವ್ರ ಆ ಸಿದ್ಧತೆ ಇದೆಯಲ್ಲ, ಅದ್ರಲ್ಲಿ ಎಷ್ಟು ತಲ್ಲೀನತೆ ಮತ್ತು ಸಂಭ್ರಮ ಇರುತ್ತಂದ್ರೆ ಅವ್ರಿಗೆ.... stage performance ಇದೆಯಲ್ಲ, ಅದು ಆ ಕ್ಷಣಕ್ಕೆ ನಿರ್ಧಾರವಾಗೋದು, ಅವನ ಪ್ರತಿಭೆ. ಬಟ್ ಇದು ಇದೆಯಲ್ಲ, ಇದ್ರಲ್ಲೆ ಅವನ, ಯಕ್ಷಗಾನ ಕಲಾವಿದ್ರು ಕೆಲವ್ರು ಮೇಕಪ್ ಮಾಡ್ಕೊಳ್ಳೋದು ನಾನು ನೋಡಿದೀನಿ. ಏನೋ ಫಿಲ್ತಿ ಜೋಕ್ಸ್ ಹೊಡೀತಾ ಇರ‍್ತಾರೆ, ಬಯ್ಕೋತಾರೆ, ಇನ್ನೊಂದೇನೊ ಮಾಡ್ತಾ ಇರ‍್ತಾರೆ. ಅದು ಕ್ಷುಲ್ಲಕ ಜಗತ್ತೇ ಹೊರಗಡೆ ಕಾಣೋವಾಗ. ಬಟ್ ನನಗೆ ಆತರ ಕಾಣಲ್ಲ. ಯಾಕಂದ್ರೆ ಅವನ ಜೀವನ ಅಲ್ಲೆ ಇದೆ. ಹಾಗೆ ನನ್ನ ಕತೆಗಳಲ್ಲಿ ವಿವರಗಳು ಸ್ವಲ್ಪ ಜಾಸ್ತಿಯೆನಿಸಿ ಕಿರಿಕಿರಿಯಾದ್ರೆ, ಸ್ವಲ್ಪ patience ನಿಂದ ಓದ್ರಿ ಅಂತ ನಾನು ಹೇಳ್ಬೋದಷ್ಟೆ!ಚಿತ್ರಕೃಪೆ :ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2006 ಮತ್ತು 2008

No comments: